ಬಾಗಲಕೋಟೆ: ಮಹಲಿಂಗಪುರ ಪುರಸಭೆ ಸದಸ್ಯೆಯರ ತಳ್ಳಾಟ ನೂಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸದಸ್ಯೆಗೆ ಗರ್ಭಪಾತವಾಗಿದೆ.
ಚಾಂದಿನಿ ನಾಯಕ್ ಗರ್ಭಪಾತವಾದ ಪುರಸಭೆ ಸದಸ್ಯೆ. ಈಕೆಗೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಮಹಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಬಾರ್ಷನ್ ಆಗಿದೆ. ನವೆಂಬರ್ 9 ರಂದು ನಡೆದಿದ್ದ ಶಾಸಕರು ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ತಳ್ಳಾಟ ನೂಕಾಟದಿಂದ ಕೆಳಕ್ಕೆ ಬಿದ್ದಿದ್ದ ಚಾಂದಿನಿ ನಾಯಕ್ ಅವರ ಹೊಟ್ಟೆಗೆ ಏಟು ಬಿದ್ದಿತ್ತು. ಆಗ ಚಾಂದಿನಿ ಅವರು ಮೂರು ತಿಂಗಳು ಗರ್ಭಿಣಿಯಾಗಿದ್ದರು. ಇದೀಗ ಅವರಿಗೆ ಗರ್ಭಪಾತವಾಗಿದೆ. ಇದನ್ನೂ ಓದಿ: ಪುರಸಭೆಯ ಮಹಿಳಾ ಸದಸ್ಯೆಯನ್ನು ಎಳೆದಾಡಿ ಬಿಜೆಪಿ ಶಾಸಕ, ಬೆಂಬಲಿಗರ ಅಸಭ್ಯ ವರ್ತನೆ
Advertisement
Advertisement
ನಡೆದಿದ್ದೇನು?:
ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಸಂದರ್ಭದಲ್ಲಿ ಮಹಿಳೆಯೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಚುನಾವಣೆಯಲ್ಲಿ ಮತ ಚಲಾಯಿಸಲು ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಅವರು ತೆರಳುತ್ತಿದ್ದರು. ಈ ವೇಳೆ ಸವಿತಾ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ತೆರಳುತ್ತಿದ್ದಾರೆ ಎಂಬ ಮಾಹಿತಿ ಪಡೆದ ಶಾಸಕರು, ಸದಸ್ಯೆಯನ್ನು ಎಳೆದಾಡಿ ಗೂಂಡಾ ವರ್ತನೆ ತೋರಿದ್ದರು. ಶಾಸಕರು ದೌರ್ಜನ್ಯ ನಡೆಸಿರುವ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯನ್ನು ಎಳೆದಾಡಿ ಮೈ, ಕೈ ಮುಟ್ಟಿ ಅಮಾನವೀವಾಗಿ ವರ್ತನೆ ಮಾಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿತ್ತು. ಪೊಲೀಸರ ಸಮ್ಮುಖದಲ್ಲಿಯೇ ಇಂತಹ ಅಮಾನವೀಯ ಘಟನೆ ನಡೆದಿದ್ದು, ಬಿಜೆಪಿ ಸದಸ್ಯರ ಸಂಖ್ಯಾಬಲ ಹೆಚ್ಚಿಸಲು ಮಹಿಳಾ ಪುರಸಭೆ ಸದಸ್ಯೆಯೊಂದಿಗೆ ಅಮಾನವೀಯತೆಯಿಂದ ವರ್ತನೆ ಮಾಡಲಾಗಿತ್ತು. ಶಾಸಕರ ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ನಾನು ಮಹಿಳೆಯ ರಕ್ಷಣೆಗೆ ಮುಂದಾಗಿದ್ದೆ- ಅಸಭ್ಯ ವರ್ತನೆಗೆ ಸಿದ್ದು ಸವದಿ ಸಮರ್ಥನೆ
Advertisement
Advertisement
ಘಟನೆ ಸಂಬಂಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಚಾಂದಿನಿ ನಾಯ್ಕ್, ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ತೆರಳಿದ್ದೆವು. ಈ ವೇಳೆ ನಮಗೆ ಮತ ಚಲಾಯಿಸಲು ಅವಕಾಶ ನೀಡದೆ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಘಟನೆ ನಡೆಯುವ ಮುನ್ನವೇ ನಮಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದೆವು. ಆದರೆ ಅವರು ಯಾವುದೇ ರಕ್ಷಣೆ ನೀಡಲು ಮುಂದಾಗಲಿಲ್ಲ. ಶಾಸಕರು ಹಾಗೂ ಅವರ ಬೆಂಬಲಿಗರು ನಮ್ಮನ್ನು ಹಿಡಿದು ಎಳೆದಾಡಿ, ಮೆಟ್ಟಿಲು ಮೇಲಿನಿಂದ ತಳ್ಳಿ ತುಳಿದಾಡಿದ್ದರು. ಘಟನೆಯಿಂದ ಮಾಸಿಕವಾಗಿ, ದೈಹಿಕವಾಗಿ ನೋವಾಗಿದ್ದು, ನಮ್ಮ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನ್ಯಾಯ ಬೇಕಿದೆ ಎಂದು ಅಲವತ್ತುಕೊಂಡಿದ್ದರು. ಇದನ್ನೂ ಓದಿ: ಹಿಡಿದು, ಎಳೆದಾಡಿ, ಮೆಟ್ಟಿಲಿನಿಂದ ತಳ್ಳಿದ್ರು- ಪುರಸಭೆ ಸದಸ್ಯೆ ಕಣ್ಣೀರು