– ರೋಗಿಗಳ ಶಿಫ್ಟ್ ಮಾಡಲು ಅಂಬುಲೆನ್ಸ್ ಕೊರತೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆಗಳು ಫುಲ್ ಆಗಿವೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಐಸಿಯು ಹಾಸಿಗೆಗಳು ಫುಲ್ ಆಗಿದ್ದರಿಂದ ಕೊರೊನಾ ರೋಗಿಗಳು ಬೆಡ್ ಗಳು ಇಲ್ಲದೆ ಕಾಯುತ್ತಿದ್ದಾರೆ. ಅಲ್ಲದೆ ಕೆಲವು ರೋಗಿಗಳು ಅಂಬುಲೆನ್ಸ್ ನಲ್ಲಿಯೇ ಇದ್ದಾರೆ.
Advertisement
Advertisement
413 ಸಕ್ರಿಯ ಪ್ರಕರಣಗಳ ಪೈಕಿ 36 ಮಂದಿಯ ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಇನ್ಮುಂದೆ ವಿಕ್ಟೋರಿಯಾ ಬದಲು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ.
Advertisement
ನಗರದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 336 ಐಸಿಯು ಬೆಡ್ಗಳು ಮಾತ್ರ ಇವೆ. ಈ ಹಿನ್ನೆಲೆಯಲ್ಲಿ ಮುಂಬೈ, ದೆಹಲಿ ಸ್ಥಿತಿ ಬೆಂಗಳೂರಿಗೂ ಎದುರಾಗುತ್ತಾ ಅನ್ನೋ ಅನುಮಾನ ಮೂಡಿದೆ.
Advertisement
ಇತ್ತ ಕೊರೊನಾ ರೋಗಿಗಳನ್ನು ಶಿಫ್ಟ್ ಮಾಡೋಕೆ ಅಂಬುಲೆನ್ಸ್ ಕೂಡ ಇಲ್ಲ ಎನ್ನಲಾಗುತ್ತಿದ್ದು, ಕೊರೊನಾ ವಾರಿಯರ್ಸ್ಗೂ ಟೆನ್ಶನ್ ಶುರುವಾಗಿದೆ. ಕಂಟೈನ್ಮೆಂಟ್ ಏರಿಯಾದಲ್ಲಿ ಕೆಲಸ ಮಾಡೋರಿಗೂ ಕಿರಿಕಿರಿಯಾಗಿದೆ. ಆಸ್ಪತ್ರೆ, ಹೋಟೆಲ್ ಕ್ವಾರಂಟೈನ್ಗೆ ಅಂಬುಲೆನ್ಸ್ ಸಾಲುತ್ತಿಲ್ಲ. ಸೋಂಕಿತರ ಸಂಪರ್ಕಿತರನ್ನು ಸಾಗಿಸಲು ಆಂಬುಲೆನ್ಸ್ ಕೊರತೆ ಎದುರಾಗಿದೆ.
198 ವಾರ್ಡ್ಗಳಿಗೆ ಕೇವಲ 50 ಅಂಬುಲೆನ್ಸ್ ಮಾತ್ರ ಮೀಸಲಿಡಲಾಗಿದೆ. ಮೇಲಾಧಿಕಾರಿಗಳು ಶಿಫ್ಟ್ ಮಾಡಿ ಅಂತಾರೆ ಆದರೆ ಅಂಬುಲೆನ್ಸ್ ಇಲ್ಲ. ಹೀಗಾಗಿ ಅಂಬುಲೆನ್ಸ್ ಇಲ್ಲದೇ ಬುಧವಾರ 40ಕ್ಕೂ ಹೆಚ್ಚು ಸಂಪರ್ಕಿತರ ಶಿಫ್ಟ್ ಆಗಿಲ್ಲ ಎಂಬುದಾಗಿ ತಿಳಿದುಬಂದಿದೆ.