– ಒಟ್ಟು ಸೋಂಕಿತರ ಸಂಖ್ಯೆ 1103ಕ್ಕೆ ಏರಿಕೆ
ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಚೀನಾ ಮಹಾಮಾರಿಯ ಆರ್ಭಟ ನಿಲ್ಲುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಇಂದೂ ಸಹ 42 ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯ ಜನರನ್ನು ಭಯಭೀತರನ್ನಾಗಿಸಿದೆ. ಹೀಗಾಗಿ ನಾಳೆಯಿಂದ ಒಂದು ವಾರಗಳ ಕಾಲ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಲಾಕ್ಡೌನ್ ಘೋಷಣೆ ಮಾಡಿದ್ದು, ಅಗತ್ಯ ವಸ್ತುಗಳನ್ನು ಬಿಟ್ಟು ಉಳಿದೆಲ್ಲವೂ ನಾಳೆಯಿಂದ ಬಂದ್ ಆಗಲಿವೆ. ಇಂದೂ ಸಹ ಬೀದರ್ ನಲ್ಲಿ 42 ಜನರಿಗೆ ಕೊರೊನಾ ಪಾಸಿಟಿವ್ ಧೃಡವಾಗುವ ಮೂಲಕ ಜಿಲ್ಲೆಯಲ್ಲಿ ಮಹಾಮಾರಿ ಅಟ್ಟಹಾಸ ಮೆರೆದಿದೆ.
Advertisement
Advertisement
ಬೀದರ್ನಲ್ಲಿ 18, ಬಾಲ್ಕಿಯಲ್ಲಿ 5, ಹುಮ್ನಬಾದ್ನಲ್ಲಿ 15, ಔರಾದ್ನಲ್ಲಿ 2, ಕಮಲಾನಗರದಲ್ಲಿ 2 ಸೇರಿದಂತೆ ಒಟ್ಟು 42 ಜನಕ್ಕೆ ಪಾಸಿಟಿವ್ ಧೃಡವಾಗಿದೆ. ಕಂಟೈನ್ಮೆಂಟ್ ಝೋನ್, ಪ್ರಾಥಮಿಕ ಹಾಗೂ ಸಾರಿ ಕೇಸ್ನಿಂದಾಗಿ ಸೋಂಕು ಧೃಡವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1103ಕ್ಕೆ ಏರಿಕೆಯಾಗಿದೆ. ಇದರಲ್ಲಿ 613 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 437 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿಯವರೆಗೆ 53 ಜನರನ್ನು ಮಹಾಮಾರಿ ಬಲಿ ಪಡೆದಿದೆ.