– ಇಂದು 8,387 ಮಂದಿ ಆಸ್ಪತ್ರೆಯಿಂದ ಬಿಡುಗಡೆ
ಬೆಂಗಳೂರು: ರಾಜ್ಯದಲ್ಲಿ ಇಂದು 7,665 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 2,40,948ಕ್ಕೆ ಏರಿಕೆಯಾಗಿದೆ.
ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಅನ್ವಯ, ಇಂದು 139 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 4,201 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
Advertisement
Advertisement
ಇಂದು ರಾಜ್ಯದಲ್ಲಿ 8,387 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 2,40,948 ಸೋಂಕಿತರ ಪೈಕಿ 79, 782 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 1,56,949 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 697 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಇಂದು 28,867 ರಾಪಿಡ್ ಟೆಸ್ಟ್ ನಲ್ಲಿ 30,221 ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು, ಒಟ್ಟು 59,088 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಒಟ್ಟು 5,51,725 ಮಂದಿಗೆ ರಾಪಿಡ್ ಟೆಸ್ಟ್, 15,82,449 ಮಂದಿಗೆ ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 21,34,174 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
Advertisement
ಬೆಂಗಳೂರಿನಲ್ಲಿ ಇಂದು 2,242 ಮಂದಿಗೆ ಸೋಂಕು ದೃಢವಾಗಿದ್ದು, 49 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 94,106 ಏರಿಕೆ ಆಗಿದೆ. ಬೆಂಗಳೂರು ನಗರ 2,242, ಬಳ್ಳಾರಿ 673, ಬೆಳಗಾವಿ 395, ದಕ್ಷಿಣ ಕನ್ನಡ 279, ದಾವಣಗೆರೆ 332, ಧಾರವಾಡ 279, ಕಲಬುರಗಿ 229, ಮೈಸೂರು 357, ಶಿವಮೊಗ್ಗ 318 ಹಾಗೂ ಉಡುಪಿಯಲ್ಲಿ 421 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇಂದು ಒಟ್ಟು 10 ಜಿಲ್ಲೆಯಲ್ಲಿ 200ಕ್ಕಿಂತ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಬಾಗಲಕೋಟೆ 264, ಬಳ್ಳಾರಿ 500, ಬೆಳಗಾವಿ 459, ಬೆಂಗಳೂರು ಗ್ರಾಮಾಂತರ 157, ಬೆಂಗಳೂರು ನಗರ 3,520, ಬೀದರ್ 55, ಚಾಮರಾಜ ನಗರ 52, ಚಿಕ್ಕಬಳ್ಳಾಪುರ 130, ಚಿಕ್ಕಮಗಳೂರು 136, ಚಿತ್ರದುರ್ಗ 70, ದಕ್ಷಿಣ ಕನ್ನಡ 173, ದಾವಣಗೆರೆ 42, ಧಾರವಾಡ 351, ಗದಗ 206, ಹಾಸನ 129, ಹಾವೇರಿ 55, ಕಲಬುರಗಿ 246, ಕೊಡಗು 25, ಕೋಲಾರ 167, ಕೊಪ್ಪಳ 123, ಮಂಡ್ಯ 130, ಮೈಸೂರು 298, ರಾಯಚೂರು 143, ರಾಮನಗರ 19, ಶಿವಮೊಗ್ಗ 45, ತುಮಕೂರು 159, ಉಡುಪಿ 321, ಉತ್ತರ ಕನ್ನಡ 113, ವಿಜಯಪುರ 220, ಯಾದಗಿರಿ 79 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದಿನ 18/08/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMMhttps://t.co/tEN8TEkcKt pic.twitter.com/LeBiqYnbs4
— K'taka Health Dept (@DHFWKA) August 18, 2020