ಬೆಂಗಳೂರು: ಬುಧವಾರ ಬೆಳಗ್ಗೆ ಲಾಕ್ಡೌನ್ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಮತ್ತೆ ಬೆಂಗಳೂರಿನಲ್ಲಿ ಲಾಕ್ಡೌನ್ ಮಾಡಬೇಕೇ? ಬೇಡವೇ ಎಂಬುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ಆರಂಭವಾಗಿದೆ. ಈ ನಡುವೆ ತಜ್ಞರು ವರದಿ ನೀಡಿದ್ದು, ಲಾಕ್ಡೌನ್ ಮುಂದುವರಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ತಜ್ಞರ ಸಲಹೆ ಏನು?
1. ತಜ್ಞರು 14 ದಿನದ ಲಾಕ್ಡೌನ್ಗೆ ಸಲಹೆ ನೀಡಿದ್ದರು. ಆದರೆ ಸರ್ಕಾರ 7 ದಿನಕ್ಕೆ ಮಾತ್ರ ಸೀಮಿತಗೊಳಿಸಿ ಆದೇಶ ಪ್ರಕಟಿಸಿತ್ತು. ಆರ್ಥಿಕ ನಷ್ಟದ ಕಾರಣವೊಡ್ಡಿ ಏಳು ದಿನಕ್ಕೆ ಮಾತ್ರ ಲಾಕ್ಡೌನ್ ಪ್ರಕಟಿಸಿತ್ತು.
Advertisement
Advertisement
2. ವೈಜ್ಞಾನಿಕ ವಾಗಿ 14 ದಿನ ಅಥವಾ 21 ದಿನಗಳ ಕಾಲ ಲಾಕ್ ಡೌನ್ ಇದ್ದರಷ್ಟೇ ಸಮುದಾಯದ ಹಂತದಲ್ಲಿರುವ ಕೊರೋನಾ ಸರಪಳಿ ಮುರಿಯಲು ಸಾಧ್ಯ.
Advertisement
3. ಬುಧವಾರದ ನಂತರ ಸಂಪೂರ್ಣ ಲಾಕ್ ಡೌನ್ ಸಾಧ್ಯವಿಲ್ಲದೇ ಹೋದ್ರೂ ಹೈ ರಿಸ್ಕ್ ಇರುವ ಬೆಂಗಳೂರಿನ ಏರಿಯಾಗಳನ್ನು ಲಾಕ್ ಡೌನ್ ಮಾಡಲೇಬೇಕು.
Advertisement
4. ಹತ್ತು ದಿನದಲ್ಲಿ ಒಂದು ಲಕ್ಷದ ಟೆಸ್ಟಿಂಗ್ ಗುರಿಯನ್ನಾದ್ರೂ ಬೆಂಗಳೂರಿನಲ್ಲಿ ಹಾಕಿ. ಅದು ಆಂಟಿಜೆನ್ ಅಥವಾ ಆರ್ ಟಿ ಪಿಸಿಆರ್ ಯಾವುದಾದರು ಸರಿ.
5. ಬೆಂಗಳೂರಿನಲ್ಲಿ ಸಧ್ಯಕ್ಕೆ ಯಾವುದೇ ರೀತಿಯಲ್ಲೂ ಅತ್ಯಧಿಕ ಜನ ಸೇರುವ ಮಾರ್ಕೆಟ್ , ವ್ಯಾಪಾರ ಕೇಂದ್ರ, ಕಾರ್ಯಕ್ರಮ ಯಾವುದು ಇರಬಾರದು. ಇದೆಲ್ಲವನ್ನು ಬಂದ್ ಮಾಡಬೇಕು.
6. ಬೆಂಗಳೂರಿನ ಬಹುತೇಕ ಕಡೆ ಹಾಫ್ ಲಾಕ್ ಡೌನ್ ಮೂಡ್ ನಲ್ಲಿ ಇರಲಿ. ವ್ಯಾಪಾರಕ್ಕೆ ಸೀಮಿತ ಅವಧಿ ಇರಲಿ.
7. ಬುಧವಾರದ ನಂತರವೂ ಕಂಪನಿಗಳ ಸಿಬ್ಬಂದಿಗೆ ವರ್ಕ್ ಫ್ರಂ ಹೋಮ್ ಮಾದರಿ ಇರಲಿ.