ಬೆಳಗಾವಿ: ಕುಂದಾ ನಗರಿ ಬೆಳಗಾವಿಯನ್ನ ತನ್ನಲ್ಲೇ ಉಳಿಸಿಕೊಳ್ಳಲು ಬಿಜೆಪಿ ಯಶಸ್ವಿಯಾದ್ರೆ, ಕಾಂಗ್ರೆಸ್ ವೀರೋಚಿತ ಸೋಲು ಕಂಡಿದೆ. ಬಿಜೆಪಿ ಗೆಲುವಿನ ಅಂತರ ನೋಟಾಗೆ ಬಿದ್ದ ಮತಗಳಿಂತ ಕಡಿಮೆ. ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ 5,240 ಮತಗಳ ಅಂತರದಿಂದ ಕಾಂಗ್ರೆಸ್ಸಿನ ಸತೀಶ್ ಜಾರಕಿಹೊಳಿ ವಿರುದ್ಧ ಗೆದ್ದಿದ್ದಾರೆ. ಆದ್ರೆ ಬೆಳಗಾವಿ ಲೋಕಸಭಾ ಕ್ಷೇತ್ರದ 10,631 ಜನರು ನೋಟಾಗೆ ಮತ ಚಲಾಯಿಸಿದ್ದಾರೆ.
Advertisement
ಸತೀಶ್ ಜಾರಕಿಹೊಳಿ ಶೇ.42.56 ಮತ್ತು ಮಂಗಳಾ ಅಂಗಡಿ ಶೇ.43.07ರಷ್ಟು ಮತ ಗಳಿಸಿದ್ದಾರೆ. ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್ ತನ್ನ ಮತಗಳನ್ನ ಗಟ್ಟಿ ಮಾಡಿಕೊಳ್ಳುವಲ್ಲಿ ಮೇಲ್ನೋಟಕ್ಕೆ ಯಶಸ್ವಿಯಾಗಿದ್ದು, ಇಂದು ಮುಂದಿನ ಚುನಾವಣೆಗೆ ಸ್ಫೂರ್ತಿ ಮತ್ತಿ ಹುಮ್ಮಸ್ಸು ನೀಡಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
Advertisement
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ @JarkiholiSatish ಅವರಿಗೆ ಅಭೂತಪೂರ್ವವಾಗಿ ಬೆಂಬಲಿಸಿದ ಮತದಾರರಿಗೆ ಕೃತಜ್ಞತೆಗಳು.
ಮತದಾರರ ತೀರ್ಪನ್ನು ಗೌರವಿಸುತ್ತಾ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನತೆಯ ನಂಬಿಕೆ ಹಾಗೂ ವಿಶ್ವಾಸವನ್ನು ಪಡೆಯಲು ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತೇವೆಂದು ಭರವಸೆ ನೀಡುತ್ತೇವೆ. pic.twitter.com/fDhUwrwasK
— Karnataka Congress (@INCKarnataka) May 2, 2021
Advertisement
ಸಾರ್ವತ್ರಿಕ ಚುನಾವಣೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸುರೇಶ್ ಅಂಗಡಿ ಗೆದ್ದಿದ್ದರು. ಆದ್ರೆ ಈ ಬಾರಿ ಅತ್ಯಲ್ಪ ಮತಗಳಿಂದ ಅಂತರದಿಂದ ಗೆಲ್ಲುವ ಮೂಲಕ ಬಿಜೆಪಿ ಸೇಫ್ ಆಗಿದೆ. ಬೆಳಗಾವಿ ಚುನಾವಣೆಯಲ್ಲಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ, ಜಗದೀಶ್ ಶೆಟ್ಟರ್ ಸೇರಿದಂತೆ ಇಡೀ ಕಮಲ ನಾಯಕರೇ ಪ್ರಚಾರ ನಡೆಸಿದ್ದರು. ಅದ್ಯಾಗಿಯೂ ಬಿಜೆಪಿಗೆ ದೊಡ್ಡ ಹೊಡೆತವನ್ನ ಬೆಳಗಾವಿ ಉಪ ಚುನಾವಣೆ ನೀಡಿದೆ.
Advertisement
ಇನ್ನೂ ಎಂಇಎಸ್ ನಿಂದ ಕಣಕ್ಕಿಳಿದಿದ್ದ ಶುಭಮ್ ವಿಕ್ರಾಂತ್ ಶೆಲ್ಕೆ 1,16,923 ಮತಗಳನ್ನ ಪಡೆದಿದ್ದಾರೆ. ಪ್ರತಿ ಬಾರಿ ಎಂಇಎಸ್ ನ ಪರೋಕ್ಷ ಬೆಂಬಲವನ್ನ ಬಿಜೆಪಿ ಪಡೆದುಕೊಳ್ಳುತ್ತಿತ್ತು. ಇದೇ ಕಾರಣದಿಂದ ಬಿಜೆಪಿಯ ಅತ್ಯಲ್ಪ ಮತಗಳ ಗೆಲುವಿಗೆ ಪ್ರಮುಖ ಕಾರಣ ಅಂತಾನೂ ಹೇಳಲಾಗುತ್ತಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಯ ಸಾಧಿಸಿದ ಶ್ರೀಮತಿ ಮಂಗಲ ಸುರೇಶ್ ಅಂಗಡಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿಗೆ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿದ ಮತದಾರರಿಗೆ ಧನ್ಯವಾದಗಳು.
@MangalAngadi | #BelagaviByElection2021 | @BJP4India pic.twitter.com/vlHzskaljc
— Jagadish Shettar (@JagadishShettar) May 2, 2021
ಯಾರಿಗೆ ಎಷ್ಟು ಮತ?
* ಮಂಗಳಾ ಅಂಗಡಿ (ಬಿಜೆಪಿ): 4,40,327 (ಇವಿಎಂ 4,36,868+ ಪೋಸ್ಟಲ್ 3,459) – ಶೇ.43.07
* ಸತೀಶ್ ಜಾರಕಿಹೊಳಿ (ಕಾಂಗ್ರೆಸ್): 4,35,087 (ಇವಿಎಂ 4,32,882+ಪೋಸ್ಟಲ್ 2,205) – ಶೇ.42.56
* ನೋಟಾ: 10,631 (ಇವಿಎಂ 10,563 + ಪೋಸ್ಟಲ್ 68) – ಶೇ.1.04
✌️✌️ #ThankYou! | #BJP4Belagavi
ನನ್ನ ಇಂದಿನ ಅಭೂತಪೂರ್ವ ಗೆಲುವಿಗೆ ಕಾರಣೀಭೂತರಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಆತ್ಮೀಯ ಮತ ಬಾಂಧವರಿಗೆ ಅನಂತಾನಂತ ಧನ್ಯವಾದಗಳು.
1/ pic.twitter.com/YR18Q0vfOp
— Mangal Suresh Angadi (@MangalSAngadi) May 2, 2021