ಬೆಂಗಳೂರು: ರಾಜ್ಯದಲ್ಲಿ ವೀಕೆಂಡ್ ಲಾಕ್ಡೌನ್ ಮಧ್ಯೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಮಧುಮಗನೊಬ್ಬ ಬಿಟ್ ಬಿಡಿ ಸಾರ್ ನಾನೇ ಮದ್ವೆ ಗಂಡು ಎಂದು ಪೊಲೀಸರಿಗೆ ಮನವಿ ಮಾಡಿಕೊಂಡು ಮದುವೆಗೆ ತೆರಳಿರುವ ಘಟನೆ ನಗರದ ಮಾಗಡಿ ರಸ್ತೆಯಲ್ಲಿ ನಡೆದಿದೆ.
Advertisement
ಬೆಂಗಳೂರಿನ ಪ್ರಮುಖ ರಸ್ತೆಗಳನ್ನು ಮುಚ್ಚಿ ವೀಕೆಂಡ್ ಲಾಕ್ಡೌನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು, ಅನಗತ್ಯ ರೋಡ್ಗಿಳಿಯುವವರ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಹಾಗಾಗಿ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವವರನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಇಂದು ಮಾಗಡಿ ರೋಡ್ನಲ್ಲಿ ಪೊಲೀಸರು ಬೆಳಗ್ಗೆ ತಪಾಸಣೆಗೆ ಇಳಿದಿದ್ದರು. ಈ ವೇಳೆ ಬೈಕ್ನಲ್ಲಿ ಬಂದಾತನೊಬ್ಬ ಮದ್ವೆ ಸಾರ್, ಮದ್ವೆ ಸಾರ್ ನನ್ನನ್ನು ಬಿಡಿ ಎಂದಿದ್ದಾನೆ. ಪೊಲೀಸರು ಕೊಡಪ್ಪ ಮದ್ವೆ ಕಾರ್ಡ್ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆತ ನಾನೇ ಮದ್ವೆ ಗಂಡು ನನ್ನ ನಂಬಿ ಎಂದು ಖಾಕಿಗಳಿಗೆ ರಿಕ್ವೆಸ್ಟ್ ಮಾಡಿಕೊಂಡಿದ್ದಾನೆ.
Advertisement
Advertisement
ವರ ಎಷ್ಟೇ ಕೇಳಿಕೊಂಡರು ನಂಬದ ಪೊಲೀಸರು ಮದುವೆ ಕಾರ್ಡ್ ತೋರಿಸುವಂತೆ ತಿಳಿಸಿದ್ದಾರೆ. ಕೊನೆಗೆ ತಡಕಾಡಿ ಮದುವೆಯ ಆಮಂತ್ರಣ ಪತ್ರವನ್ನು ಪೊಲೀಸರ ಕೈಗೆ ನೀಡಿದ್ದಾನೆ. ನಂತರ ಪೊಲೀಸರು ಆತನೊಂದಿಗೆ ಅಲ್ಲಪ್ಪ ನೀನೇ ಮದುವೆ ಗಂಡು ಆದರೂ ಬೈಕ್ ನಲ್ಲಿ ಬಂದಿದ್ದೀಯಾ ಎಂದು ಪೊಲೀಸರು ಹಾಸ್ಯಚಟಾಕಿ ಹಾರಿಸಿದ್ದಾರೆ. ಹತ್ತು ಗಂಟೆಗೆ ಮುಹೂರ್ತ ಟೈಂ ಆಯ್ತು. ಹಾಗಾಗಿ ಬೈಕ್ನಲ್ಲಿ ಬಂದೆ ದೇವಸ್ಥಾನದಲ್ಲಿ ಸಿಂಪಲ್ ಮದ್ವೆ ಎಂದು ಉತ್ತರಿಸಿದ್ದಾನೆ. ಇದನ್ನು ಕಂಡ ಪೊಲೀಸರು ಮಧುಮಗನಿಗೆ ಶುಭಕೋರಿ ಮದುವೆಗೆ ಕಳಿಸಿಕೊಟ್ಟಿದ್ದಾರೆ.
Advertisement