ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಯಾರಿಗೆ ಹೇಗೆ ಬರುತ್ತಿದೆ ಎಂದು ಹೇಳುವುದೇ ಕಷ್ಟವಾಗಿದೆ. ಇಂದು ಒಟ್ಟು 36 ಮಂದಿಗೆ ಸೋಂಕು ಬಂದಿದೆ ಈ ಪೈಕಿ 26 ಜನರ ಸೋಂಕಿನ ಮೂಲವೇ ನಿಗೂಢವಾಗಿದೆ.
ಇಬ್ಬರು ರೋಗಿಗಳು ಆಸ್ಪತ್ರೆಗೆ ಚೆಕಪ್ ಮಾಡಿಸಲು ತೆರಳಿದ್ದರು. ಬೇರೆ ಎಲ್ಲಿಗೂ ತೆರಳಿಲ್ಲ. ಹೀಗಾಗಿ ಮೂಲ ಪತ್ತೆ ಹಚ್ಚುವುದು ಈಗ ಸವಾಲಿನ ಕೆಲಸವಾಗಿದೆ.
Advertisement
Advertisement
ಆನೇಕಲ್ 46 ವರ್ಷದ ಮಹಿಳೆಯೊಬ್ಬರು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಸಂಬಂಧ ಆಸ್ಪತ್ರೆ ತೆರಳಿದ್ದರು. ಈಗ 8 ಮಂದಿ ಪ್ರಾಥಮಿಕ ಸಂಪರ್ಕಿತ ವ್ಯಕ್ತಿಗಳ ಜೊತೆ 3 ಮಂದಿ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.
Advertisement
ಕೊಮ್ಮಘಟ್ಟದಲ್ಲಿ 56 ವರ್ಷದ ಮಹಿಳೆಗೆ ಸೊಂಕು ಬಂದಿದೆ. ಕೊಮ್ಮಘಟ್ಟದ ಬಿಡಿಎ ಅಪಾರ್ಟ್ಮೆಂಟ್ ನಲ್ಲಿದ್ದ ಮಹಿಳೆ ಡಯಾಲಿಸಿಸ್ ಸಂಬಂಧ ಆಸ್ಪತ್ರೆಗೆ ತೆರಳುತ್ತಿದ್ದರು. ಈಗ ಅವರಿಗೆ ಕೋವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಈಗ ಈಕೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ನಾಲ್ವರು ಮತ್ತು 8 ಮಂದಿ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.
Advertisement
ಬೆಂಗಳೂರಿನಲ್ಲಿ ಒಟ್ಟು 617 ಮಂದಿಗೆ ಸೋಂಕು ಬಂದಿದೆ. ಸದ್ಯ 290 ಸಕ್ರಿಯ ಪ್ರಕರಣಗಳಿದ್ದು, 299 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 27 ಮಂದಿ ಮೃತಪಟ್ಟಿದ್ದಾರೆ.