ಬೆಂಗಳೂರು: ವೀಕೆಂಡ್ ಕರ್ಫ್ಯೂ ಹೊತ್ತಲ್ಲಿ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಿದೆ. ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಮೆಜೆಸ್ಟಿಕ್, ಕಾರ್ಪೊರೇಷನ್, ಆರ್ ಟಿ ನಗರ, ಮೇಕ್ರಿ ಸರ್ಕಲ್, ಯಶವಂತಪುರ ಸುತ್ತಮತ್ತ ಮಿಂಚು ಗುಡುಗು ಸಹಿತ ಭಾರಿ ಮಳೆಯಾಗಿದೆ.
Advertisement
ರಾಜಾಜಿನಗರದ ರಾಜ್ಕುಮಾರ್ ರೋಡ್ ಸಂಪೂರ್ಣ ಜಲಾವೃತವಾಗಿತ್ತು. ರಸ್ತೆಗಳಲ್ಲಿ ಮಂಡಿವರೆಗೆ ನೀರು ಬಂದಿದ್ದರಿಂದ ಎರಡು ಆಟೋಗಳು ಕೆಟ್ಟು ನಿಂತಿದ್ದವು. ವೀಕೆಂಡ್ ಕಫ್ರ್ಯೂ ಅಂತ ಮನೆಗೆ ಸೇರಲು ಹೊರಟಿದ್ದ ಸಾರ್ವಜನಿಕರು ಮಳೆಯಲ್ಲಿ ಸಿಲುಕಿ ಪರದಾಡಿದರು. ರಾಜಾಜಿನಗರ ರಾಜ್ ಕುಮಾರ್ ರೋಡ್ ಸಂಪೂರ್ಣ ಜಲಾವೃತವಾಗಿತ್ತು. ಎಂಜಿ ರೋಡ್ ಮತ್ತು ಟ್ರಿನಿಟಿ ಸರ್ಕಲ್ ನಡುವೆ ಸಮುದ್ರದ ಅಲೆಯಂತೆ ನೀರು ಬಂದು ಫುಟ್ಪಾತ್ ಗೆ ಅಪ್ಪಳಿಸುತ್ತಿತ್ತು.
Advertisement
Advertisement
ಕೋಲಾರ ಜಿಲ್ಲೆಯ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ. ಕೆಜಿಎಫ್ನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಮಳೆ-ಗಾಳಿಗೆ ರಭಸಕ್ಕೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಪ್ರಾಣಾಪಾಯದಿಂದ ಆಟೋಚಾಲಕ ಎಸ್ಕೇಪ್ ಆಗಿದ್ದಾನೆ. ಹುಬ್ಬಳ್ಳಿ, ಬೀದರ್, ಯಾದಗಿರಿಯಲ್ಲೂ ಕೂಡ ಮಳೆಯಾಗಿದೆ. ಇನ್ನೂ ಮೂರು ದಿನ ಮಳೆ ಆಗುವ ಸಾಧ್ಯತೆಗಳಿವೆ.