– ಯತ್ನಾಳ್, ಉಮೇಶ್ ಕತ್ತಿ, ನಡಹಳ್ಳಿ ಧ್ವನಿ ಬಂದ್ ಆಗಿದೆ
ಧಾರವಾಡ: ಬಿಜೆಪಿಯಲ್ಲಿ ಬಹಳಷ್ಟು ಜನ ತಮ್ಮ ಧ್ವನಿ ಕಳೆದುಕೊಂಡಿದ್ದಾರೆ, ಈಗ ಧ್ವನಿ ಏಳಲಿದೆ ಎಂದು ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಮಂತ್ರಿಯಾಗಬೇಕು ಎನ್ನುವವರು ಬಹಳಷ್ಟು ಜನ ಇದಾರೆ, ಯತ್ನಾಳ್ ಹಾಗೂ ಉಮೇಶ ಕತ್ತಿ ಅವರ ಧ್ವನಿ ಬಂದ್ ಆಗಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎನ್ನುವ ನಡಹಳ್ಳಿ ಅವರ ಧ್ವನಿ ಬಂದ್ ಆಗಿದೆ. ಪಕ್ಷದಲ್ಲಿ ಬಹಳಷ್ಟು ಜನ ತಮ್ಮ ಧ್ವನಿ ಕಳೆದುಕೊಂಡಿದ್ದಾರೆ. ಈಗ ಧ್ವನಿ ಏಳಲಿದೆ ಎಂದು ಕೊನರೆಡ್ಡಿ ಹೇಳಿದರು. ಇದನ್ನೂ ಓದಿ: ರಾಜಕೀಯ ಚರ್ಚಿಸಲು ಕ್ಯಾಸಿನೋಗೆ ಯಾಕೆ ಹೋಗಬಾರದು: ಹೊರಟ್ಟಿ ಪ್ರಶ್ನೆ
Advertisement
Advertisement
ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಭೇಟಿ ವಿಚಾರದಲ್ಲಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಅದನ್ನು ರಾಜಕೀಯ ಗೊಳಿಸಲು ಸುದ್ದಿ ಹೊರಹಾಕಲಾಗಿದೆ ಅಷ್ಟೇ. ಇತ್ತ ಕುಮಾರಸ್ವಾಮಿ ಅವರು ಕೊಲಂಬೋದಲ್ಲಿ ಪಕ್ಷದ ಸಭೆಗಾಗಿ ಹೋಗಿದ್ದು ಎಂದು ಸ್ಪಷ್ಟ ಪಡಿಸಿದ್ದಾರೆ. ಸಿದ್ದರಾಮಯ್ಯನವರು ಈ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ, ಆದರೆ ತನಿಖೆ ಮುಗಿಯುವವರೆಗೆ ಯಾವ ರಾಜಕಾರಣಿಗಳು ಮಾತನಾಡದೇ ಇರುವದು ಒಳ್ಳೆಯದು. ಪ್ರಕರಣದ ತನಿಖೆ ಮಾಡಲು ಮೊದಲು ಬೀಡೋಣ ನಂತರ ಒಂದು ತೀರ್ಮಾನಕ್ಕೆ ಬರಬಹುದು. ಕೊಲಂಬೋಗೆ ಹೋದರವರೆಲ್ಲ ಕ್ಯಾಸಿನೋಗೆ ಹೋಗುತ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಎಸ್ವೈ ಮನೆಯಲ್ಲಿ ವಾಚ್ಮ್ಯಾನ್ ಕೆಲಸ ಖಾಲಿ ಇದೆ: ಸಿಟಿ ರವಿ