ಬೆಂಗಳೂರು: ಸಿಎಂ ಬಿಎಸ್ವೈ ಸಂಪುಟದ ನೂತನ ಸಚಿವರ ಖಾತೆ ಪಟ್ಟಿ ಪ್ರಕಟವಾಗಿದ್ದು, ವಲಸಿಗ ಸಚಿವರಿಗೆ ಸಣ್ಣದಾದ ಶಾಕ್ ಸಿಕ್ಕಂತಾಗಿದೆ. ಬಿಜೆಪಿಯ ಅಂಗಳದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಧಾನ ಮತ್ತು ಭಿನ್ನಮತ ಖಾತೆ ಹಂಚಿಕೆ ಬೆನ್ನಲ್ಲೇ ಸ್ಫೋಟವಾಗುವ ಲಕ್ಷಣಗಳು ಕಾಣಿಸುತ್ತಿವೆ. ಕೇವಲ ನೂತನ ಸಚಿವರಿಗೆ ಖಾತೆ ನೀಡದೇ ಕೆಲವರ ಖಾತೆಗಳನ್ನ ಸಿಎಂ ಅದಲು-ಬದಲು ಮಾಡಿದ್ದಾರೆ.
Advertisement
ಯಾರಿಗೆ ಯಾವ ಖಾತೆ?
ಎಸ್ ಅಂಗಾರ- ಮೀನುಗಾರಿಕೆ, ಬಂದರು
ಸಿ.ಪಿ. ಯೋಗೇಶ್ವರ್-ಸಣ್ಣ ನೀರಾವರಿ
ಎಂಟಿಬಿ ನಾಗರಾಜ್-ಅಬಕಾರಿ
ಆರ್.ಶಂಕರ್- ಪೌರಾಡಳಿತ, ರೇಷ್ಮೆ
ಅರವಿಂದ ಲಿಂಬಾವಳಿ-ಅರಣ್ಯ
ಮುರುಗೇಶ ನಿರಾಣಿ-ಗಣಿಗಾರಿಕೆ
ಉಮೇಶ್ ಕತ್ತಿ- ಆಹಾರ ಖಾತೆ
ಬೊಮ್ಮಾಯಿ – ಗೃಹ ಜೊತೆಗೆ ಕಾನೂನು ಸಂಸದೀಯ
ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ
ಸಿ ಸಿ ಪಾಟೀಲ್ – ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ
ಕೋಟ – ಮುಜರಾಯಿ ಜೊತೆ ಹಿಂದುಳಿದ ವರ್ಗ
ಡಾ. ಕೆ.ಸುಧಾಕರ್ – ಆರೋಗ್ಯ ಇಲಾಖೆ
ಆನಂದ್ ಸಿಂಗ್ – ಪ್ರವಾಸೋದ್ಯಮ, ಪರಿಸರ
ಪ್ರಭು ಚೌಹಾಣ್ – ಪಶುಸಂಗೋಪನೆ
ಗೋಪಾಲಯ್ಯ – ತೋಟಗಾರಿಕೆ ಮತ್ತು ಸಕ್ಕರೆ
ನಾರಾಯಣ ಗೌಡ – ಯುವಜನ ಸೇವೆ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್
Advertisement
Advertisement
ಖಾತೆಗಳ ಪುನರ್ ಹಂಚಿಕೆ ಮಾಡಿರೋ ಮುಖ್ಯಮಂತ್ರಿಗಳು ಹಿರಿಯ ಸಚಿವರ ತಂಟೆಗೆ ಹೋಗಿಲ್ಲ. ಮೂವರು ಡಿಸಿಎಂಗಳು, ಶೆಟ್ಟರ್, ಅಶೋಕ್, ಈಶ್ವರಪ್ಪ, ರಾಮುಲು ಖಾತೆಗಳು ಭದ್ರವಾಗಿವೆ. ಈಗಿರುವ ಖಾತೆಗಳಲ್ಲಿಯೇ ಬೊಮ್ಮಾಯಿ, ಸುರೇಶ್ ಕುಮಾರ್, ಸೋಮಣ್ಣ ಮುಂದುವರಿಯಲಿದ್ದಾರೆ. ಇತ್ತ ಮಿತ್ರಮಂಡಳಿಯ ರಮೇಶ್ ಜಾರಕಿಹೊಳಿ, ಸೋಮಶೇಖರ್, ಬಿಸಿ ಪಾಟೀಲ್, ಬೈರತಿ ಬಸವರಾಜ್ ಅವರ ಖಾತೆಯಲ್ಲಿಯೂ ಬದಲಾಗಿಲ್ಲ.