ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂ) ಎಡವಟ್ಟಿನಿಂದ ಮಹಿಳೆಯೊಬ್ಬರು 5 ದಿನಗಳ ಕಾಲ ಕಸದೊಂದಿಗೆ ಜೀವನ ನಡೆಸಿದ ಘಟನೆಯೊಂದು ಸಿಲಿಕಾನ್ ಸಿಟಿಯ ಸರ್ ಸಿ.ವಿ ರಾಮ್ ನಗರದಲ್ಲಿ ನಡೆದಿದೆ.
ಹೌದು. ನಿಧಿ ಧಿಂಗ್ರಾ(37) ಅವರ ಪತಿ ಹಾಗೂ ಅತ್ತೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿಧಿ ಮನೆ ಮುಂದೆ ಬಿಬಿಎಂ ಸಿಬ್ಬಂದಿ ಬೃಹತ್ ಬ್ಯಾರಿಕೇಡ್ ಹಾಕಿದ್ದಾರೆ. ಕಂಟೆಂಟ್ ಕ್ರಿಯೆಟರ್ ಆಗಿ ಕೆಲಸ ಮಾಡುತ್ತಿದ್ದ ನಿಧಿ ಕುಟುಂಬದ ಇಬ್ಬರು ಕೊರೊನಾ ವೈರಸ್ ಪಾಸಿಟಿವ್ ಬಂದು ಕೋವಿಡ್ ಸೆಂಟರಿನಲ್ಲಿ ದಾಖಲಾಗಿದ್ದರಿಂದ ಈಕೆ ಮನೆಯಲ್ಲಿ ಒಬ್ಬಳೇ ಇದ್ದರು.
Advertisement
Advertisement
ಆಗಸ್ಟ್ 8 ರಂದು ನಿಧಿ ಪತಿ ಹಾಗೂ ಅತ್ತೆಯನ್ನು ಕೋವಿಡ್ ಸೆಂಟರ್ ಗೆ ಸೇರಿಸಿದ ಬಳಿಕ ಮರುದಿನ ಬಿಬಿಎಂಪಿ ಸಿಬ್ಬಂದಿ ಬಂದು ಮನೆಯನ್ನು ಸ್ಯಾನಿಟೈಸ್ ಮಾಡಿದ್ದಾರೆ. ಆದರೆ ನಿಧಿಗೆ ಕೊರೊನಾ ನೆಗೆಟಿವ್ ಇದ್ದರೂ ಮನೆಯನ್ನು ಎರಡು ದಿನಗಳ ಬಳಿಕ ಸೀಲ್ ಡೌನ್ ಮಾಡಿದ್ದಾರೆ. ಹೀಗಾಗಿ ಆಕೆಗೆ ಮನೆಯಿಂದ ಹೊರ ಬರಲಾಗದೆ ಕಸದೊಂದಿಗೆ ಜೀವನ ಮಾಡುವಂತಾಗಿತ್ತು.
Advertisement
Advertisement
ಮನೆಯಲ್ಲಿ ಕ್ವಾರಂಟೈನ್ ಆಗಿರುವವರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಸ ವಿಲೇವಾರಿ ಮಾಡಬಹುದಾಗಿದೆ. ಕಂಟೈನ್ಮಂಟ್ ಝೋನ್ ಗಳಲ್ಲಿ ಮಾತ್ರ ಕೋವಿಡ್ ನಿಯಮ ಅನ್ವಯವಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ ರಂದೀಪ್ ತಿಳಿಸಿದ್ದಾರೆ.
ನಿಧಿ ಎರಡು ಬಾರಿ ಮಾಸ್ಕ್ ಧರಿಸದೇ ಹೊರಗಡೆ ಬಂದಿದ್ದಾರೆ. ಆದರೆ ಅವರು ತನ್ನ ಎದುರು ಇರುವವರಿಂದ 6 ಅಡಿ ಅಂತರ ಕಾಯ್ದುಕೊಂಡಿದ್ದರು. ಈ ಬಗ್ಗೆ ಮಾತನಾಡಿರುವ ನಿಧಿ, ತನಗೆ ಬೇಕಾದ ಅಗತ್ಯ ವಸ್ತುಗಳು ಹಾಗೂ ತ್ಯಾಜ್ಯ ವಿಲೇವಾರಿ ಮಾಡಲು ಮಾತ್ರ ಮನೆಯಿಂದ ಹೊರಗಡೆ ಬರುತ್ತೇನೆ. ಇಲ್ಲವೆಂದರೆ ನಾನು ಮನೆಯಿಂದ ಹೊರಗಡೆ ಕಾಲಿಡುತ್ತಿರಲಿಲ್ಲ. ಯಾಕೆಂದರೆ ನನಗೆ ಸಾಂಕ್ರಾಮಿಕ ರೋಗದ ತೀವ್ರತೆಯ ಬಗ್ಗೆ ತಿಳಿದಿದೆ ಎಂದು ಹೇಳಿದ್ದಾರೆ.
ಇತ್ತ ಸೋಂಕಿತರ ಮನೆಯಿಂದ ಕಸ ತೆಗೆದುಕೊಳ್ಳಲು ಕೂಡ ನಿಯಮವಿದೆ. ಸೋಂಕಿತರ ಮನೆಯ ವ್ಯಕ್ತಿ ಕಸ ತೆಗೆದುಕೊಂಡು ಬಂದು ಹೊರಗಡೆ ಇಟ್ಟು ಹೋಗಬೇಕು. ಇತ್ತ ಅದನ್ನು ಪಡೆದುಕೊಳ್ಳಲೆಂದೇ ಬೇರೆ ಸಿಬ್ಬಂದಿ ಹಾಗೂ ವಾಹನ ಇದೆ. ಸಿಬ್ಬಂದಿ ಮಾಸ್ಕ್ ಹಾಗೂ ಕೈಗೆ ಗ್ಲೌಸ್ ಹಾಕಿಕೊಂಡು ಬಂದು ಕಸವನ್ನು ತೆಗೆದುಕೊಂಡು ಹೋಗುತ್ತಾರೆ.
ಕಳೆದ ತಿಂಗಳು ಶೀಟ್ ಹಾಕಿ ಸೋಂಕಿತರ ಮನೆಯ ಬಾಗಿಲನ್ನೇ ಬಿಬಿಎಂಪಿ ಸಿಬ್ಬಂದಿ ಸೀಲ್ ಡೌನ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹಲವಾರು ಟೀಕೆಗಳು ವ್ಯಕ್ತವಾಗಿದ್ದವು.