ಹಾವೇರಿ: ಸಚಿವ ಬಿ.ಸಿ.ಪಾಟೀಲ್ ಆಸ್ಪತ್ರೆಯ ಸಿಬ್ಬಂದಿಯನ್ನ ಕರೆಸಿ ಪತ್ನಿ ಜೊತೆ ಲಸಿಕೆ ಪಡೆದಿದ್ದಾರೆ ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ, ಕಾಂಗ್ರೆಸ್ ಟ್ವಿಟ್ಟರ್ ವಾರ್ ಪ್ರಾರಂಭವಾಗಿದೆ.
Advertisement
ಬಿ.ಸಿ ಪಾಟೀಲ್ ಅವರು ಮನೆಯಲ್ಲೇ ಕರೆಸಿಕೊಂಡು ಲಸಿಕೆ ಪಡೆಯುತ್ತಿದ್ದಾರೆ, ಆರೋಗ್ಯ ಇಲಾಖೆ ಸಿಬ್ಬಂದಿ ಏನು ನಿಮ್ಮ ಮನೆಯ ಆಳುಗಳೇ? ಅಧಿಕಾರವಿರುವುದು ಜನಸೇವೆ ಮಾಡಲು ಹೊರತು ಜನರಿಂದ ಸೇವೆ ಮಾಡಿಸಿಕೊಳ್ಳಲಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿತ್ತು.
Advertisement
ನೆಹರೂ ಅವರು ತನ್ನಿಷ್ಟದ 555 ಸಿಗರೇಟ್ ಪ್ಯಾಕ್ ಸಿಗಲಿಲ್ಲವೆಂದು ಭೋಪಾಲ್ನಿಂದ ಇಂಧೋರಿಗೆ ವಿಮಾನವನ್ನೇ ಕಳುಹಿಸಿದ್ದು ಯಾವ ರೀತಿಯ ಜನ ಸೇವೆ @INCKarnataka?
ನೆಹರೂ ಅವರೇನು ಮಹಾರಾಜರಾಗಿದ್ದರೇ ಅಥವಾ ಅವರಿಗೆ ಪ್ರಜಾಪ್ರಭುತ್ವ ಅನ್ವಯಿಸುತ್ತಿರಲಿಲ್ಲವೇ?
ಸಿಗರೇಟ್ ಸೇದುವುದಕ್ಕೂ ಔಷಧಿ ಪಡೆಯುವುದಕ್ಕೂ ತುಂಬಾ ವ್ಯತ್ಯಾಸವಿದೆ! https://t.co/qrggjR3q4N
— BJP Karnataka (@BJP4Karnataka) March 2, 2021
Advertisement
ಬಿ.ಸಿ ಪಾಟೀಲ್ ನಡೆ ಖಂಡಿಸಿ ಕಾಂಗ್ರೆಸ್ ಮಾಡಿದ್ದ ಟ್ವೀಟ್ಗೆ ಬಿಜೆಪಿ ಬಿಸಿ ಪಾಟೀಲ್ ವಿಚಾರಕ್ಕೆ ನೆಹರೂರವರ ಸಿಗರೇಟ್ ವಿಚಾರವನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿದೆ.
Advertisement
ನೆಹರೂ ಅವರು ತನ್ನಿಷ್ಟದ 555 ಸಿಗರೇಟ್ ಪ್ಯಾಕ್ ಸಿಗಲಿಲ್ಲವೆಂದು ಭೋಪಾಲ್ನಿಂದ ಇಂಧೋರಿಗೆ ವಿಮಾನವನ್ನೇ ಕಳುಹಿಸಿದ್ದು ಯಾವ ರೀತಿಯ ಜನ ಸೇವೆ ಕಾಂಗ್ರೆಸ್? ನೆಹರೂ ಅವರೇನು ಮಹಾರಾಜರಾಗಿದ್ದರೆ ಅಥವಾ ಅವರಿಗೆ ಪ್ರಜಾಪ್ರಭುತ್ವ ಅನ್ವಯಿಸುತ್ತಿರಲಿಲ್ಲವೇ? ಸಿಗರೇಟ್ ಸೇದುವುದಕ್ಕೂ ಲಸಿಕೆ ಪಡೆಯುವುದಕ್ಕೂ ತುಂಬಾ ವ್ಯತ್ಯಾಸವಿದೆ ಎಂದು ಟ್ವೀಟ್ ಮಡುವ ಮೂಲಕವಾಗಿ ಬಿಜೆಪಿ ತಿರುಗೇಟು ನೀಡಿದೆ.
ಸಚಿವ @bcpatilkourava ಅವರು ಮನೆಯಲ್ಲೇ ಕರೆಸಿಕೊಂಡು ಲಸಿಕೆ ಪಡೆಯುತ್ತಿದ್ದಾರೆ, ಆರೋಗ್ಯ ಇಲಾಖೆ ಸಿಬ್ಬಂದಿ ಏನು ನಿಮ್ಮ ಮನೆಯ ಆಳುಗಳೇ?
ಅಧಿಕಾರವಿರುವುದು ಜನಸೇವೆ ಮಾಡಲು ಹೊರತು ಜನರಿಂದ ಸೇವೆ ಮಾಡಿಸಿಕೊಳ್ಳಲಲ್ಲ ಎಂದು@BJP4Karnataka ಅರ್ಥ ಮಾಡಿಕೊಳ್ಳಬೇಕು. pic.twitter.com/5LKsj88Cah
— Karnataka Congress (@INCKarnataka) March 2, 2021
ಮನೆಯಲ್ಲಿ ಲಸಿಕೆ ಪಡೆದ ವಿವಿಐಪಿ ಸಂಸ್ಕøತಿಯ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಇವತ್ತು ನನ್ನನ್ನು ಭೇಟಿಯಾಗಲು ಹಲವು ಜನರು ಬಂದಿದ್ದರು. ಆಸ್ಪತ್ರೆಗೆ ಹೋದ್ರೆ ಅರ್ಧ ಗಂಟೆ ಕಾಯಬೇಕಾಗಿತ್ತು. ಸ್ವಾಮಿ ಕಾರ್ಯದ ಜೊತೆಗೆ ಸ್ವ ಕಾರ್ಯ ಸಹ ಅಗಬೇಕು. ಆದರೆ ಇದನ್ನು ವಿವಾದ ಅಂತ ಹೇಳಿದ್ರೆ ಏನು ಮಾಡಲು ಸಾಧ್ಯ? ವಿವಾದ ಅಂತ ಮಾಧ್ಯಮದವರು ಹೇಳಿದ್ರೆ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಳ್ಳುತ್ತಿದ್ದೆ ಎಂದು ತಮ್ಮ ನಡೆಯನ್ನ ಸಮರ್ಥಿಸಿಕೊಂಡು ಹಾರಿಕೆಯ ಉತ್ತರ ನೀಡಿದ್ದರು.