ಬೆಂಗಳೂರು: ಕೊರೊನಾದಿಂದ ಖಾಸಗಿ ಆಸ್ಪತ್ರೆಗಳ ಅಮಾನವೀಯ ಘಟನೆಗಳು ಪ್ರತಿದಿನ ಬೆಳಕಿಗೆ ಬರುತ್ತಿದೆ. ಇದರಿಂದ ಎಚ್ಚೆತ್ತ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಗೆ ನೀಡಿತ್ತು. ಆದರೆ ಸರ್ಕಾರದ ಖಡಕ್ ಎಚ್ಚರಿಕೆಗೂ ಖಾಸಗಿ ಆಸ್ಪತ್ರೆಗಳು ಕ್ಯಾರೇ ಅನ್ನುತ್ತಿಲ್ಲ. ಈಗಲೂ ರೋಗಿಗಳು ಬಂದರೆ ಬೆಡ್ ಇಲ್ಲ ಎಂದು ವಾಪಸ್ ಕಳುಹಿಸುತ್ತಿದ್ದಾವೆ.
ಖಾಸಗಿ ಆಸ್ಪತ್ರೆಗಳ ಜೊತೆಗೆ ಸಿಎಂ ಯಡಿಯೂರಪ್ಪ ಸಭೆ ನಡೆಸಿ ಒಂದು ತಿಂಗಳು ಆಯ್ತು. ಒಂದು ತಿಂಗಳಾದರೂ ಬೆಂಗಳೂರಲ್ಲಿ ಖಾಸಗಿ ಆಸ್ಪತ್ರೆಗಳು ಮಾತು ಕೇಳುತ್ತಿಲ್ಲ. ರೋಗಿ ಎಷ್ಟೇ ಸೀರಿಯಸ್ ಆದರೂ ಬೆಡ್ ಇಲ್ಲ ಎಂದು ಹೇಳುತ್ತಿದ್ದಾವೆ. ಅಲ್ಲದೇ ಆಸ್ಪತ್ರೆಯ ಮುಂದೆ ಬೆಡ್ ಖಾಲಿ ಇಲ್ಲ ಎಂದು ಬೋರ್ಡ್ ಹಾಕಿದ್ದೀವಿ ನೋಡಿ ಎಂಬ ಉಡಾಫೆ ಉತ್ತರವನ್ನು ಕೊಡುತ್ತಿದ್ದಾವೆ.
Advertisement
Advertisement
ಇದೀಗ ಖಾಸಗಿ ಆಸ್ಪತ್ರೆಯ ರಹಸ್ಯ ಕಾರ್ಯಾಚರಣೆಯನ್ನು ಪಬ್ಲಿಕ್ ಟಿವಿ ಮಾಡಿದೆ. ಇದರಿಂದ ಆಸ್ಪತ್ರೆಗಳ ಕಳ್ಳಾಟದ ಕಹಾನಿ ಬಟಾಬಯಲಾಗಿದೆ.
ಸ್ಟಿಂಗ್ – 01
ಪ್ರತಿನಿಧಿ – ಪೇಷೆಂಟ್ ಇದ್ರು ಆಸ್ಪತ್ರೆಗೆ ಸೇರಿಸಬೇಕಿತ್ತು.
ಆಸ್ಪತ್ರೆ ಸಿಬ್ಬಂದಿ – ನಂಬರ್ ತಗೊಳ್ಳಿ ಈ ನಂಬರ್ಗೆ ಕಾಲ್ ಮಾಡಿ.
ಪ್ರತಿನಿಧಿ – ಆಸ್ಪತ್ರೆ ಸಿಬ್ಬಂದಿ ಬೆಡ್ ಇಲ್ಲ ಅಂದ್ರು.
ಸಿಬ್ಬಂದಿ – ನಮ್ಮ ಹತ್ರ ಇಲ್ಲ ಬೆಡ್, ನೀವು ಒಳಗಡೆ ಹೋಗಿ ಕೇಳಿದ್ರೂ ಇದೇ ಉತ್ತರ ಹೇಳೋದು.
ಪ್ರತಿನಿಧಿ – ಒಂದು ಬೆಡ್ ಇಲ್ವಾ ಒಳಗಡೆ? ಆಕ್ಸಿಜನ್ ಕೂಡ ಬೇಕಾಗಿದೆ.
ಸಿಬ್ಬಂದಿ – ಬೆಡ್ಗಳು ಇಲ್ಲ. ಇಲ್ನೋಡಿ ಝೀರೋ ಬೆಡ್ ಅಂತ ಬರೆದಿದ್ದೇವೆ. ಒಂದೊಂದು ಗಂಟೆಗೂ ಅಪ್ಡೇಟ್ ಮಾಡುತ್ತೀವಿ, ಬೋರ್ಡ್ ಹಾಕಿರೋದು ನೋಡಿ. 104 ಬೆಡ್ ಫುಲ್ ಆಗಿದೆ.
ಪ್ರತಿನಿಧಿ – ಎಮರ್ಜೆನ್ಸಿಗೂ ಸಿಗಲ್ವಾ?, ನಾರ್ಮಲ್ ಇಲ್ವಾ ಬೆಡ್
ಸಿಬ್ಬಂದಿ – ಇಲ್ಲ…ಇಲ್ಲ
Advertisement
Advertisement
ಸ್ಟಿಂಗ್ ಫುಲ್ – 02
ಗರ್ಭಿಣಿಗೆ ಉಸಿರಾಟದ ಸಮಸ್ಯೆ ಇದೆ. ಅವರು ಕೋವಿಡ್ ರೋಗಿ ಅಲ್ಲ. ದಯವಿಟ್ಟು ಅಡ್ಮಿಟ್ ಮಾಡಿಕೊಳ್ಳಿ ಎಂದು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ.
ಪ್ರತಿನಿಧಿ- ಉಸಿರಾಟದ ಸಮಸ್ಯೆ ಇದೆ. ಕೋವಿಡ್ ಅಲ್ಲ.
ಸಿಬ್ಬಂದಿ – ಏನಾಗಿದೆ?, ಎಲ್ಲಿದ್ದಾರೆ?
ಪ್ರತಿನಿಧಿ – ಉಸಿರಾಟದ ತೊಂದರೆ, ಬೇರೆ ಆಸ್ಪತ್ರೆಗೆ ಹೋದರೆ ಬೆಡ್ ಇಲ್ಲ ಅಂದ್ರು. ಈಗ ಮನೆಯಲ್ಲಿದ್ದಾರೆ.
ಸಿಬ್ಬಂದಿ – ಎಲ್ಲಿ ತೋರಿಸೋದು.?
ಪ್ರತಿನಿಧಿ – ಕೆ.ಸಿ ಜನರಲ್ನಲ್ಲಿ.
ಸಿಬ್ಬಂದಿ – ರಿಪೋರ್ಟ್ ಇದ್ಯಾ ಕೋವಿಡ್ ಟೆಸ್ಟ್ ಕೊಟ್ಟಿದ್ದಾರಾ?
ಪ್ರತಿನಿಧಿ- ಇಲ್ಲ.
ಸಿಬ್ಬಂದಿ – ನಮ್ಮಲ್ಲಿ ಇನ್ನು ಕೋವಿಡ್ಗೆಲ್ಲಾ ಫೆಸಿಲಿಟಿ ಇಲ್ಲ.
ಪ್ರತಿನಿಧಿ – ತುಂಬಾ ಉಸಿರಾಟದ ತೊಂದರೆ ಇದೆ
ಸಿಬ್ಬಂದಿ – ನಮ್ಮಲ್ಲಿ ಇನ್ನು ಶುರುವಾಗಿಲ್ಲ. ನಾವು ಕೋವಿಡ್ಗೆಲ್ಲಾ ರೆಡಿಯಾಗಬೇಕಾದರೇ ಇನ್ನೆರಡು ದಿನ ಬೇಕಾಗಬಹುದು.
ಪ್ರತಿನಿಧಿ – ಸ್ವಾಬ್ ಆದ್ರೂ ತಗೋತಿರಾ
ಸಿಬ್ಬಂದಿ – ಇಲ್ಲಾ.. ನೀವು ಅಪೋಲೋಗೆ ಹೋಗಿ. ಅಲ್ಲಿ ತಗೋತಾರೆ.
ಸ್ಟಿಂಗ್ ಆಪರೇಷನ್ ನಂ.3
ಪ್ರತಿನಿಧಿ – ಉಸಿರಾಟದ ಸಮಸ್ಯೆ ಇದೆ ಅಂಕಲ್ಗೆ ಸೇರಿಸಬೇಕಿತ್ತು.
ಸಿಬ್ಬಂದಿ – ರಿಪೋರ್ಟ್ ಇದ್ಯಾ ಪಾಸಿಟಿವ್?
ಪ್ರತಿನಿಧಿ – ಟೆಸ್ಟ್ ಮಾಡಿಸಿಲ್ಲ.
ಸಿಬ್ಬಂದಿ – ಸ್ವಾಬ್ ತೆಗೆದುಕೊಳ್ಳುತ್ತೀವಿ ಅಷ್ಟೇ. ಆದರೆ ಅವರನ್ನು ಅಡ್ಮಿಟ್ ಮಾಡಿಕೊಳ್ಳಲ್ಲ
ಪ್ರತಿನಿಧಿ – ಅಲ್ಲ ತುಂಬಾ ಉಸಿರಾಟದ ಸಮಸ್ಯೆ ಇದೆ. ಒದ್ದಾಡುತ್ತಿದ್ದಾರೆ.
ಸಿಬ್ಬಂದಿ – ಇಲ್ಲ ನಾವು ತಗೊಳ್ಳಲ್ಲ ಇಲ್ಲಿ. ಬನ್ನೇರುಘಟ್ಟಕ್ಕೆ ಹೋಗಿ. ಇಲ್ಲಿ ಕೋವಿಡ್ ಪಾಸಿಟಿವ್ ಇದ್ದರೆ ತಗೋತಿವಿ, ನೆಗೆಟಿವ್ ತಗೊಳ್ಳಲ್ಲ. ಬೇರೆ ಆಸ್ಪತ್ರೆ ಇದ್ದರೆ ನೋಡಿ. ಇಲ್ಲದೇ ಇದ್ದರೆ ಬನ್ನೇರುಘಟ್ಟಕ್ಕೆ ಕರ್ಕೊಂಡು ಹೋಗಿ.
ಇದೇ ರೀತಿ ಫೋನ್ ಮಾಡಿದವರಿಗೆ ಬೆಡ್ ಇಲ್ಲ, ನಾವು ಅಡ್ಮಿಟ್ ಮಾಡಿಕೊಳ್ಳಲ್ಲ, ಬೇರೆ ಆಸ್ಪತ್ರೆಗೆ ಹೋಗಿ ಎಂದು ಉಡಾಫೆಯಿಂದ ಉತ್ತರ ಕೊಡುತ್ತಿದ್ದಾವೆ. ಇದರಿಂದ ಖಾಸಗಿ ಆಸ್ಪತ್ರೆಗಳು ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.