-ಯಾವ ಜಿಲ್ಲೆಗಳಲ್ಲಿ ಎಷ್ಟು? ಇಲ್ಲಿದೆ ಮಾಹಿತಿ
ಬೆಂಗಳೂರು: ಕರ್ನಾಟಕದಲ್ಲಿ ಇವತ್ತು ಡೆಡ್ಲಿ ವೈರಸ್ ಹಲವು ದಾಖಲೆಗಳನ್ನು ಮಾಡಿದೆ. ಬೆಂಗಳೂರಿನಲ್ಲಿ ಎರಡು ಸಾವಿರದ ಗಡಿ ದಾಟಿದ್ರೆ, ದಕ್ಷಿಣ ಕನ್ನಡದಲ್ಲಿ ಡಬಲ್ ಸೆಂಚೂರಿ ದಾಖಲಿಸಿದೆ. ಉಳಿದಂತೆ ಒಟ್ಟು ಆರು ಜಿಲ್ಲೆಗಳಲ್ಲಿ ನೂರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಇಂದು ದಾಖಲಾಗಿವೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 51,422ಕ್ಕೆ ಏರಿಕೆಯಾಗಿದೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 2,344, ದಕ್ಷಿಣ ಕನ್ನಡ 238, ಧಾರವಾಡ 176, ವಿಜಯಪುರ 144, ಮೈಸೂರು 130, ಕಲಬುರಗಿ 123, ಉಡುಪಿ 113, ರಾಯಚೂಉರ 101, ಬೆಳಗಾವಿ 92, ಉತ್ತರ ಕನ್ನಡ 79, ಚಿಕ್ಕಬಳ್ಳಾಪುರ 77, ಬೀದರ್ 53, ಶಿವಮೊಗ್ಗ 46, ಬಳ್ಳಾರಿ 44, ಗದಗ 44, ಬಾಗಲಕೋಟೆ 39, ಯಾದಗಿರಿ 34, ಕೊಪ್ಪಳ 32, ಹಾಸನ 31, ಬೆಂಗಳೂರು ಗ್ರಾಮಾಂತರ 31, ಚಿಕ್ಕಮಗಳೂರು 30, ದಾವಣಗೆರೆ 25, ಚಿತ್ರದುರ್ಗ 21, ಹಾವೇರಿ 18, ಕೊಡಗು 18, ಚಾಮರಾಜನಗರ 16, ತುಮಕೂರು 12, ಮಂಡ್ಯ 11 ಮತ್ತು ರಾಮನಗರದಲ್ಲಿ 4 ಪ್ರಕರಣಗಳು ಇಂದು ಪತ್ತೆಯಾಗಿವೆ.
Advertisement
Advertisement
ರಾಜ್ಯದಲ್ಲಿ 104 ಸಾವಾಗಿದ್ದು, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 1032ಕ್ಕೆ ಏರಿಕೆಯಾಗುವ ಮೂಲಕ ಸಾವಿರದ ಗಡಿ ದಾಟಿ ಮಹಾಮಾರಿ ಮುನ್ನುಗ್ಗುತ್ತಿದೆ. ಒಟ್ಟು 51,422 ಪ್ರಕರಣಗಳಲ್ಲಿ 30,655 ಸಕ್ರಿಯವಾಗಿದೆ.