ನವದೆಹಲಿ: ದೆಹಲಿಯ ರಾಕಾಬ್ ಗಂಜ್ ಗುರುದ್ವಾರದಲ್ಲಿ ಸೋಮವಾರ ಉದ್ಘಾಟಿಸಲಾಗುತ್ತಿರುವ ಕೋವಿಡ್-ಕೇರ್ ಸೌಲಭ್ಯಗಳಿಗಾಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ 2 ಕೋಟಿ ನೆರವು ನೀಡಿದ್ದಾರೆ ಎಂದು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಜೀಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ಅವರು ಶ್ರೀ ಗುರು ತೇಜ್ ಬಹದ್ದೂರ್ ಕೋವಿಡ್ ಕೇರ್ ಸೌಲಭ್ಯಕ್ಕಾಗಿ 2 ಕೋಟಿ ನೀಡಿರುವದಕ್ಕೆ ಧನ್ಯವಾದಗಳು. ಅವರ ಸೇವೆಗೆ ಸೆಲ್ಯೂಟ್ ಎಂದು ಅಕಾಲಿ ದಳ ಪಕ್ಷದ ರಾಷ್ಟ್ರೀಯ ವಕ್ತಾರ ಶ್ರೀ ಸಿರ್ಸಾರವರು ಹೇಳಿದ್ದಾರೆ.
Advertisement
“Sikhs are Legendary
सिखों की सेवा को सलाम”
These were the words of @SrBachchan Ji when he contributed ₹2 Cr to Sri Guru Tegh Bahadur Covid Care Facility
While Delhi was grappling for Oxygen, Amitabh Ji called me almost daily to enquire about the progress of this Facility@ANI pic.twitter.com/ysOccz28Fl
— Manjinder Singh Sirsa (@mssirsa) May 9, 2021
Advertisement
ಜೊತೆಗೆ ವಿದೇಶದಿಂದ ಆಕ್ಸಿಜನ್ ಸಿಲಿಂಡರ್ಗಳನ್ನು ಕೋವಿಡ್ ಕೇರ್ ಸೆಂಟರ್ಗೆ ತಲುಪಿಸುವುದಾಗಿ ಅಮಿತಾಬ್ ಬಚ್ಚನ್ರವರು ನುಡಿದಿರುವುದಾಗಿ ಶ್ರೀ ಸಿರ್ಸಾರವರು ತಿಳಿಸಿದ್ದಾರೆ.
Advertisement
ದೆಹಲಿಯಲ್ಲಿ ಆಕ್ಸಿಜನ್ಗಾಗಿ ಹೋರಾಡುತ್ತಿರು ವೇಳೆ ಅಮಿತಾಬ್ ಬಚ್ಚನ್ರವರು ನನ್ನ ಕರೆದು ಈ ಬಗ್ಗೆ ವಿಚಾರಿಸಿದರು. ಸದ್ಯ ರಕಾಬ್ ಗಂಜ್ ಗುರುದ್ವಾರವನ್ನು ಸೋಮವಾರ ಉದ್ಘಾಟಿಸಲಾಗುತ್ತಿದ್ದು, 300 ಬೆಡ್, ಆಕ್ಸಿಜನ್ ಸಿಲಿಂಡರ್, ವೈದ್ಯರು ಮತ್ತು ಅಂಬ್ಯುಲೆನ್ಸ್ ಸೇವೆಗಳನ್ನು ಉಚಿತವಾಗಿ ಒದಗಿಸುವುದಾಗಿ ಹೇಳಿದ್ದಾರೆ.