ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಸನ್ನಿಹಿತವಾಗುತ್ತಿದ್ದಂತೆ ವಲಸಿಗ ಬಿಜೆಪಿ ಸಚಿವರು ಗೊಂದಲಕ್ಕೆ ಒಳಗಾದಂತೆ ಕಂಡು ಬಂದರು. ಸಂಪುಟ ಸಭೆ ಬಳಿಕ ಪತ್ರ ಹಿಡಿದು ಸಿಎಂ ಕಚೇರಿಗೆ ತೆರಳಿದ ವಲಸಿಗ ಏಳು ಸಚಿವರು ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದರು. ಎಲ್ಲರೂ ಕೈಯಲ್ಲಿ ಪತ್ರ ಹಿಡಿದು ಹೋಗಿದ್ದರಿಂದ ಸಿಎಂಗೂ ಮೊದಲೇ ಇವರೇ ರಾಜೀನಾಮೆ ನೀಡ್ತಾರಾ ಅನ್ನೋ ಚರ್ಚೆಗಳು ಮುನ್ನಲೆಗೆ ಬಂದವು.
ಸಿಎಂ ಆಗಿ ಯಡಿಯೂರಪ್ಪನವರೇ ಕೊನೆಯ ಸಂಪುಟ ಸಭೆ ಇದು ಎನ್ನಲಾಗಿದೆ. ಹೀಗಾಗಿ ಯಡಿಯೂರಪ್ಪನವರನ್ನ ನಂಬಿಕೊಂಡು ಬಿಜೆಪಿ ಸೇರಿರುವ ಸಚಿವರು ತಮ್ಮ ಮುಂದಿನ ರಾಜಕೀಯ ಜೀವನ ಹೇಗೆ ಎಂಬುದರ ಬಗ್ಗೆ ಚಿಂತೆಗೊಳಗಾಗಿದ್ದು, ಹಿರಿಯ ಸಚಿವರಾದ ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ ಜೊತೆ ಪ್ರತ್ಯೇಕ ಸಭೆ ನಡೆಸಿದರು. ಇದನ್ನೂ ಓದಿ: ಎರಡು ತಿಂಗಳ ಹಿಂದೆಯೇ ರಾಜೀನಾಮೆಗೆ ಮುಂದಾಗಿದ್ದೆ: ಸಿಎಂ ಬಿಎಸ್ವೈ
Advertisement
Advertisement
ಇನ್ನೂ ಪತ್ರ ಹಿಡಿದು ತಮ್ಮ ಕಚೇರಿಗೆ ಬಂದ ವಲಸಿಗ ಸಚಿವರಿಗೆ ಸಿಎಂ ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. ರಾಜೀನಾಮೆ ಕೊಡ್ತೀನಿ ಅಂತಾ ಅಪ್ಪಿತಪ್ಪಿಯೂ ಯೋಚಿಸಬೇಡಿ. ಆ ರೀತಿ ಯೋಚನೆ ಮಾಡಿದ್ರೆ ನೀವು ರಾಜಕೀಯ ಆಟದಲ್ಲಿ ಮೂರ್ಖರಾಗ್ತೀರಿ. ದಡ್ಡರಾ.. ನನ್ನ ರಾಜೀನಾಮೆಗೂ ಮುನ್ನ ನೀವು ರಾಜೀನಾಮೆ ಕೊಟ್ಟರೆ ಮುಂದಿನ ಕ್ಯಾಬಿನೆಟ್ ಗೆ ನಿಮ್ಮನ್ನ ಹೇಗೆ ಪರಿಗಣಿಸ್ತಾರೆ? ನಿಮ್ಮ ರಾಜೀನಾಮೆ ತಂತ್ರದಿಂದ ನನ್ನ ರಾಜೀನಾಮೆ ತಡೆಯಲು ಆಗಲ್ಲ. ಬಿಜೆಪಿ ಹೈಕಮಾಂಡ್ ಸೂಚನೆಯನ್ನ ನಾನು ಪಾಲಿಸುತ್ತೇನೆ. ಆದ್ರೆ ನಿಮ್ಮ ಬಗ್ಗೆ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡ್ತೀನಿ, ಆತಂಕ ಬೇಡ ಎಂದು ಸಿಎಂ ಯಡಿಯೂರಪ್ಪ ಎಲ್ಲರಿಗೂ ಬುದ್ಧಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ನೀರಾವರಿ ಇಲಾಖೆಗೆ 12 ಸಾವಿರ ಕೋಟಿ ನೀಡಿರುವುದು ದುಡ್ಡು ಲೂಟಿ ಮಾಡೋಕೆ: ಹೆಚ್ಡಿಕೆ