ಅಬುಧಾಬಿ: ಇಂದು ವೀಕೆಂಡ್ ಧಮಾಕದ ಎರಡನೇ ಮ್ಯಾಚಿನಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ 163 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ನಾಯಕ ಶ್ರೇಯಸ್ ಐಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು 52 ಬಾಲಿಗೆ ಒಂದು ಸಿಕ್ಸ್ ಮತ್ತು ಆರು ಬೌಂಡರಿಗಳ ನೆರವಿನಿಂದ ಧವನ್ ಅವರು ಸಿಡಿಸಿದ 69 ರನ್ಗಳಿಂದ 20 ಓವರಿನಲ್ಲಿ 162 ರನ್ ಕೆಲಹಾಕಿದೆ. ಈ ಮೂಲಕ ಬಲಿಷ್ಠ ಬ್ಯಾಟಿಂಗ್ ಲೈನ್ಅಫ್ ಇರುವ ಮುಂಬೈ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತವನ್ನು ಟಾರ್ಗೆಟ್ ಆಗಿ ನೀಡಿದೆ.
Advertisement
ICYMI – Fumbled, wrong call, Stoinis run-out.
Suryakumar Yadav fumbled in the deep, Stoinis goes for a second run, miscommunication. Run-out!
????????https://t.co/SEIlw1k7w6 #Dream11IPL
— IndianPremierLeague (@IPL) October 11, 2020
Advertisement
ಬುಮ್ರಾ ಬೌಲಿಂಗ್ ಜಾದು
ಇಂದಿನ ಪಂದ್ಯದಲ್ಲಿ ಮುಂಬೈ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡಿದರು. ಡೆಲ್ಲಿ ತಂಡದ ಇನ್ ಫಾರ್ಮ್ ಆಟಗಾರರನ್ನು ಕೇವಲ 162 ರನ್ಗಳಲ್ಲಿ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ನಾಲ್ಕು ಓವರ್ ಬೌಲ್ ಮಾಡಿದ ಜಸ್ಪ್ರೀತ್ ಬುಮ್ರಾ ಕೇವಲ 26 ರನ್ ಕೊಟ್ಟು ಉತ್ತಮವಾಗಿ ಬೌಲ್ ಮಾಡಿದರು. ಇವರಿಗೆ ಉತ್ತಮ ಸಾತ್ ಕೊಟ್ಟ ಕ್ರುನಾಲ್ ಪಾಂಡ್ಯ ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಪಡೆದು ಕೇವಲ 26 ರನ್ ನೀಡಿದರು. ಟ್ರೆಂಟ್ ಬೌಲ್ಟ್ ಒಂದು ವಿಕೆಟ್ ಪಡೆದುಕೊಂಡರು.
Advertisement
FIFTY!@SDhawan25 brings up his half-century off 39 deliveries. First fifty of #Dream11IPL 2020.
Live – https://t.co/0fS0687cpP #Dream11IPL pic.twitter.com/vjw5T3Wjjf
— IndianPremierLeague (@IPL) October 11, 2020
Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಬಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂಬೈ ವೇಗಿ ಟ್ರೆಂಟ್ ಬೌಲ್ಟ್ ಆರಂಭಿಕ ಆಘಾತ ನೀಡಿದರು. ಉತ್ತಮ ಲಯದಲ್ಲಿದ್ದ ಪೃಥ್ವಿ ಶಾ ಅವರನ್ನು ಮೊದಲ ಓವರಿನಲ್ಲೇ ಔಟ್ ಮಾಡಿದರು. ನಂತರ ಬಂದು ತಾಳ್ಮೆಯ ಆಟಕ್ಕೆ ಮುಂದಾದ ಅಜಿಂಕ್ಯ ರಹಾನೆ ಅವರು ಐಪಿಎಲ್-2020ಯ ತಮ್ಮ ಮೊದಲ ಮ್ಯಾಚಿನಲ್ಲಿ 15 ಬಾಲಿಗೆ 15 ರನ್ ಸಿಡಿಸಿ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿ ಔಟ್ ಆದರು. ಪವರ್ ಪ್ಲೇ ಮುಕ್ತಾಯಕ್ಕೆ ಡೆಲ್ಲಿ ಎರಡು ವಿಕೆಟ್ ಕಳೆದುಕೊಂಡು 46 ರನ್ ಗಳಿಸಿತ್ತು.
Krunal Pandya with another big wicket!
The #DelhiCapitals Skipper departs after a well made 42.
Live – https://t.co/0fS0687cpP #Dream11IPL pic.twitter.com/oRYq2XmUWS
— IndianPremierLeague (@IPL) October 11, 2020
ನಂತರ ಜೊತೆಯಾದ ಶಿಖರ್ ಧವನ್ ಮತ್ತು ನಾಯಕ ಶ್ರೇಯಸ್ ಐಯ್ಯರ್ ಉತ್ತಮ ಜೊತೆಯಾಟವಾಡಿದರು. ಜೊತೆಗೆ 33 ಬಾಲಿಗೆ ಅರ್ಧಶತಕ ಜೊತೆಯಾಟವಾಡಿ ಮಿಂಚಿದರು. ನಂತರ ಧವನ್ ಮತ್ತು ಐಯ್ಯರ್ 13.1 ಓವರಿನಲ್ಲಿ ಪಂದ್ಯದ ಮೊತ್ತವನ್ನು 100ರ ಗಡಿ ದಾಟಿಸಿದರು. ನಂತರ 14ನೇ ಓವರಿನ 4ನೇ ಬಾಲಿನಲ್ಲಿ 33 ಬಾಲಿಗೆ 42 ರನ್ ಗಳಿಸಿ ಆಡುತ್ತಿದ್ದ ನಾಯ ಶ್ರೇಯಸ್ ಐಯ್ಯರ್ ಅವರನ್ನು ಕ್ರುನಾಲ್ ಪಾಂಡ್ಯ ಅವರು ಔಟ್ ಮಾಡಿ ಪೆವಿಲಿಯನ್ಗೆ ಅಟ್ಟಿದರು. ನಂತರ ಮಾರ್ಕಸ್ ಸ್ಟೊಯಿನಿಸ್ ಅವರು ಔಟ್ ಆಗಿ ಹೊರನಡೆದರು.