– ಇಂದು 6,561 ಮಂದಿ ಆಸ್ಪತ್ರೆಯಿಂದ ಬಿಡುಗಡೆ
ಬೆಂಗಳೂರು: ರಾಜ್ಯದಲ್ಲಿ ಇಂದು 7,571 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 2,64,546ಕ್ಕೆ ಏರಿಕೆಯಾಗಿದೆ.
ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, 93 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ 4,522 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
Advertisement
Advertisement
ಇಂದು ರಾಜ್ಯದಲ್ಲಿ 6,561 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 2,64,546 ಸೋಂಕಿತರ ಪೈಕಿ 83,066 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 1,76,942 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 698 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಇಂದು 22,992 ರ್ಯಾಪಿಡ್ ಟೆಸ್ಟ್ ನಲ್ಲಿ 34,631 ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು, ಒಟ್ಟು 57,623 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಒಟ್ಟು 631105 ಮಂದಿಗೆ ರ್ಯಾಪಿಡ್ ಟೆಸ್ಟ್, 16,83,380 ಮಂದಿಗೆ ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 23,14,485 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
Advertisement
ಬೆಂಗಳೂರಿನಲ್ಲಿ ಇಂದು 2,948 ಮಂದಿಗೆ ಸೋಂಕು ದೃಢವಾಗಿದ್ದು, 22 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 102770 ಏರಿಕೆ ಆಗಿದೆ. ಬಳ್ಳಾರಿ 540, ಬೆಳಗಾವಿ 384, ಬೆಂಗಳೂರು ನಗರ 2,948, ದಕ್ಷಿಣ ಕನ್ನಡ 202, ದಾವಣಗೆರೆ 237, ಧಾರವಾಡ 252, ಹಾವೇರಿ 224, ಕೊಪ್ಪಳ 234, ಶಿವಮೊಗ್ಗ 227, ಉಡುಪಿ 278 ಹಾಗೂ ಯಾದಗಿರಿಯಲ್ಲಿ 255 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಇಂದು ಒಟ್ಟು 11 ಜಿಲ್ಲೆಯಲ್ಲಿ 200ಕ್ಕಿಂತ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಬಾಗಲಕೋಟೆ 81, ಬಳ್ಳಾರಿ 404, ಬೆಳಗಾವಿ 192, ಬೆಂಗಳೂರು ಗ್ರಾಮೀಣ 47, ಬೆಂಗಳೂರು ನಗರ 2,580, ಬೀದರ್ 172, ಚಿಕ್ಕಬಳ್ಳಾಪುರ 93, ಚಿಕ್ಕಮಗಳೂರು 80, ಚಿತ್ರದುರ್ಗ 21, ದಕ್ಷಿಣ ಕನ್ನಡ 64, ದಾವಣಗೆರೆ 158, ಧಾರವಾಡ 216, ಗದಗ 179, ಹಾಸನ 140, ಹಾವೇರಿ 100, ಕಲಬುರಗಿ 161, ಕೊಡಗು 107, ಕೋಲಾರ 85, ಕೊಪ್ಪಳ 233, ಮಂಡ್ಯ 64, ರಾಯಚೂರು 292, ರಾಮನಗರ 43, ಶಿವಮೊಗ್ಗ 76, ತುಮಕೂರು 264, ಉಡುಪಿ 365, ಉತ್ತರ ಕನ್ನಡ 127, ವಿಜಯಪುರ 186 ಹಾಗೂ ಯಾದಗಿರಿಯಲ್ಲಿ 31 ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.