– 3,860 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 1,852 ಸೇರಿ ರಾಜ್ಯದಲ್ಲಿ ಇಂದು 5, 172 ಮಂದಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,29,287ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, ಇಂದು 98 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 2,412 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
Advertisement
Advertisement
ಇಂದು ರಾಜ್ಯದಲ್ಲಿ 3,860 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1,29,287 ಸೋಂಕಿತರ ಪೈಕಿ 73,219 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 53,648 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 602 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Karnataka conducted 34,760 tests in a single day today. So far we conducted 13,85,552 tests across 94 labs in the state. 5,172 Covid positive cases have been reported in the state today & 3,860 recoveries. 1,852 new cases reported in Bengaluru & 1,683 recoveries.@CMofKarnataka pic.twitter.com/tqRBUfDZFf
— Dr Sudhakar K (@mla_sudhakar) August 1, 2020
Advertisement
ಇಂದು 21,075 ರ್ಯಾಪಿಡ್ ಟೆಸ್ಟ್ನಲ್ಲಿ 13,685 ಆರ್ಟಿಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು 34,760 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಒಟ್ಟು 1,68,330 ಮಂದಿಗೆ ರ್ಯಾಪಿಡ್ ಟೆಸ್ಟ್, 12,17,222 ಮಂದಿಗೆ ಆರ್ಟಿಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 13,85,552 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಇಂದು 1,852 ಮಂದಿಗೆ ಸೋಂಕು ದೃಢವಾಗಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ. ಮೈಸೂರು 365, ಬಳ್ಳಾರಿ 269, ಕಲಬುರಗಿ 219, ಬೆಳಗಾವಿ 219 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು ಒಟ್ಟು 5 ಜಿಲ್ಲೆಯಲ್ಲಿ 200ಕ್ಕಿಂತ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಬೆಂಗಳೂರು ನಗರ 1,683, ಬಳ್ಳಾರಿ 408, ತುಮಕೂರು 225, ದಾವಣಗೆರೆ 188, ಶಿವಮೊಗ್ಗ 131, ಕಲಬುರಗಿ 130, ರಾಯಚೂರು 115, ಬಾಗಲಕೋಟೆ 101, ಉಡುಪಿ 100, ಬೆಂಗಳೂರು ಗ್ರಾಮಾಂತರ 89, ಮೈಸೂರು 74, ಚಿತ್ರದುರ್ಗ 72, ಕೊಪ್ಪಳ 71, ಉತ್ತರ ಕನ್ನಡ 65, ಬೀದರ್ 61, ವಿಜಯಪುರ 55, ದಕ್ಷಿಣ ಕನ್ನಡ 54, ಬೆಳಗಾವಿ 51, ಧಾರವಾಡ 50, ಗದಗ 43, ಮಂಡ್ಯ 27, ಚಿಕ್ಕಬಳ್ಳಾಪುರ 24, ಚಾಮರಾಜನಗರ 15, ಯಾದಗಿರಿ 15, ಹಾವೇರಿ 12 ಹಾಗೂ ಚಿಕ್ಕಮಗಳೂರಿನಲ್ಲಿ ಓರ್ವ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.