ಮಾಸ್ಕೋ: ಚಾರ್ಜಿಂಗ್ನಲ್ಲಿದ್ದ ಐಫೋನ್ ಬಾತ್ ಟಬ್ಗೆ ಬಿದ್ದ ಪರಿಣಾಮ ಸ್ನಾನ ಮಾಡುತ್ತಿದ್ದ 24 ವರ್ಷದ ಯುವತಿ ವಿದ್ಯುತ್ ಶಾಕ್ನಿಂದ ಮೃತಪಟ್ಟ ಘಟನೆ ರಷ್ಯಾದಲ್ಲಿ ನಡೆದಿದೆ.
ರಷ್ಯಾದ ಅರ್ಖಾಂಗೆಲ್ಸ್ಕ್ ನಗರದ ಮನೆಯಲ್ಲಿ ಯುವತಿ ವಾಸವಾಗಿದ್ದಾಗ ಈ ಘಟನೆ ನಡೆದಿದೆ. ಯುವತಿಯ ಸ್ನೇಹಿತೆ ಪೊಲೀಸರಿಗೆ ಕರೆ ಮಾಡಿ, ಸ್ನೇಹಿತೆ ಸ್ನಾನ ಮಾಡುತ್ತಿದ್ದ ಬಾತ್ಟಬ್ನಲ್ಲಿ ಐಫೋನ್ ಚಾರ್ಜಿಂಗ್ ಮೋಡ್ನಲ್ಲಿ ಇತ್ತು ಎಂದು ತಿಳಿಸಿದ್ದಾಳೆ.
Advertisement
ಮರಣೋತ್ತರ ಪರೀಕ್ಷೆಯಲ್ಲೂ ಈಕೆ ವಿದ್ಯುತ್ ಶಾಕ್ನಿಂದ ಮೃತಪಟ್ಟಿರುವ ಅಂಶ ದೃಢಪಟ್ಟಿದೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ರಷ್ಯಾ ಸರ್ಕಾರದ ತುರ್ತು ಸಚಿವಾಲಯ ಆರೋಗ್ಯ ಎಚ್ಚರಿಕೆಯನ್ನು ಬಿಡುಗಡೆ ಮಾಡಿದೆ.
Advertisement
Advertisement
ವಿದ್ಯುತ್ ಉಪಕರಣಗಳನ್ನು ಅದಷ್ಟು ನೀರಿನಿಂದ ದೂರವಿಡಿ. ಅದರಲ್ಲೂ ವಿದ್ಯುತ್ ಸಂಪರ್ಕದಲ್ಲಿದ್ದಾಗ ಇದರಿಂದ ಜೀವಕ್ಕೆ ಅಪಾಯವಾಗುತ್ತದೆ ಎಂದು ಜನರಲ್ಲಿ ಮನವಿ ಮಾಡಿದೆ.
Advertisement
ಚಾರ್ಜಿಂಗ್ನಲ್ಲಿದ್ದ ಫೋನ್ ಬಾತ್ ಟಾಬ್ಗೆ ಬಿದ್ದು ವ್ಯಕ್ತಿಗಳು ರಷ್ಯಾದಲ್ಲಿ ಮೃತಪಡುತ್ತಿರುವುದು ಇದೆ ಮೊದಲೆನಲ್ಲ. ಈ ಹಿಂದೆ ಆಗಸ್ಟ್ನಲ್ಲಿ 15 ವರ್ಷದ ಬಾಲಕಿ ಮತ್ತು 2019ರಲ್ಲಿ 26 ವರ್ಷದ ಯುವತಿ ಬಾತ್ರೂಮ್ನಲ್ಲಿ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದರು.