– 412 ಕಿಮೀ ಉದ್ದದ ಯೋಜನೆ
– 471 ಕೋಟಿ ರೂ. ಒಪ್ಪಂದ
ನವದೆಹಲಿ: ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ದೇಶದಲ್ಲಿ ದೊಡ್ಡ ಮಟ್ಟದ ಅಭಿಯಾನ ಆರಂಭಗೊಂಡಿದೆ. ಇದಕ್ಕೆ ಮುನ್ನುಡಿ ಎಂಬಂತೆ ಬಿಎಸ್ಎನ್ಎಲ್ನ 4ಜಿ ಅಪ್ಗ್ರಡೇಷನ್ಗೆ ಚೀನಾದ ಯಾವುದೇ ಉಪಕರಣ ಬಳಸದಂತೆ ಸರ್ಕಾರ ಸೂಚಿಸಿದೆ. ಇದರ ಬೆನ್ನಲ್ಲೇ ಚೀನಾದ ಬೀಜಿಂಗ್ ಮೂಲಕದ ಕಂಪನಿಗೆ ನೀಡಲಾಗಿದ್ದ ರೈಲ್ವೆ ಯೋಜನೆಯ ಒಪ್ಪಂದವನ್ನು ರದ್ದು ಮಾಡಿಕೊಂಡಿದೆ.
Advertisement
ಉತ್ತರ ಪ್ರದೇಶದ ಕಾನ್ಪುರ – ದೀನ ದಯಾಳ್ ಉಪಾಧ್ಯಾಯ ವಿಭಾಗದ ನಡುವಿನ ರೈಲ್ವೇ ಸಿಗ್ನಲಿಂಗ್ ಮತ್ತು ದೂರ ಸಂಪರ್ಕ ಕಾರ್ಯ ನಿರ್ಮಾಣಕ್ಕೆ ಬೀಜಿಂಗ್ ಮೂಲದ ಕಂಪನಿಗೆ 2016ರಲ್ಲಿ ಒಪ್ಪಂದ ನೀಡಲಾಗಿತ್ತು. ಸುಮಾರು 471 ಕೋಟಿ ರೂ. ಮೌಲ್ಯದ, 412 ಕಿಮೀ ಉದ್ದದ ಯೋಜನೆಯನ್ನು ವಿಳಂಬ ಮಾಡಿದ್ದಕ್ಕೆ ಒಪ್ಪಂದವನ್ನು ರದ್ದು ಮಾಡಲಾಗಿದೆ. ಇದನ್ನು ಓದಿ: ಕೇಂದ್ರ ಸರ್ಕಾರದಿಂದಲೇ ಚೀನಾ ವಸ್ತುಗಳ ಬಹಿಷ್ಕಾರ ಶುರು
Advertisement
2016ರಲ್ಲಿ ಗುತ್ತಿಗೆ ಪಡೆದಿದ್ದ ಸಂಸ್ಥೆ ಇದುವರೆಗೂ ಯೋಜನೆಯಲ್ಲಿ ಶೇ.20 ರಷ್ಟು ಕೆಲಸವನ್ನು ಮಾತ್ರ ನಡೆಸಿದೆ. ಯೋಜನೆಯ ಪ್ರತಿ ಹಂತದಲ್ಲಿ ನಿರಂತರವಾಗಿ ಮಾತುಕತೆ ನಡೆಸಿದರೂ ಕೂಡ ಯೋಜನೆಯಲ್ಲಿ ಯಾವುದೇ ಪ್ರಗತಿ ಕಾಣಿಸಿಲ್ಲ. ಒಪ್ಪಂದ ಅನ್ವಯ ಯೋಜನೆಗೆ ಸಂಬಂಧಿಸಿದ ಕೆಲ ತಾಂತ್ರಿಕ ದಾಖಲೆಗಳನ್ನು ನೀಡಲು ಚೀನಾ ಕಂಪನಿ ಹಿಂಜರಿಯುತ್ತಿದೆ. ಅಲ್ಲದೇ ಯೋಜನೆಯ ಸ್ಥಳದಲ್ಲಿ ಎಂಜಿನಿಯರ್ ಹಾಗೂ ಅಗತ್ಯ ಸಿಬ್ಬಂದಿಯನ್ನು ಪೂರೈಸಲು ಕಂಪನಿಗೆ ಸಾಧ್ಯವಿಲ್ಲ ಎಂದು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೋರೇಷನ್ ಆಫ್ ಇಂಡಿಯಾ (ಡಿಎಫ್ಸಿಸಿಐಎಲ್) ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.
Advertisement
Advertisement
ಈ ಯೋಜನೆ ಪೂರ್ಣಗೊಳಿಸಲು ಹಲವಾರು ಆಯ್ಕೆಗಳಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಅವುಗಳನ್ನು ನಾವು ಎದುರಿಸಲು ಹಿಂಜರಿಯುವುದಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತ ಭಾರತದ ಎಲ್ಲಾ ವ್ಯಾಪಾರಿಗಳು ಚೀನಾ ಉತ್ಪನ್ನಗಳ ವಿರುದ್ಧ ಇದ್ದು, ಸುಮಾರು 70 ದಶಲಕ್ಷ ಸ್ಥಳೀಯ ವ್ಯಾಪಾರಿಗಳ ಬೆಂಬಲ ಪಡೆದಿರುವ ಅಖಿಲ ಭಾರತ ವ್ಯಾಪಾರಿ ಒಕ್ಕೂಟ (ಸಿಎಐಟಿ) ಕೂಡ ಚೀನಾ ಸರಕುಗಳ ಬಹಿಷ್ಕಾರದ ರಾಷ್ಟ್ರೀಯ ಆಂದೋಲವನ್ನು ನಡೆಸಲು ನಿರ್ಧರಿಸಿದೆ ಎಂದು ಸಿಎಐಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.
ಲಡಾಖ್ ಪ್ರದೇಶದಲ್ಲಿ ಭಾರತ, ಚೀನಾ ಸೈನಿಕರು ಮುಖಾಮುಖಿಯಲ್ಲಿ 20 ಭಾರತೀಯ ಯೋಧಕರು ಸಾವನ್ನಪ್ಪಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಭಾರತ ಕುತಂತ್ರಿ ಚೀನಾವನ್ನು ಎದುರಿಸಲಿ ಆರ್ಥಿಕ ಕ್ರಮಗಳನ್ನು ಕೈಗೊಳ್ಳುತ್ತಿದ ಎಂಬ ವರದಿಯ ಬೆನ್ನಲ್ಲೇ ಮಹತ್ವದ ಯೋಜನೆಯ ಒಪ್ಪಂದವನ್ನು ರದ್ದು ಮಾಡಲಾಗಿದೆ. ಇತ್ತ ದೇಶೀಯ ಉದ್ಯಮವನ್ನು ಹಾನಿಗೊಳಿಸುತ್ತಿರುವ ಚೀನಾ ಸರಕುಗಳ ಆಮದು ವಿರುದ್ಧ ಹಣಕಾಸು ಮತ್ತು ವಾಣಿಜ್ಯ ಸಚಿವಾಲಯಗಳು ಈಗಾಗಲೇ ಕ್ರಮಕೈಗೊಳ್ಳುತ್ತಿದೆ.