ಬೆಂಗಳೂರು: ರಾಜ್ಯ ಸರ್ಕಾರ ಬಿಬಿಎಂಪಿ ಎಲೆಕ್ಷನ್ಗೆ ಸದ್ದಿಲ್ಲದೇ ಸಿದ್ಧತೆ ನಡೆಸುತ್ತಿದೆ. ಬಿಬಿಎಂಪಿಯ 198 ವಾರ್ಡ್ ಗಳ ಮೀಸಲಾತಿ ಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.
Advertisement
ಇಂದು ಬಿಬಿಎಂಪಿ ವಾರ್ಡ್ವಾರು ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದ್ದ ಬಹುತೇಕ ವಾರ್ಡ್ಗಳ ಮೀಸಲಾತಿ ಬದಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಲವು ವಾರ್ಡ್ಗಳನ್ನು ಕೈಬಿಟ್ಟು, ಹೊಸ ವಾರ್ಡ್ ಸೃಷ್ಟಿ ಮಾಡಲಾಗಿದೆ.
Advertisement
Advertisement
ಮಾಜಿ ಮೇಯರ್ ಗಂಗಾಂಬಿಕೆ ಪ್ರತಿನಿಧಿಸುತ್ತಿದ್ದ ವಾರ್ಡ್ ನಾಪತ್ತೆಯಾಗಿದೆ. ಬಿಬಿಎಂಪಿ ವಿಪಕ್ಷ ನಾಯಕ ವಾಜೀದ್ ಪ್ರತಿನಿಧಿಸುತ್ತಿದ್ದ ವಾರ್ಡ್ನ್ನು ಮಹಿಳೆಯರಿಗೆ ಮೀಸಲು ಇರಿಸಲಾಗಿದೆ. ಮಾಜಿ ಆಡಳಿತ ಪಕ್ಷ ನಾಯಕ ಶಿವರಾಜ್ ಪ್ರತಿನಿಧಿಸುತ್ತಿದ್ದ ವಾರ್ಡ್ನ್ನು ಸಾಮಾನ್ಯ ಮಹಿಳೆಗೆ ಮೀಸಲು ಇಡಲಾಗಿದೆ. ಚಿಕ್ಕಪೇಟೆಯ ಏಳು ವಾರ್ಡ್ಗಳನ್ನು ಐದಕ್ಕೆ ಇಳಿಸಲಾಗಿದೆ. ಮಾಜಿ ಶಾಸಕ ಆರ್ ದೇವರಾಜ್ ಪುತ್ರ ಪ್ರತಿನಿಧಿಸುತ್ತಿದ್ದ ವಾರ್ಡ್ ಸಹ ಮಾಯವಾಗಿದೆ. ಹೊಂಬೆಗೌಡ ನಗರ ವಾರ್ಡ್ ಸಹ ಇಲ್ಲವಾಗಿದೆ. ಮಹಿಳೆಯರಿಗೆ 98 ವಾರ್ಡ್ ಮೀಸಲು ಇರಿಸಲಾಗಿದೆ.
Advertisement
ಕಾರ್ಪೋರೆಟರ್ ಗಳ ಅಧಿಕಾರವಧಿ ಅಂತ್ಯವಾಗಿರೋ ಹಿನ್ನೆಲೆಯಲ್ಲಿ ಪ್ರತಿಯೊಂದು ವಾರ್ಡ್ಗೂ ಶೀಘ್ರದಲ್ಲೇ ನೋಡೆಲ್ ಅಧಿಕಾರಿ ನೇಮಕ ಮಾಡಲು ಸರ್ಕಾರ ಮುಂದಾಗಿದೆ. ಬಿಬಿಎಂಪಿ ಮೀಸಲಾತಿ ಪಟ್ಟಿಗೆ 7 ದಿನಗಳ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಲಿಖಿತ ರೂಪದಲ್ಲಿ ಬೆಂಗಳೂರು ಜಿಲ್ಲಾಧಿಕಾರಿಗೆ ಸಲ್ಲಿಸಬಹುದಾಗಿದೆ.