ಬಿಗ್ಬಾಸ್ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಮನೆಯ ಸ್ಪರ್ಧಿಗಳು ದೊಡ್ಮನೆಯಲ್ಲಿ ಕಳೆದ ತಮ್ಮ ಸುಮಧುರ ಕ್ಷಣಗಳನ್ನು ಬಿಗ್ಬಾಸ್ ಆಟೋಗ್ರಾಫ್ ಮೂಲಕ ಮೆಲುಕು ಹಾಕಿದ್ದಾರೆ. ಸದ್ಯ ವೈಷ್ಣವಿ ಗೌಡ ಬಿಗ್ಬಾಸ್ ಆಟೋಗ್ರಾಫ್ ಕಾರ್ಯಕ್ರಮದಲ್ಲಿ ದೊಡ್ಮನೆ ತಮ್ಮ ಅನುಭವ, ಅನಿಸಿಕೆಗಳನ್ನು ಪ್ರೇಕ್ಷಕರ ಮುಂದೆ ಹಂಚಿಕೊಂಡಿದ್ದಾರೆ.
Advertisement
ಬಿಗ್ಬಾಸ್ ಸೀಸನ್-8 ಸಸ್ಪೆಂಡ್ ಆಗಿರುವುದು ತುಂಬಾ ಬೇಜಾರಾಯಿತು. ಆದರೆ ವಿಷಯ ಬಹಳ ಸೀರಿಯಸ್ ಆಗಿದೆ. ಕಷ್ಟಕರವಾಗಿದೆ ಆದರೂ ಎಲ್ಲರೂ ಧೈರ್ಯದಿಂದ ಹೋರಾಡೋಣ. ನಾನು ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದು ವೈಷ್ಣವಿ ಗೌಡ ಮಾತು ಆರಂಭಿಸಿದರು.
Advertisement
Advertisement
ಬಿಗ್ಬಾಸ್ ಮನೆಗೆ ನಾನು ಎಂಟ್ರಿ ಆದಾಗ ಒಂದು ರೀತಿ ಅರಮನೆಯಂತೆ ನನಗೆ ಅನಿಸಿತು. ಮಂಜು ಒಂದು ಬಾರಿ ಮಾತನಾಡದಂತೆ ಬಿಗ್ಬಾಸ್ ಸೂಚಿಸಿದಾಗ ನಾನು ಅವರ ಮಾತಾಗಿದ್ದೆ, ಅಲ್ಲಿಯವರೆಗೂ ನಾನು ಸೈಲೆಂಟ್ ಎಂದು ಹೇಳುತ್ತಿದ್ದವರು, ತುಂಬಾ ಮಾತನಾಡುತ್ತೀಯಾ ಎಂದು ಹೇಳಲು ಶುರುಮಾಡಿದರು. ಜೋಕ್ ಹೇಳಿ ನೀರು ಕುಡಿಯುವ ಟಾಸ್ಕ್ ಒಂದು ರೀತಿ ಮಜಾ ಇತ್ತು. ನನ್ನ ಕೈನಲ್ಲಿ ಆಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಪ್ರತಿಯೊಬ್ಬರು ನನಗೆ ನೀರು ಕುಡಿಸಲು ನಾನು ಹೇಳುವ ಡಬ್ಬಾ ಜೋಕ್ಸ್ ಕೇಳಿ ಬಿದ್ದು ಬಿದ್ದು ನಗುತ್ತಿದ್ದರು. ಒಟ್ಟಾರೆ ನಾನು ಕಂಪ್ಲೀಟ್ ಮಜಾ ಮಾಡಿದೆ. ಎಲ್ಲರೂ ನನ್ನನ್ನು ತುಂಬಾ ವೀಕ್ ಇದ್ದಾರೆ. ನನಗೆ ಕಾಂಪಿಟೇಶನ್ ಅಲ್ಲ ಎಂದು ಹೇಳುತ್ತಿದ್ದರು. ನಾನು ಹೇಗಾದರೂ ಪ್ರೂ ಮಾಡಲೇ ಬೇಕು ಎಂದು ಆ ಟಾಸ್ಕ್ನಲ್ಲಿ ಗೆದ್ದೆ. ಅದು ಒಂದು ರೀತಿ ಚಾಲೆಂಜಿಂಗ್ ಆಗಿ ಇತ್ತು. ರೋಪ್ ಟಾಸ್ಕ್ ನನ್ನ ಫೇವರೆಟ್ ಎಂದು ಹೇಳಿದರು.
Advertisement
ಬಿಗ್ಬಾಸ್ ಮನೆಯಲ್ಲಿ ನಾನು ಏನು ಕಲಿತೆ ಎಂದರೆ ಬೇಗ ಮೂವ್ ಆನ್ ಆಗುವುದನ್ನು ಕಲಿತುಕೊಂಡಿದ್ದೇನೆ. ಇಲ್ಲಿ ಕೋಪ, ನಗು, ಅಳು ಇದ್ಯಾವುದು ಶಾಶ್ವತ ಅಲ್ಲ. ನಾವು ಪ್ರಯತ್ನಗಳನ್ನು ಪಡುತ್ತಾ ಜೀವನದಲ್ಲಿ ಮುಂದಕ್ಕೆ ಹೋಗುತ್ತಿರಬೇಕು. ಜೀವನ ನಿಮಗೆ ಪಾಠ ಕಲಿಸಿಕೊಡುತ್ತದೆ, ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ನಾನು ಕೇವಲ ಅದರ ಕೈ ಹಿಡಿದುಕೊಂಡು ಹೋಗಬೇಕು ಅಷ್ಟೇ ಎಂದರು.
ಸದ್ಯ ನಾಳೆಯಿಂದ ಬಿಗ್ಬಾಸ್ ಮನೆ, ಬಿಗ್ಬಾಸ್ ವಾಯ್ಸ್, ಮೈಕ್, ಟಾಸ್ಕ್ಗಳು, ಸ್ಟೋರ್ ಬೆಲ್ ಆದಾಗ ಓಡಿ ಹೋಗುತ್ತಿದ್ದ ಏಕ್ಸ್ಸೈಟ್ಮೆಂಟ್ ಪ್ರತಿಯೊಂದನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ ಎಂದರು. ಬಿಗ್ಬಾಸ್ ಮನೆಯಲ್ಲಿ ಒಂದು ಮರೆಯಲಾಗದನ್ನು ಒಂದು ಕ್ಷಣ ಅಂತಲ್ಲ ನನಗೆ ಎಲ್ಲವೂ ಬೇಕು. ಕೆಟ್ಟದ್ದು, ಒಳ್ಳೆಯದ್ದು, ಪ್ರತಿಯೊಂದು ಕೂಡ ಬೇಕು. ಇವತ್ತು ಅದೆಲ್ಲವು ಆಗಿದ್ದಕ್ಕೆ ಈ ಜರ್ನಿಯನ್ನು ಇಷ್ಟು ಸ್ಪೆಷಲ್ ಎಂದು ಹೇಳಲು ಸಾಧ್ಯವಾಯಿತು ಇಲ್ಲ ಆಗುತ್ತಿರಲಿಲ್ಲ ಎಂದು ಹೇಳಿದರು.