ಬೆಂಗಳೂರು: 79ನೇ ವಸಂತಕ್ಕೆ ಕಾಲಿಟ್ಟ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವರು, ಶಾಸಕರು, ಆಪ್ತರು, ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಶುಭ ಹಾರೈಕೆಯ ಮಾಹಪೂರವೇ ಸೋಶಿಯಲ್ ಮೀಡಿಯಾದಲ್ಲಿ ಹರಿದು ಬರುತ್ತಿದೆ.
ಕರ್ನಾಟಕ ಸಿಎಂ ಅವರಿಗೆ ಶುಭಾಶಯಗಳು. ಯಡಿಯುರಪ್ಪ ಜಿ ನಮ್ಮ ಅತ್ಯಂತ ಅನುಭವಿ ನಾಯಕರಲ್ಲಿ ಒಬ್ಬರಾಗಿದ್ದು, ಅವರು ರೈತರ ಕಲ್ಯಾಣಕ್ಕಾಗಿ ಮತ್ತು ಬಡವರ ಸಬಲೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರ ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕವಾಗಿ ಪ್ರಧಾನಿ ಮೋದಿ ಶುಭಾಶಯಕೋರಿದ್ದಾರೆ.
Advertisement
Greetings to Karnataka CM @BSYBJP Ji on his birthday. Yediyurappa Ji is one of our most experienced leaders, who has devoted his life towards the welfare of farmers and empowering the poor. Praying for his long and healthy life.
— Narendra Modi (@narendramodi) February 27, 2021
Advertisement
ಹೋರಾಟವನ್ನೇ ಬದುಕಾಗಿಸಿಕೊಂಡ ಹುಟ್ಟುಹೋರಾಟಗಾರ, ಜನಸೇವೆಯನ್ನೇ ಬದುಕಿನ ಗುರಿಯಾಗಿಸಿಕೊಂಡ ಧೀಮಂತ, ಸವಾಲುಗಳನ್ನು ಲೆಕ್ಕಿಸದೆ ಮುನ್ನುಗ್ಗುವ ಛಲದಂಕಮಲ್ಲ, ಸರಿಸಾಟಿಯಿಲ್ಲದ ಜನನಾಯಕ, ಸನ್ಮಾನ್ಯ ಮುಖ್ಯಮಂತ್ರಿ ಪೂಜ್ಯ ತಂದೆಯವರಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರ ಅನುಗ್ರಹ, ಜನರ ಪ್ರೀತಿ ಸದಾ ನಿಮ್ಮೊಂದಿಗಿರಲಿ ಎಂದು ಬಿಎಸ್ವೈ ಅವರ ಮಗ ವಿಜಯೇಂದ್ರ ಹುಟ್ಟುಹಬ್ಬದ ಶುಭಾಶಯವನ್ನು ಟ್ವೀಟ್ ಮಾಡಿವ ಮೂಲಕವಾಗಿ ತಿಳಿಸಿದ್ದಾರೆ.
Advertisement
ಹೋರಾಟವನ್ನೇ ಬದುಕಾಗಿಸಿಕೊಂಡ ಹುಟ್ಟುಹೋರಾಟಗಾರ, ಜನಸೇವೆಯನ್ನೇ ಬದುಕಿನ ಗುರಿಯಾಗಿಸಿಕೊಂಡ ಧೀಮಂತ, ಸವಾಲುಗಳನ್ನು ಲೆಕ್ಕಿಸದೆ ಮುನ್ನುಗ್ಗುವ ಛಲದಂಕಮಲ್ಲ, ಸರಿಸಾಟಿಯಿಲ್ಲದ ಜನನಾಯಕ, ಸನ್ಮಾನ್ಯ ಮುಖ್ಯಮಂತ್ರಿ ಪೂಜ್ಯ ತಂದೆಯವರಾದ ಶ್ರೀ @BSYBJP ರವರಿಗೆ ಜನ್ಮದಿನದ ಶುಭಾಶಯಗಳು. ದೇವರ ಅನುಗ್ರಹ, ಜನರ ಪ್ರೀತಿ ಸದಾ ನಿಮ್ಮೊಂದಿಗಿರಲಿ. #HBDBSY pic.twitter.com/Gg8mIemgXQ
— Vijayendra Yeddyurappa (@BYVijayendra) February 27, 2021
Advertisement
ಛಲ, ಸಂಕಲ್ಪ ಶಕ್ತಿ ಮತ್ತು ಹೋರಾಟದ ಮೂಲಕವೇ ಗುರುತಿಸಿಕೊಂಡಿರುವ ಅಭಿವೃದ್ಧಿಯ ಹರಿಕಾರ, ರೈತಬಂಧು, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಪೂಜ್ಯ ತಂದೆಯವರಾದ ಶ್ರೀಯುತ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ದೇವರು ನಿಮಗೆ ಹೆಚ್ಚಿನ ಆಯಸ್ಸು ಹಾಗೂ ಉತ್ತಮ ಆರೋಗ್ಯ ನೀಡಲಿಯೆಂದು ಪ್ರಾರ್ಥಿಸುತ್ತೇನೆ ಎಂದು ಬಿಎಸ್ವೈ ಕಿರಿ ಪುತ್ರ ಹಾಗೂ ಶಿವಮೊಗ್ಗ ಸಂಸದರಾದ ಬಿ.ವೈ ರಾಘವೇಂದ್ರ ಶುಭಕೋರಿದ್ದಾರೆ.
ಛಲ, ಸಂಕಲ್ಪ ಶಕ್ತಿ ಮತ್ತು ಹೋರಾಟದ ಮೂಲಕವೇ ಗುರುತಿಸಿಕೊಂಡಿರುವ ಅಭಿವೃದ್ಧಿಯ ಹರಿಕಾರ, ರೈತಬಂಧು, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಪೂಜ್ಯ ತಂದೆಯವರಾದ ಶ್ರೀಯುತ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರಿಗೆ
ಹುಟ್ಟು ಹಬ್ಬದ ಶುಭಾಶಯಗಳು.
ದೇವರು ನಿಮಗೆ ಹೆಚ್ಚಿನ ಆಯಸ್ಸು ಹಾಗೂ ಉತ್ತಮ ಆರೋಗ್ಯ ನೀಡಲಿಯೆಂದು ಪ್ರಾರ್ಥಿಸುತ್ತೇನೆ. @BSYBJP pic.twitter.com/6Hnr4o3OXD
— B Y Raghavendra (@BYRBJP) February 27, 2021
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಅದ್ಧೂರಿ ಆಚರಣೆ ಬೇಡ ಎಂಬ ತೀರ್ಮಾನಕ್ಕೆ ಯಡಿಯೂರಪ್ಪ ಬಂದಿದ್ದಾರೆ. ಹೀಗಾಗಿ ಸಚಿವರು ಹಾಗೂ ಪ್ರಮುಖರು ಅಧಿಕೃತವಾಗಿ ನಿವಾಸ ಕಾವೇರಿಗೆ ತೆರಳಿ ಅಭಿನಂದಿಸಲಿಸಲಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬಿ. ಎಸ್. ಯಡಿಯೂರಪ್ಪ ಅವರಿಗೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯಾತಿಗಣ್ಯರಿಂದ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ. ಜನ್ಮದಿನದ ಶುಭಾಶಯ ಕೋರಿದ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್ ಮತ್ತು ಗುಪ್ತಚರ ದಳದ ಎಡಿಜಿಪಿ ದಯಾನಂದ್ ಸಚಿವರಿಂದ ಸಿಎಂಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
Karnataka: State Ministers and supporters of CM BS Yediyurappa meet him at Chief Minister’s Office in Bengaluru, on his birthday today. pic.twitter.com/A1GzxEBoVq
— ANI (@ANI) February 27, 2021
ಪ್ರತೀ ವರ್ಷದ ಹುಟ್ಟು ಹಬ್ಬದ ಸಮಯದಲ್ಲಿ ಸಂಜಯನಗರದ ರಾಧಾಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡುವ ಬಿಎಸ್ವೈ ಅವರು ಇಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ರಾಧಾಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಅರ್ಷನೆ ಮಾಡಿಸಿದ್ದಾರೆ. ಮೊದಲು ವಿದ್ಯಾಗಣಪತಿಗೆ ಪೂಜೆ ಸಲ್ಲಿಸಿದ್ದಾರೆ. ಸಿಎಂಗೆ ಸಚಿವ ಬೈರತಿ ಬಸವರಾಜ್, ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ದು ಸಾಥ್ ನೀಡಿದ್ದಾರೆ.