ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಯಾಗುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರೋಧಿ ಬಣ ಮತ್ತೆ ದೆಹಲಿಗೆ ಭೇಟಿ ಕೊಟ್ಟಿದೆ. ಶುಕ್ರವಾರ ತಡರಾತ್ರಿಯೇ ಶಾಸಕ ಅರವಿಂದ್ ಬೆಲ್ಲದ್ ಅವರು ರಾಷ್ಟ್ರ ರಾಜಧಾನಿಗೆ ಪಯಣ ಬೆಳೆಸಿದ್ದಾರೆ.
‘ನಾನೇ ಸಿಎಂ’ ಎಂಬ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹೇಳಿಕೆ ಬೆನ್ನಲ್ಲೇ ಬೆಲ್ಲದ್ ದೆಹಲಿಗೆ ತೆರಳಿರುವುದು ಭಾರೀ ಕುತೂಹಲ ಮೂಡಿಸಿದೆ. ಶಾಸಕರು ದೆಹಲಿಯ ಖಾಸಗಿ ಹೋಟೆಲ್ನಲ್ಲಿ ತಂಗಿದ್ದಾರೆ.
Advertisement
Advertisement
ಕಳೆದ ಮೇ 24 ರಂದು ಸಚಿವ ಸಿ.ಪಿ ಯೋಗೇಶ್ವರ್ ಜೊತೆ ಬೆಲ್ಲದ್ ಹೋಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ವರಿಷ್ಠರ ಭೇಟಿ ಸಾಧ್ಯವಾಗಿರಲಿಲ್ಲ. ಈಗ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ಬೆನ್ನಲ್ಲೇ ದೆಹಲಿಗೆ ಬೆಲ್ಲದ್ ದೌಡಾಯಿಸಿದ್ದಾರೆ. ಈ ಮೂಲಕ ಬೆಲ್ಲದ್ ಬೆನ್ನಲ್ಲೆ ಮತ್ತಷ್ಟು ಭಿನ್ನರು ದೆಹಲಿಗೆ ಹೋಗ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
Advertisement
Advertisement
ಸಚಿವ ಸಿ ಪಿ ಯೋಗೇಶ್ವರ್ ಜೂನ್ 14 ರವರೆಗೂ ಸುಮ್ಮನೆ ಇರುವಂತೆ ವರಿಷ್ಠರು ಸಂದೇಶ ಬಂದಿತ್ತು ಅಂತ ಆಪ್ತರ ಬಳಿ ಹೇಳಿಕೊಂಡಿದ್ದರು. ಆದರೆ ಇದೀಗ ಭಿನ್ನರು 14ಕ್ಕೂ ಮುನ್ನವೇ ಅರುಣ್ ಸಿಂಗ್ ಹೇಳಿಕೆಯಿಂದ ಮತ್ತೆ ಅಖಾಡಕ್ಕಿಲಿದ್ರಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಜೂನ್ 16ಕ್ಕೆ ಅರುಣ್ ಸಿಂಗ್ ರಾಜ್ಯ ಪ್ರವಾಸ ಫಿಕ್ಸ್: ಮೂರು ದಿನಗಳ ಭೇಟಿ ಕುತೂಹಲ
ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಅರುಣ್ ಸಿಂಗ್ ಅವರು, ಸಿಎಂ ಬದಲಾವಣೆಯ ಪ್ತಸ್ತಾಪವೇ ಇಲ್ಲ ಎಮದು ಹೇಳಿದ್ದರು. ಇತ್ತ ಮುಖ್ಯಮಂತ್ರಿಗಳು ಕೂಡ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿ, ಎರಡು ವರ್ಷ ನಾನೇ ಸಿಎಂ ಆಗಿ ಮುಂದುವರಿಯುವುದಾಗಿ ತಿಳಿಸಿದ್ದರು. ಈ ಮೂಲಕ ಉಹಾಪೋಹಗಳಿಗೆ ಫುಲ್ ಸ್ಟಾಪ್ ಬಿದ್ದಿದೆ. ಸದ್ಯ ಜೂನ್ 16ರಂದು ಅರುಣ್ ಸಿಂಗ್ ಅವರು ರಾಜ್ಯಕ್ಕೆ ಬರಲಿದ್ದು, ಅವರ ಭೇಟಿ ಕುತೂಹಲ ಮೂಡಿಸಿದೆ.