ಪಾಟ್ನಾ: ಬಿಹಾರ ಚುನಾವಣೆಯ ಬಿಜೆಪಿಯ ಉಸ್ತುವಾರಿಯಾಗಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನ ಪಕ್ಷ ನೇಮಕ ಮಾಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನಾಗಿ ದೇವೇಂದ್ರ ಫಡ್ನವೀಸ್ ಅವರನ್ನ ನೇಮಕ ಮಾಡಿದೆ. ಸಭೆಯಲ್ಲಿ ಬಿಜೆಪಿ ಮಿತ್ರ ಪಕ್ಷಗಳಾದ ಜೆಡಿಯು ಮತ್ತು ಎಲ್ಜೆಪಿ ಜೊತೆ ಸೀಟುಗಳ ಹಂಚಿಕೆಯ ಕುರಿತಾಗಿ ಚರ್ಚೆ ನಡೆಸಿದೆ. ಕ್ಷೇತ್ರ ಹಂಚಿಕೆಯಲ್ಲಿ ಬಿಜೆಪಿ ಇರಿಸಿರೋ ಪ್ರಸ್ತಾಪಕ್ಕೆ ಎಲ್ಜೆಪಿ ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
Advertisement
भाजपा राष्ट्रीय अध्यक्ष श्री @JPNadda ने श्री @Dev_Fadnavis, पूर्व मुख्यमंत्री, महाराष्ट्र को आगामी बिहार विधान सभा चुनाव हेतु चुनाव प्रभारी नियुक्त किया। pic.twitter.com/BDl4luR8il
— BJP (@BJP4India) September 30, 2020
Advertisement
ಕಳೆದ ವಾರ ಬಿಹಾರಕ್ಕೆ ಭೇಟಿ ನೀಡಿದ್ದ ದೇವೇಂದ್ರ ಫಡ್ನವೀಸ್ ಪಕ್ಷದ ಆಂತರಿಕ ಸಭೆಯಲ್ಲಿ ಭಾಗವಹಿಸಿದ್ದರು. ಬಿಹಾರ ಕಮಲ ನಾಯಕರ ಜೊತೆ ಕುಳಿತು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಬಿಜೆಪಿ ಬಿಹಾರವನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪಕ್ಷದ ಹಿರಿಯ ನಾಯಕರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದೆ.
Advertisement
मैं मा. प्रधानमंत्री श्री @narendramodi जी और हमारे @BJP4India राष्ट्रीय अध्यक्ष मा. @JPNadda जी का आभारी हूँ !
कार्यकर्ता होने के नाते यह मेरे लिए सीखने का अवसर है।
पूरे ताक़त के साथ हम बिहार का चुनाव लडेंगे।
नई दिल्ली में मीडिया से वार्तालाप…#BiharElections https://t.co/P16hscb9BW pic.twitter.com/1RNYycXyXA
— Devendra Fadnavis (@Dev_Fadnavis) September 30, 2020
Advertisement
ಕೇಂದ್ರ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ್ ಸಮತಾ ಪಕ್ಷ (ಆರ್ಎಸ್ಎಲ್ಪಿ) ಮತ್ತು ಸಮಾಜವಾದಿ ಪಾರ್ಟಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧವಾಗಿವೆ. ಮೈತ್ರಿಯ ಸಿಎಂ ಅಭ್ಯರ್ಥಿಯಾಗಿರುವ ಉಪೇಂದ್ರ ಕುಶ್ವಾಗ ಅವರಿಗೆ ಸಮಾಜವಾದಿ ಪಾರ್ಟಿ ಬೆಂಬಲ ನೀಡಲಿದೆ ಎಂದು ಮಾಜಿ ಸಿಎಂ ಮಾಯಾವತಿ ಹೇಳಿದ್ದಾರೆ. ಈ ಮೈತ್ರಿಯಲ್ಲಿ ಎನ್ಡಿಎ, ಕಾಂಗ್ರೆಸ್ ವ್ಯಂಗ್ಯ ಮಾಡಿವೆ. ಮೈತ್ರಿ ಬೆನ್ನಲ್ಲೇ ಆರ್ಎಸ್ಎಲ್ಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಧವನ್ ಆನಂದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರ ಬಂದಿದ್ದಾರೆ. ಮಾಧವ್ ಆನಂದ್ 2017ರಲ್ಲಿ ಆರ್ಎಸ್ಎಲ್ಪಿ ಸೇರ್ಪಡೆಯಾಗಿದ್ದರು.
कुशल संगठनकर्ता और महाराष्ट्र के पूर्व मुख्यमंत्री श्री @Dev_Fadnavis को बिहार विधानसभा का चुनाव प्रभारी बनाए जाने पर हार्दिक बधाई एवं शुभकामनाएं@byadavbjp pic.twitter.com/Y1QiL1SVxV
— BJP Bihar (@BJP4Bihar) September 30, 2020
ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7ರಂದು ಮೂರು ಹಂತಗಳಲ್ಲಿ ಬಿಹಾರದ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ನೆವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.