ನವದೆಹಲಿ: ದೇಶದ ಮಾರುಕಟ್ಟೆಗೆ ಬರ್ಡ್ ಎಲೆಕ್ಟ್ರಿಕ್ ಸ್ಕೂಟರ್ ಲಗ್ಗೆ ಇಡಲಿದೆ. ಇಎಸ್1+ ಹೆಸರಿನ ಸ್ಕೂಟರ್ ಅನ್ನು 2021ರ ಮಧ್ಯ ಭಾಗದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದು, ಇದರ ದೆಹಲಿ ಎಕ್ಸ್ ಶೋರೂಮ್ ಬೆಲೆ 50 ಸಾವಿರ ಇರಲಿದೆ ಎಂದು ಅಂದಾಜಿಸಲಾಗಿದೆ.
ಬರ್ಡ್ ಗ್ರೂಪ್ ಆಸ್ಟ್ರೇಲಿಯಾದ ವಿಮೋಟೋ ಜೊತೆ ಪರಸ್ಪರ ಒಡಂಬಡಿಕೆ ಮಾಡಿಕೊಂದ್ದು ಮಾರಾಟ ಹಕ್ಕನ್ನು ಪಡೆದುಕೊಂಡಿದೆ.ಈ ಒಪ್ಪಂದ ಅನ್ವಯ ವಿಮೋಟೋ ಅಭಿವೃದ್ಧಿ ಪಡಿಸಿದರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಮಾರಾಟ ಮಾಡಲಿದೆ.
Advertisement
Advertisement
ಆರಂಭದಲ್ಲಿ ದೆಹಲಿ ಎನ್ಸಿಆರ್ನಲ್ಲಿ ಬಿಡುಗಡೆಯಾಗಲಿದ್ದು ಬಳಿಕ ಟಯರ್ 1, ಟಯರ್ 2 ನಗರದಲ್ಲಿ ಸ್ಕೂಟರ್ ಬಿಡುಗಡೆಯಾಗಲಿದೆ.
Advertisement
ಗುಣ ವೈಶಿಷ್ಟತೆ ಏನು?
ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ಟೇಲ್ ಲ್ಯಾಂಪ್, ಸ್ಪ್ಪಿಟ್ ಸೀಟರ್ ಮತ್ತು ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, 1782 ಮೀ.ಮೀ ಉದ್ದ, 727 ಮಿ.ಮೀ ಅಗಲ, 1087 ಮಿ.ಮೀ ಎತ್ತರವನ್ನು ಹೊಂದಿದೆ. 140 ಮಿ.ಮೀ ಗ್ರೌಂಡ್ ಕ್ಲಿಯರನ್ಸ್ ಇದ್ದು ಒಟ್ಟು 62 ಕೆಜಿ ತೂಕವನ್ನು ಹೊಂದಿದೆ.
Advertisement
ಬ್ಯಾಟರಿ 3ಎಎಚ್ ಲಿಥಿಯಾನ್ ಐಯಾನ್ ಬ್ಯಾಟರಿ ಮತ್ತು 1.6 ಕೆಡಬ್ಲ್ಯೂ ಎಲೆಕ್ಟ್ರಿಕ್ ಬ್ಯಾಟರಿ ಒಳಗೊಂಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 55 ಕಿ.ಮೀ ದೂರದವರೆಗೆ ಸಂಚರಿಸಬಹುದು. ಗಂಟೆಗೆ 45 ಕಿ.ಮೀ ವೇಗದಲ್ಲಿ ಈ ಸ್ಕೂಟರ್ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.