ಮುಂಬೈ: ನಗರದ ಕೆಲವು ಮಲ್ಟಿಪ್ಲೆಕ್ಸ್ ಗಳಲ್ಲಿ ಬಾಂಬ್ ಸ್ಫೋಟಗೊಳಿಸುವುದಾಗಿ ಟ್ವೀಟ್ ಮಾಡಿದ 19 ವರ್ಷದ ಯುವಕನನ್ನು ಸೋಮವಾರ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ಬನ್ವಾರಿ ಸಿಂಗ್ ಎಂದು ಗುರುತಿಸಲಾಗಿದ್ದು, ಜನವರಿ 22ರಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬಾಂಬ್ ಸ್ಫೋಟಗೊಳಿಸುವುದಾಗಿ ಟ್ಯಾಗ್ ಮಾಡಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸರು ಮತ್ತು ಆಯುಕ್ತರು ತಿಳಿಸಿದ್ದಾರೆ.
Advertisement
Advertisement
ಕಮಾಂಡೋ ಸಿಂಗ್ ಎಂಬ ಹೆಸರಿನಲ್ಲಿರುವ ಟ್ವಿಟ್ಟರ್ ಖಾತೆಯನ್ನು ಯುವಕ ಬಳಕೆ ಮಾಡುತ್ತಿದ್ದು, 7 ಮಲ್ಟಿಪ್ಲೆಕ್ಸ್ ಗಳಲ್ಲಿ ಬಾಂಬ್ ಸ್ಫೋಟವಾಗುತ್ತದೆ ಎಂದು ಹೇಳಿಕೊಂಡಿದ್ದಾನೆ.
Advertisement
ಈ ಕುರಿತಂತೆ ಮಾಹಿತಿ ಬಂದ ಪೊಲೀಸರು ಕೂಡಲೇ ಹಲವು ಮಲ್ಟಿಪ್ಲೆಕ್ಸ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇದು ವಂಚಿಸಲು ಹಾಕಿರುವ ಟ್ವೀಟ್ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಆರೋಪಿ ತಾನು ಟ್ವೀಟ್ ಮಾಡಿದ್ದನ್ನು ಅಳಿಸಿ ಹಾಕಿದ್ದಾನೆ.
Advertisement
ಘಟನೆ ವಿಚಾರವಾಗಿ ಸೈಬರ್ ಸೆಲ್ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಹರಿಯಾಣದಲ್ಲಿ ಬಂಧಿಸಲಾಗಿದ್ದು, ಆರೋಪಿ ಟ್ವೀಟ್ ಮಾಡಲು ಬಳಸಿದ್ದ ಮೊಬೈಲ್ನನ್ನು ವಶಪಡಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರಾದ ರಶ್ಮಿ ಕರಂದಿಕರ್ ಹೇಳಿದ್ದಾರೆ.
ಇದೀಗ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿಸಿದ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.