ಬೆಂಗಳೂರು: ಸಿಲಿಕಾನ್ ಸಿಟಿಯ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯಲ್ಲಿ ನಡೆದ ಘಟನೆಯನ್ನು ಖಂಡಿಸುವುದಾಗಿ ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ.
Advertisement
ಬೆಂಗಳೂರು ಗಲಭೆಯ ಸಂಬಂಧ ಟ್ವೀಟ್ ಮಡಿರುವ ಅವರು, ಬೆಂಗಳೂರಿನಲ್ಲಿ ನಡೆದ ಗಲಭೆ ಅನಾಗರಿಕವಾದದ್ದಾಗಿದೆ. ಈ ಧಾರ್ಮಿಕ ಮತಾಂಧತೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕಾನೂನನ್ನು ಕೈಗೆ ತೆಗದುಕೊಂಡ ಪ್ರಚೋದರಕರು ಹಾಗೂ ಗೂಂಡಾಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈ ಸಮಾಜ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಗರಂ ಆಗಿದ್ದಾರೆ.
Advertisement
#bangaloreriots is nothing but barbaric. ..I strongly condemn this Religious fanaticism .. the instigator and the goons who took law into their hands should be punished. We as a society can not accept this #JustAsking
— Prakash Raj (@prakashraaj) August 12, 2020
Advertisement
ನಡೆದಿದ್ದೇನು?
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ಎಂದು ಹೇಳಲಾಗುತ್ತಿರುವ ನವೀನ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಸಮುದಾಯದ ವಿರುದ್ಧ ಪೋಸ್ಟ್ ಹಾಕಿದ್ದನೆಂದು ಸಿಟ್ಟಿಗೆದ್ದ ಉದ್ರಿಕ್ತರ ಗುಂಪು ಶಾಸಕರ ಮನೆ ಹಾಗೂ ಎರಡು ಪೊಲೀಸ್ ಠಾಣೆಗಳನ್ನು ಧ್ವಂಸಗೊಳಿಸಿವೆ. ಪ್ರಕರಣ ಸಂಬಂಧ ಈ ಈಗಾಗಲೇ ಹಲವರನ್ನು ಬಂಧಿಸಲಾಗಿದೆ.
Advertisement
ಘಟನೆಯಿಂದ ಪೊಲೀಸ್ ವಾಹನ, ಸಾರ್ವಜನಿಕರ ವಾಹನ ಸೇರಿ ಒಟ್ಟು 52 ವಾಹನಗಳಿಗೆ ಹಾನಿಯಾಗಿದೆ. 2 ಇನ್ನೋವಾ, 2 ಕೆಎಸ್ಆರ್ಪಿ ವ್ಯಾನ್, 1 ಸಿಎಆರ್ ವ್ಯಾನ್, 6 ಪೊಲೀಸ್ ಜೀಪ್, ಒಂದು ಚೀತಾ ಬೈಕ್, ಸ್ಟೇಷನ್ ಮುಂದೆ ಜಪ್ತಿ ಮಾಡಿ ನಿಲ್ಲಿಸಿದ್ದ 30 ಇತರೆ ಬೈಕ್, ಒಂದು ಆಟೋ, 2 ಕಾರು, 1 ಬೈಕ್ ಭಸ್ಮವಾಗಿದೆ. ಶಾಸಕರ ಮೂರಂತಸ್ತಿನ ಮನೆ, ಕಚೇರಿಗೆ ಬೆಂಕಿ, ಡಿಜೆ ಹಳ್ಳಿ ಠಾಣೆಗೆ ಬೆಂಕಿ, ಕೆಜಿ ಹಳ್ಳಿ ಠಾಣೆ ಧ್ವಂಸವಾಗಿದ್ದು, ಹತ್ತಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗಾಹುತಿಯಾಗಿವೆ.