ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ್ದು, ಬಿಜೆಪಿ ಹಾಗೂ ಆರ್ಎಸ್ಎಸ್ ದೇಶದಲ್ಲಿ ಫೇಸ್ಬುಕ್ ಹಾಗೂ ವಾಟ್ಸಪ್ ನಿಯಂತ್ರಿಸುತ್ತಿವೆ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ ಪ್ರಕಟವಾದ ಫೋಟೋಗಳನ್ನು ಟ್ವೀಟ್ ಮಾಡಿ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು, ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ದ್ವೇಷ ಭಾವನೆಯನ್ನು ಬಿತ್ತುತ್ತಿದ್ದು, ಮತದಾರರ ಮೇಲೆ ಪ್ರಭಾವ ಬೀರಲು ಇದನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
Advertisement
ರಾಹುಲ್ ಗಾಂಧಿ ಟ್ವೀಟ್ಗೆ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಪ್ರತಿಕ್ರಿಯಿಸಿದ್ದು, ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಈ ಕುರಿತು ಫೇಸ್ಬುಕ್ನಿಂದ ಸ್ಪಷ್ಟನೆ ಪಡೆಯಬೇಕು. ಅಲ್ಲದೆ ಭಾರತದಲ್ಲಿನ ದ್ವೇಷ ಭಾಷಣದ ಬಗ್ಗೆ ಅವರು ಏನು ಹೇಳುತ್ತಾರೆ ನೋಡಬೇಕಿದೆ ಎಂದಿದ್ದಾರೆ.
Advertisement
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪದ ಬಳಿಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಸಹ ಫೇಸ್ಬುಕ್ ಆರೋಪಿಸಿದ್ದು, ಫೇಸ್ಬುಕ್ ಸುಳ್ಳಿನ ವಾಹಕವಾಗಿದೆ. ಅಲ್ಲದೆ ಸಾಮಾಜಿಕ ಸಾಮರಸ್ಯ ಹಾಗೂ ತಾರ್ಕಿಕ ಚರ್ಚೆಗೆ ಬೆದರಿಕೆ ಒಡ್ಡಿದಂತಾಗಿದೆ. ಭಾರತದಲ್ಲಿ ದ್ವೇಷ ಭಾಷಣದ ಕುರಿತು ಅವರು ಏನು ಪ್ರಸ್ತಾಪಿಸುತ್ತಾರೆ. ಕೂಡಲೇ ಫೇಸ್ಬುಕ್ನ ಈ ಕ್ರಮದ ಕುರಿತು ತನಿಖೆ ನಡೆಸಬೇಕು ಎಂದು ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
Advertisement
BJP & RSS control Facebook & Whatsapp in India.
They spread fake news and hatred through it and use it to influence the electorate.
Finally, the American media has come out with the truth about Facebook. pic.twitter.com/Y29uCQjSRP
— Rahul Gandhi (@RahulGandhi) August 16, 2020
ಸಾಮಾಜಿಕ ಜಾಲತಾಣ ಸಂಸ್ಥೆ ಆಡಳಿತ ಪಕ್ಷ ಬಿಜೆಪಿ ನಾಯಕರು ಹಾಗೂ ಸದಸ್ಯರು ಮಾಡಿದ, ದ್ವೇಷಪೂರಿತ ಭಾಷಣಗಳನ್ನು ನಿರ್ಲಕ್ಷಿಸಿದೆ. ಅಲ್ಲದೆ ಸಾಮಾಜಿಕ ಜಾಲತಾಣ ಸಂಸ್ಥೆಯ ಹಿರಿಯ ಅಧಿಕಾರಿ ಬಗ್ಗೆ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ.
ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಮಾಡಬೇಕೆಂಬ ಕರೆಯನ್ನು ಫೇಸ್ಬುಕ್ನ ಭಾರತದ ಹಿರಿಯ ನೀತಿ ಕಾರ್ಯನಿರ್ವಾಹಕ ಅಧಿಕಾರಿ ತಿರಸ್ಕರಿಸಿದ್ದಾರೆ. ಭಾರತದ ಮಾರುಕಟ್ಟೆ ಮುಖ್ಯ ಎಂದು ಅವರು ಹೇಳಿರುವುದಾಗಿ ಫೇಸ್ಬುಕ್ ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.
ಹೈದರಾಬಾದ್ನ ಗೋಶಮಹಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಟಿ.ರಾಜಾ ಸಿಂಗ್ ರೋಹಿಂಗ್ಯಾಗಳ ಮೇಲೆ ಗುಂಡು ಹಾರಿಸಬೇಕೆಂಬ ಕೋಮುವಾದಿ ಹೇಳಿಕೆ ನೀಡಿದ್ದರು. ಅಲ್ಲದೆ ಮುಸ್ಲಿಮರನ್ನು ದೇಶದ್ರೋಹಿಗಳೆಂದು ಕರೆದಿದ್ದು, ಮಸೀದಿಗಳನ್ನು ಧ್ವಂಸ ಮಾಡುವ ಬೆದರಿಕೆ ಹಾಕಿದ್ದರು.
ಇದೀಗ ಕಾಂಗ್ರೆಸ್ ಐಟಿ ಸೆಲ್ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದು, #AntiIndiaFacebook ನೊಂದಿಗೆ ಪೋಸ್ಟ್ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.