ಬೆಂಗಳೂರು: ಬಸ್ ಗಳಲ್ಲಿ ಜೇಬುಗಳ್ಳತನ, ಚಿಲ್ಲರೆ ವಿಚಾರಕ್ಕೆ ಜಗಳ ಆಗೋದು, ಮಹಿಳಾ ಪ್ರಯಾಣಿಕರ ಕೆಲ ಕಾಮಣ್ಣರು ಅಸಭ್ಯವಾಗಿ ವರ್ತನೆ ಮಾಡೋ ಹಲವು ಘಟನೆಗಳನ್ನು ನೋಡಿರತ್ತೇವೆ, ಕೇಳಿರತ್ತೇವೆ. ಇತ್ತೀಚೆಗೆ ಕೆಲವರು ಬಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳು ದಾಖಲಾಗಿವೆ. ಇಂಥ ಘಟನೆಯನ್ನು ಕೆಲವರು ಧೈರ್ಯವಾಗಿ ಎದುರಿಸಿ, ಸರಿಯಾಗಿ ಬುದ್ದಿ ಕಲಿಸ್ತಾರೆ. ಇನ್ನು ಕೆಲವರು ಮರ್ಯಾದೆಗೆ ಅಂಜಿ ಸುಮ್ಮನಾಗುತ್ತಾರೆ. ಇನ್ನು ಕೆಲವರು ತಮಗಾದ ಕೆಟ್ಟ ಅನುಭವನ್ನ ಸಾಬೀತು ಮಾಡಲು ಯಾವುದೇ ಸಾಕ್ಷ್ಯಗಳು ಇರುವುದಿಲ್ಲ. ಇದೆಲ್ಲದಕ್ಕೂ ಪರಿಹಾರ ನೀಡುವ ಸಲುವಾಗಿ ಬಿಎಂಟಿಸಿ ಹೊಸ ವ್ಯವಸ್ಥೆಯೊಂದನ್ನ ಅಳವಡಿಸೋಕೆ ಮುಂದಾಗಿದೆ.
Advertisement
ಹೀಗಾಗಿ ಬಸ್ಸುಗಳಲ್ಲಿ ಮಹಿಳೆಯರ ಸುರಕ್ಷತೆಗೆ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಬಿಎಂಟಿಸಿ ಮುಂದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಭಯ ಯೋಜನೆ ಅಡಿಯಲ್ಲಿ ತನ್ನಲ್ಲಿರುವ ಆರೂವರೆ ಸಾವಿರ ಬಸ್ಸುಗಳ ಪೈಕಿ ಸದ್ಯ ಸಂಚಾರದಲ್ಲಿರುವ 5 ಸಾವಿರ ಬಸ್ಸುಗಳ ಒಳಭಾಗದಲ್ಲಿ ಎರಡರಂತೆ 10 ಸಾವಿರ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಬಿಎಂಟಿಸಿ ಸಿದ್ಧತೆ ನಡೆಸಿದೆ.
Advertisement
Advertisement
ಇನ್ನು ಸಿಸಿಟಿವಿ ಜೊತೆಗೆ ಬಸ್ಸುಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಕೆ ಅದರ ನಿರ್ವಹಣೆಗೆ ಕಂಟ್ರೋಲ್ ರೂಮ್ ವ್ಯವಸ್ಥೆಯನ್ನು ಮಾಡುತ್ತಿದೆ. ಜಿಪಿಎಸ್ ಲೋಕೇಶನ್ ಟ್ರ್ಯಾಕ್ ಆಗೋದ್ರಿಂದ ಕಂಟ್ರೋಲ್ ರೂಮ್ ಸಿಬ್ಬಂದಿ ಬಸ್ ಲೋಕೇಶನ್ ತಿಳಿದು ಸ್ಥಳೀಯ ಪೊಲೀಸ್ ಠಾಣೆಗೆ ಕೂಡಲೇ ಮಾಹಿತಿಯನ್ನ ನೀಡಲುಬಹುದು. ಇದರಿಂದ ಬಸ್ ಗಳಲ್ಲಿ ಅಸಭ್ಯವಾಗಿ ವರ್ತಿಸೋರ ಮೇಲೆ ಕ್ರಮ ಕೈಗೊಳ್ಳಬಹುದಾಗಿದೆ