ಬೆಂಗಳೂರು: ನೈಟ್ ಕರ್ಫ್ಯೂ ವಿಚಾರದಲ್ಲಿ ನಿಮಿಷಕ್ಕೊಂದು ಆದೇಶ. ಹೆಜ್ಜೆಹೆಜ್ಜೆಗೂ ಎಡವಟ್ಟು ಮಾಡಿ ನಗೆಪಾಟಲಿಗೆ ಈಡಾಗಿದ್ದ ರಾಜ್ಯ ಸರ್ಕಾರದ ಮುಂದೆ ಈಗ ಮತ್ತೊಂದು ಸವಾಲು ಎದುರಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಹೊಸ ವರ್ಷವನ್ನು ಸಾರ್ವಜನಿಕವಾಗಿ ಆಚರಿಸದಂತೆ ಸೂಚಿಸಿ ಡಿಸೆಂಬರ್ 17ರಂದೇ ಮಾರ್ಗಸೂಚಿ ಪ್ರಕಟಿಸಿದೆ. ಆದರೆ ಈ ನಿಯಮಗಳನ್ನಾದ್ರೂ ಸರಿಯಾಗಿ ಜಾರಿಗೆ ತರ್ತಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದುರಾಗಿದೆ. ಇದಕ್ಕೆ ಪೂರಕ ಎಂಬಂತೆ ಸರ್ಕಾರ ಫುಲ್ ಅಲರ್ಟ್ ಆಗಿದೆ.
Advertisement
ನೈಟ್ ಕರ್ಫ್ಯೂ ವಿಚಾರದಲ್ಲಿ ಆದಂತೆ ಆಗಬಾರದು. ಹೊಸ ವರ್ಷಕ್ಕೆ ರೂಪಿಸಿರುವ ರೂಲ್ಸ್ನ್ನಾದ್ರೂ ನೆಟ್ಟಗೆ ಜಾರಿ ಮಾಡಿ ಎಂದು ಅಧಿಕಾರಿಗಳಿಗೆ ಸರ್ಕಾರ ಖಡಕ್ಕಾಗಿ ಸೂಚಿಸಿದೆ. ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಂಗಳೂರಿಗೆ ಪ್ರತ್ಯೇಕ ರೂಲ್ಸ್ ಜಾರಿ ಮಾಡುವಂತೆ ಪೊಲೀಸ್ ಆಯಕ್ತರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಇನ್ನು ಒಂದೆರಡು ದಿನಗಳಲ್ಲಿ ಪೊಲೀಸ್ ಇಲಾಖೆ ಬೆಂಗಳೂರಿಗೆ ಸೀಮಿತವಾಗಿರುವ ಪ್ರತ್ಯೇಕ ರೂಲ್ಸ್ ಪ್ರಕಟಿಸಲಿದೆ.
Advertisement
Advertisement
ಬೆಂಗಳೂರಿಗೆ ‘ನ್ಯೂ’ ರೂಲ್ಸ್ – ಏನಿರಬಹುದು?
* ಹೊಸ ವರ್ಷದ ದಿನ ಎಲ್ಲೂ ಕೂಡ ಮೋಜು ಮಸ್ತಿಗಿಲ್ಲ ಅವಕಾಶ.
* ಡಿಸೆಂಬರ್ 31, ಜನವರಿ 1ರಂದು ಬೆಂಗಳೂರಿನಲ್ಲಿ ಟಫ್ ರೂಲ್ಸ್.
* ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ಸ್ಟ್ರೀಟ್ನಲ್ಲಿ ಹೊಸ ವರ್ಷಕ್ಕಿಲ್ಲ ಅನುಮತಿ.
* ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಜನರು ಬರದಂತೆ ತಡೆಯಲು ಪ್ಲಾನ್.
* ಕ್ಲಬ್, ಪಬ್, ರೆಸ್ಟೋರೆಂಟ್ಗಳಲ್ಲಿ ಡಿಜೆ, ಡ್ಯಾನ್ಸ್, ಪಾರ್ಟಿ ನಿಷೇಧ.
* ಪಬ್, ಬಾರ್ & ರೆಸ್ಟೊರೆಂಟ್ಗಳಲ್ಲಿ ಶೇ.50ರಷ್ಟು ಮಂದಿಗಷ್ಟೇ ಪರ್ಮಿಷನ್.
* ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್, ಪಬ್ಗಳು ರಾತ್ರಿ 11ಕ್ಕೆ ಬಂದ್.
* ಡಿಸೆಂಬರ್ 31ರ ಸಂಜೆ 6ರಿಂದಲೇ ಫ್ಲೈ ಓವರ್ ಬಂದ್ ಮಾಡಲು ಪ್ಲಾನ್
* ಕಾನೂನು ಉಲ್ಲಂಘಿಸಿ ಸೆಲೆಬ್ರೇಷನ್ ಮಾಡುವವರ ಮೇಲೆ ಖಾಕಿ ನಿಗಾ.
* ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ.. ಸಿಕ್ಕಿಬಿದ್ದರೇ ವಾಹನ ಸೀಜ್, ಕೇಸ್.