ಬೆಂಗಳೂರು: ಸರ್ವಪಕ್ಷ ಶಾಸಕರ ಸಭೆ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ನಿವಾಸದಲ್ಲಿ ತಜ್ಞ ವೈದ್ಯರ ಜೊತೆ ಸಭೆ ನಡೆಸಿದ್ದಾರೆ. ಬೆಂಗಳೂರನ್ನು ರಕ್ಷಿಸಲು ಮಾಡಲು ತಜ್ಞರು ಕೆಲವೊಂದು ಸಲಹೆ ಕೊಟ್ಟಿದ್ದಾರೆ.
ತಜ್ಞ ವೈದ್ಯರುಗಳಾದ ಡಾ.ದೇವಿಶೆಟ್ಟಿ, ಡಾ.ಮಂಜುನಾಥ್, ಡಾ.ಗಿರೀಶ್, ಡಾ.ಸುದರ್ಶನ್, ಮುಖ್ಯಕಾರ್ಯದರ್ಶಿ ಶ್ರೀ ವಿಜಯಭಾಸ್ಕರ್ ಸಭೆಯಲ್ಲಿ ಭಾಗವಹಿಸಿದ್ದರು.
Advertisement
Advertisement
ತಜ್ಞರ ಸಲಹೆ ಏನು?
1. ಬೆಂಗಳೂರಿಗೆ ಅಂತರ್ ಜಿಲ್ಲಾ ವಾಹನ ಓಡಾಟವನ್ನು 3 ವಾರ ಸಂಪೂರ್ಣ ಬಂದ್ ಮಾಡಿ. ಬೆಂಗಳೂರಿನಿಂದ ಹಳ್ಳಿಗೆ ಕೊರೊನಾ ವ್ಯಾಪಿಸುವುದನ್ನು ತಡೆಯಬಹುದು.
2. ಬೆಂಗಳೂರಿನಲ್ಲಿ 2 ವಾರ ಪರಿಸ್ಥಿತಿ ಮಾನಿಟರ್ ಮಾಡಿ
3. ದಿನಕ್ಕೆ ಸಾವಿರ ಪ್ರಕರಣ ಬಂದಾಗ ಬಹುತೇಕ ಲಾಕ್ಡೌನ್ ನಿರ್ಧಾರ ಮಾಡೋಣ
4. ಬೆಂಗಳೂರಿನಲ್ಲಿ ಸಮುದಾಯಕ್ಕೆ ಹಬ್ಬುತ್ತಿರುವ ಆತಂಕ ಎದುರಾಗಿದೆ. ಇದನ್ನು ಈಗಲೇ ತಡೆಯಬೇಕು.
Advertisement
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಮುಂದಿನ ಕಾರ್ಯತಂತ್ರಗಳ ಕುರಿತು ಇಂದು ಸಂಜೆ ತಜ್ಞರೊಂದಿಗೆ ಸಮಾಲೋಚನೆ ಸಭೆ ನಡೆಸಿ, ಸಲಹೆಗಳನ್ನು ಪಡೆಯಲಾಯಿತು. ತಜ್ಞ ವೈದ್ಯರುಗಳಾದ ಡಾ.ದೇವಿಶೆಟ್ಟಿ, ಡಾ.ಮಂಜುನಾಥ್, ಡಾ.ಗಿರೀಶ್, ಡಾ.ಸುದರ್ಶನ್, ಮುಖ್ಯಕಾರ್ಯದರ್ಶಿ ಶ್ರೀ ವಿಜಯಭಾಸ್ಕರ್ ಸಭೆಯಲ್ಲಿ ಭಾಗವಹಿಸಿದ್ದರು. pic.twitter.com/M2dmlgu5ek
— B.S.Yediyurappa (@BSYBJP) June 26, 2020
Advertisement
5. ಮನೆಗಳು ದೊಡ್ಡದಾಗಿದ್ದರೆ, ಅಲ್ಲಿಯೇ ಚಿಕಿತ್ಸೆ ನೀಡಲು ಮುಂದಾಗಿ
6. ಕೊರೋನಾ ಪರೀಕ್ಷೆಯನ್ನು ಹೆಚ್ಚಳ ಮಾಡಿ ನಿರ್ಲಕ್ಷ್ಯ ಮಾಡಬೇಡಿ
7. ಕಂಟೈನ್ಮೆಂಟ್ ಝೋನ್ ಕಟ್ಟುನಿಟ್ಟಾಗಿ ಪಾಲನೆ ಆಗ್ತಿಲ್ಲ, ಇದನ್ನು ಬಿಗಿಗೊಳಿಸಿ