ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ದತ್ತಾಂಶದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದು ಸ್ಪಷ್ಟವಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಹಾರದಲ್ಲಿ ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಮಹಿಳಾ ಮತದಾರರ ಸಂಖ್ಯೆಯಲ್ಲಿ ಸ್ಥಿರ ಏರಿಕೆ ಕಂಡು ಬಂದಿದೆ. 2015 ರಲ್ಲಿ ಮಹಿಳೆಯರು ಪುರುಷ ಮತದಾರರನ್ನು ಭಾರಿ ಅಂತರದಿಂದ ಹಿಂದಿಕ್ಕಿದ್ದಾರೆ. ಕಳೆದ ಚುನಾವಣೆಯಲ್ಲಿ ಮಹಿಳೆಯರು 60.48% ಪುರುಷರು 53.32% ನಷ್ಟು ಮತ ಚಲಾಯಿಸಿದ್ದಾರೆ.
Advertisement
Advertisement
1962 ದಾಖಲಾದ ಪ್ರಮಾಣದಲ್ಲಿ 2015 ರಲ್ಲಿ ಮಹಿಳೆಯರ ಮತದಾನ ದಾಖಲಾಗಿದೆ. ಒಟ್ಟು 1.9 ಪುರುಷರ ಮತದಾರರು 1.89 ಕೋಟಿ ಮಹಿಳಾ ಮತದಾರರಿದ್ದಾರೆ. ಕಳೆದ ಚುನಾವಣೆಯಲ್ಲಿ ಮತದಾನ ಪ್ರಮಾಣ 56.66%.ರಷ್ಟು ದಾಖಲಾಗಿತ್ತು.
Advertisement
2000 ರಲ್ಲಿ ಬಿಹಾರದಿಂದ ಜಾರ್ಖಂಡ್ ಬೇರ್ಪಟ್ಟ ಬಳಿಕ ಬಿಹಾರವು ಮೂರು ಚುನಾವಣೆಗಳನ್ನು ಎದುರಿಸಿದೆ. 2005, 2010 ಮತ್ತು 2015 ರಲ್ಲಿ ಫೆಬ್ರವರಿ ಮತ್ತು ಅಕ್ಟೋಬರ್ನಲ್ಲಿ ವಿಧಾನಸಭಾ ಚುನಾವಣೆಯನ್ನು ಕಂಡಿದೆ. 2005ರ ಫೆಬ್ರವರಿ ಚುನಾವಣಾ ದತ್ತಾಂಶಗಳ ವಿಶ್ಲೇಷಣೆಯ ಪ್ರಕಾರ, ಮತ ಚಲಾಯಿಸಿದ ಮಹಿಳೆಯರ ಪಾಲು 42.51% (1.04 ಕೋಟಿ) ರಷ್ಟಿತ್ತು. ಇದು ಮುಂದಿನ 10 ವರ್ಷಗಳಲ್ಲಿ ಸುಮಾರು 20% ನಷ್ಟು ಹೆಚ್ಚಾಗಿದೆ. 2005 ರಲ್ಲಿ 49.94% ಪುರುಷರು (1.40 ಕೋಟಿ) ಮತ ಚಲಾಯಿಸಿದ್ದರು, 2015 ರವರೆಗೆ ಕೇವಲ 4% ರಷ್ಟು ಪುರುಷ ಮತದಾರರ ಸಂಖ್ಯೆ ಹೆಚ್ಚಾಗಿದೆ. 2005 ರಲ್ಲಿ ಒಟ್ಟಾರೆ ಮತದಾನ ಪ್ರಮಾಣ 46.5% ಆಗಿತ್ತು.
Advertisement
ಛೀದ್ರಗೊಂಡ ಫಲಿತಾಂಶದಿಂದಾಗಿ, 2005 ರ ಅಕ್ಟೋಬರ್ನಲ್ಲಿ ಮತ್ತೆ ವಿಧಾನಸಭಾ ಚುನಾವಣೆಗಳು ಅನಿವಾರ್ಯವಾಗಿದ್ದವು. ಮತದಾರರ ಬಳಲಿಕೆಯ ನಿರೀಕ್ಷೆಯ ಹೊರತಾಗಿಯೂ, ಹೆಚ್ಚಿನ ಮಹಿಳೆಯರು ಮತ ಚಲಾಯಿಸಿದರು. ಫೆಬ್ರವರಿ ಚುನಾವಣೆಗೆ ಹೋಲಿಸಿದರೆ ಮಹಿಳಾ ಮತದಾರರ ಪ್ರಮಾಣ 44% (1.06 ಕೋಟಿ) ಏರಿಕೆಯಾದರೆ, ಪುರುಷರ ಮತದಾನದ ಸಂಖ್ಯೆ ಕುಸಿದಿತ್ತು.
ಆ ಚುನಾವಣೆ ನಿತೀಶ್ ಕುಮಾರ್ ಅವರನ್ನು ಅಧಿಕಾರಕ್ಕೆ ತಂದಿತು. ಅಂದಿನಿಂದ ಇಂದಿನವರೆಗೂ ಮಹಿಳಾ ಮತದಾರರ ಸಂಖ್ಯೆಯು ಗಮನಾರ್ಹವಾಗಿ ಏರಿಕೆ ಕಂಡಿದೆ. 2010ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರು 10% ಕ್ಕಿಂತ ಹೆಚ್ಚು 54.48% ಕ್ಕೆ ಏರಿಕೆ ಕಂಡರೆ ಪುರುಷರ ಪ್ರಮಾಣ 51.12%ರಷ್ಟಿದೆ. 2015 ರ ಚುನಾವಣೆಯಲ್ಲಿ, ಮಹಿಳಾ ಮತದಾರರ ಪಾಲು 60% ದಾಟಿದರೆ, ಪುರುಷರ ಪ್ರಮಾಣ 2% ರಷ್ಟು ಹೆಚ್ಚಳ ಕಂಡಿದೆ.
ಜೆಡಿಯು ಮಹಿಳೆಯರ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾರಣ 2019ರ ಲೋಕಸಭಾ ಚುನಾವಣೆಯಲ್ಲೂ ಈ ಪ್ರವೃತ್ತಿ ಮುಂದುವರಿಯಿತು. 59.58% (ಒಟ್ಟು 1.99 ಕೋಟಿ) ಮಹಿಳೆಯರು, 55% (2.08 ಕೋಟಿ) ಪುರುಷರು ಮತ ಚಲಾಯಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ ಮತದಾನದ ಶೇಕಡಾ 67.09% ಮತ ಚಲಾಯಿಸಿದ್ದರೆ ಅದರಲ್ಲಿ ಪುರುಷರಿಗೆ 67.01%, ಮಹಿಳೆಯರ 67.18% ಪಾಲಿತ್ತು.