ಬೀದರ್: ಕೊರೊನಾ ಎರಡನೇ ಅಲೆಯಲ್ಲಿ 18 ವರ್ಷದೊಳಗಿನ 1,800 ಮಕ್ಕಳಿಗೆ ಸೋಂಕು ದೃಡವಾಗಿತ್ತು ಎಂದು ಬೀದರ್ ಜಿಲ್ಲಾಡಳಿತ ಹೇಳಿದೆ.
ಜೂನ್ 24 ರವರೆಗೆ 12 ವರ್ಷದೊಳಗಿನ ಒಟ್ಟು 10 ಮಕ್ಕಳಿಗೆ ಕೊರೊನಾ ಪಾಸಿಟಿವ್ ಧೃಡವಾಗಿದ್ದು, 7 ಮಕ್ಕಳು ಗುಣಮುಖರಾದ್ರೆ 3 ಮಕ್ಕಳಿಗೆ ಮಾತ್ರ ಸೋಂಕು ಸಕ್ರಿಯವಾಗಿದೆ. ಎರಡನೇಯ ಅಲೆಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿರುವ ಎಲ್ಲಾ ಮಕ್ಕಳು ಗುಣಮುಖರಾಗಿದ್ದಾರೆ. ಕೊರೊನಾ ಮಹಾಮಾರಿಗೆ ಜಿಲ್ಲೆಯಲ್ಲಿ ಯಾವ ಮಕ್ಕಳು ಸಾವನ್ನಪ್ಪಿಲ್ಲ. ಹಾಗಾಗಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಮಕ್ಕಳಿಗಾಗಿ ಬ್ರಿಮ್ಸ್ ನಲ್ಲಿ 50 ಬೆಡ್, ಹೆರಿಗೆ ಆಸ್ಪತ್ರೆಯಲ್ಲಿ 50 ಬೆಡ್ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ತಲಾ 10 ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ವಿಜಿ ರೆಡ್ಡಿ ಹೇಳಿದ್ದಾರೆ.
Advertisement
Advertisement
ಕೊರೊನಾ ಮೂರನೇಯ ಅಲೆ ಮಕ್ಕಳಿಗೆ ಅಪಾಯ ಎಂದು ತಜ್ಞರು ಹೇಳುತ್ತಿದ್ದು ಪೋಷಕರು ತೀವ್ರ ಆಂತಕಗೊಂಡಿದ್ದಾರೆ. ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿ ಹೊಂದಿಕೊಂಡಿರುವ ಬೀದರ್ ನ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಬೆಡ್ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ಸಿದ್ಧತೆ ಮಾಡಿಕೊಂಡಿದೆ.