ಕಾಬೂಲ್: ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಅಂಪೈರ್ ಆಗಿದ್ದ ಅಫ್ಘಾನಿಸ್ತಾನದ ಬಿಸ್ಮಿಲ್ಲಾ ಜಾನ್ ಶೆನ್ಸಾರಿ(36) ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದಾರೆ.
ನಂಗರ್ಹಾರ್ ಪ್ರಾಂತ್ಯದಲ್ಲಿರುವ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದ ಆತ್ಮಹುತಿ ಬಾಂಬ್ ದಾಳಿಯಲ್ಲಿ ಶೆನ್ಸಾರಿ ಸೇರಿ 15 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Advertisement
2018-19 ರಲ್ಲಿ 6 ಏಕದಿನ ಮತ್ತು 6 ಟಿ 20 ಪಂದ್ಯಕ್ಕೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.
Advertisement
ನಂಗರ್ರ್ಹಾರ್ ಗವರ್ನರ್ ವಕ್ತಾರರು ಪ್ರತಿಕ್ರಿಯಿಸಿ, ಕೆಲ ಬಂದೂಕುಧಾರಿ ವ್ಯಕ್ತಿಗಳು ಜಿಲ್ಲಾ ಗವರ್ನರ್ ಕಾಂಪೌಂಡ್ ಪ್ರವೇಶಿಸಲು ಬಯಸಿದ್ದರು, ಆದರೆ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟರು ಎಂದು ತಿಳಿಸಿದರು.