ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಹೆಸರಿನಲ್ಲಿ ವಂಚಿಸುತ್ತಿದ್ದ ಉತ್ತರ ಪ್ರದೇಶದ ಗ್ಯಾಂಗ್ ಅನ್ನು ಕೇಂದ್ರ ವಿಭಾಗ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮಥುರಾ ಜಿಲ್ಲೆಯ ಚೌಕಿ ಗ್ರಾಮದ ಇಬ್ರಾಹಿಂ(36) ಮೊಹಮ್ಮದ್ ಶೋಕಿನ್ (28) ಬಂಧಿತರಾಗಿದ್ದಾರೆ. ಬಂಧಿತರಿಂದ 5 ಮೊಬೈಲ್, 10 ಕ್ಕೂ ಅಧಿಕ ಸಿಮ್ ಕಾರ್ಡ್, ಹಾಗೂ ಬ್ಯಾಂಕ್ ಪಾಸ್ಬುಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Advertisement
Advertisement
ಬಂಧಿತ ಆರೋಪಿಗಳು ಬಿ.ಎಲ್ ಸಂತೋಷ್ ಹೆಸರಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ತೆರೆದಿದ್ದರು. ನಂತರ ಫೇಸ್ಬುಕ್ ಮೆಸೇಂಜರ್ ಮೂಲಕ ಸಂತೋಷ್ ಹೆಸರಲ್ಲಿ ಹಣಸಂದಾಯ ಮಾಡುವಂತೆ ಅಜಿತ್ ಎನ್ನುವವರಿಗೆ ಮೆಸೇಜ್ ಮಾಡಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಆರೋಪಿಗಳು ಇದೇ ರೀತಿ ಹಣ ಕೋರಿ ಹಲವರಿಗೆ ಸಂದೇಶ ಕಳುಹಿಸಿ ವಂಚಿಸಿದ್ದಾರೆ. ಈ ಬಗ್ಗೆ ಕೇಂದ್ರ ವಿಭಾಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
Advertisement
Advertisement
ಈ ಐನಾತಿ ಗ್ಯಾಂಗ್ ಹಣ ಸಂದಾಯ ಮಾಡಿಸಿಕೊಂಡಿದ್ದ ಬ್ಯಾಂಕ್ ಡೀಟೆಲ್ಸ್ ನಿಂದಲಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬ್ಯಾಂಕ್ ಡಿಟೇಲ್ಸ್ ಹಾಗೂ ಪಿನ್ ನಂಬರ್ ಚೆಕ್ ಮಾಡಿದಾಗ ಆರೋಪಿಗಳ ಮೂಲ ತಿಳಿದಿದೆ. ಉತ್ತರಪ್ರದೇಶದ ಮಥುರಾ ಬಳಿಯ ಚೌಕಿ ಬಂಗಾರ ಹಳ್ಳಿಯ ಅಡ್ರೆಸ್ ನೀಡಿದ್ದರು. ಬೆಂಗಳೂರು ಕೇಂದ್ರವಿಭಾಗ ಸೈಬರ್ ಕ್ರೈಂ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಹತ್ತು ಮಂದಿ ಪೈಕಿ ಎಂಟು ಆರೋಪಿಗಳು ಗ್ರಾಮಸ್ಥರ ಸಹಾಯದಿಂದ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಗ್ಯಾಂಗ್ನ ಪ್ರಮುಖ ಮಾಸ್ಟರ್ ಮೈಂಡ್ ಲಿಯಾಖತ್ ಪರಾರಿಯಗಿದ್ದಾನೆ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರೋ ಆರೋಪಿ ಲಿಯಾಖತ್ ಬಂಧಿತ ಆರೋಪಿಗಳಿಂದ ಇಂಗ್ಲಿಷ್ನಲ್ಲಿ ಚಾಟ್ ಮಾಡೊದನ್ನ ಲಿಯಾಖತ್ ಕಲಿಸಿಕೊಟ್ಟಿದ್ದ. ಪ್ರಭಾವಿ ರಾಜಕಾರಣಗಳು ಹಾಗೂ ಐ.ಎ.ಎಸ್, ಐಪಿಎಸ್ ಅಧಿಕಾರಿಗಳ ಫೇಕ್ ಫೇಸ್ಬುಕ್ ಅಕೌಂಟ್ ಕ್ರಿಯೇಟ್ ಮಾಡುತ್ತಿದ್ದರು. ಅಮಾಯಕರಿಗೆ ಪಿಂಚಣಿ ಮಾಡಿಸ್ತೀವಿ ಅಂತ ಬ್ಯಾಂಕ್ ಡಿಟೇಲ್ಸ್ ಪಡೆಯುತ್ತಿದ್ದರು. ಅವರ ಗಮನಕ್ಕೆ ಬಾರದಂತೆ ಆನ್ ಲೈನ್ ಬ್ಯಾಂಕಿಂಗ್, ಎಟಿಎಂ ಕಾರ್ಡ್, ಬ್ಯಾಂಕ್ ಡಿಟೆಲ್ಸ್ ಪಡೆದು ಹಣವನ್ನು ದೋಚಿ ವಂಚಿಸಿತ್ತಿದ್ದರು.