ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿ ಇಬ್ಬರು ಜೈಲು ಪಾಲಾಗಿದ್ದಾರೆ.
ವೆಂಕಟೇಶ್, ಪ್ರಶಾಂತ್ ಆಸ್ಪತ್ರೆ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಜೈಲು ಸೇರಿರೋ ಆರೋಪಿಗಳು. ಆರೋಪಿಗಳ ಸಂಬಂಧಿಕರಿಗೆ ನಾಲ್ಕು ದಿನದ ಹಿಂದೆ ಕೊರೊನಾ ಬಂದಿದೆ. ಆರೋಗ್ಯದಲ್ಲಿ ಏರುಪೇರು ಆದಾಗ ಬಿಎಜಿಎಸ್ ಆಸ್ಪತ್ರೆ ಬಂದು ಆಡ್ಮಿಟ್ ಆಗಿದ್ದಾರೆ.
Advertisement
Advertisement
ಆರೋಪಿಗಳಾದ ವೆಂಕಟೇಶ್ ಮತ್ತು ಪ್ರಶಾಂತ್ ನಿನ್ನೆ ಆರೋಗಿಯನ್ನ ನೋಡೊದಕ್ಕೆ ಬಂದಿದ್ದಾರೆ. ನಾವು ರೋಗಿಯನ್ನ ನೋಡಬೇಕು ಬಿಡುವಂತೆ ಕೇಳಿಕೊಂಡಿದ್ದಾರೆ. ಕೋವಿಡ್ ಸೆಂಟರ್ ಗೆ ಬಿಡೋದಕ್ಕೆ ಆಗಲ್ಲ ಅಂತ ಭದ್ರತಾ ಸಿಬ್ಬಂದಿ ತಿಳಿ ಹೇಳಿದ್ದಾರೆ. ಅಷ್ಟಕ್ಕೆ ಸುಮ್ಮನಿರದ ಆರೋಪಿ ಪ್ರಶಾಂತ್ ಮತ್ತು ವೆಂಕಟೇಶ್ ಗಲಾಟೆ ಮಾಡಲು ಮುಂದಾಗಿದ್ದಾರೆ.
Advertisement
Advertisement
ಏನೇ ಮಾಡಿದ್ರೂ ಒಳಗಡೆ ರೋಗಿ ನೋಡೊದಕ್ಕೆ ಮಾತನಾಡಿಸೊದಕ್ಕೆ ಆಗಲ್ಲ ಅಂತ ಹೇಳಿದ್ದಕ್ಕೆ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮಾಡಲಾಗುತ್ತಿದೆ. ರೋಪಿಗಳ ವಿರುದ್ಧ ಪೀಠೋಪಕರಣ ದ್ವಂಸ ಮತ್ತೆ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ.