ಸಿಡ್ನಿ/ಢಾಕಾ: ಒಂದು ಕಡೆ ಕೊರೊನಾ ಸೋಂಕು ಮತ್ತೊಂದು ಕಡೆ ಡೆಲ್ಟಾ ಪ್ಲಸ್ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳಲ್ಲಿ ಮತ್ತೆ ಲಾಕ್ಡೌನ್ ಮೊರೆ ಹೋಗುತ್ತಿವೆ.
79 ಸಕ್ರಿಯ ಪ್ರಕರಣಗಳಿರುವ ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಮತ್ತೆ ಲಾಕ್ಡೌನ್ ಘೋಷಣೆಯಾಗಿದೆ. ಮೇ ತಿಂಗಳ ನಂತರ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 9ರವರೆಗೆ ಲಾಕ್ಡೌನ್ ಘೋಷಣೆಯಾಗಿದೆ.
Advertisement
Advertisement
ಶುಕ್ರವಾರ ಒಂದೇ ದಿನ ಸಿಡ್ನಿಯಲ್ಲಿ 32 ಹೊಸ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಲಾಕ್ಡೌನ್ ನಿರ್ಧಾರಕ್ಕೆ ಬರಲಾಗಿದೆ. ಔಷಧಿ, ದಿನ ನಿತ್ಯದ ವಸ್ತು ಖರೀದಿ, ವ್ಯಾಯಾಮ ಮತ್ತು ಲಸಿಕೆ ಹಾಕಿಸಿಕೊಳ್ಳಲು ಮನೆಯಿಂದ ಹೊರ ಬರಬಹುದಾಗಿದೆ. ಇದನ್ನೂ ಓದಿ: ಇಂದಿನಿಂದ ಕಲ್ಯಾಣ ಮಂಟಪ, ರೆಸಾರ್ಟ್ನಲ್ಲಿ ಮದುವೆಗೆ ಅನುಮತಿ – ಷರತ್ತು ಏನು?
Advertisement
ಇಂದಿನಿಂದ ಬಾಂಗ್ಲಾದೇಶದಲ್ಲಿ ಲಾಕ್ಡೌನ್ ಜಾರಿಯಾಗಿದೆ. ದೇಶಾದ್ಯಂತ ಕೊರೊನಾ ನಿಯಂತ್ರಣ ಮಾಡಲು ಒಂದು ವಾರ ಲಾಕ್ಡೌನ್ ಮಾಡಲು ಸರ್ಕಾರ ಮುಂದಾಗಿದೆ. ಶುಕ್ರವಾರ 5,869 ಸೋಂಕು ಮತ್ತು 108 ಸಾವಿನ ಪ್ರಕರಣ ವರದಿಯಾದ ಬೆನ್ನಲ್ಲೇ ಲಾಕ್ಡೌನ್ ನಿರ್ಧಾರಕ್ಕೆ ಬರಲಾಗಿದೆ.
Advertisement
Long lines stretched through a supermarket in Sydney on Saturday, ahead of a two week COVID-19 lockdown for Greater Sydney, the Central Coast, the Blue Mountains and Wollongong. pic.twitter.com/jtBEuI7tqo
— CBS News (@CBSNews) June 26, 2021
85 ದೇಶಗಳಲ್ಲಿ ಪತ್ತೆಯಾಗಿರುವ ಡೆಲ್ಟಾಪ್ಲಸ್ ಅತ್ಯಂತ ಅತಿ ವೇಗವಾಗಿ ಹರಡುವ ರೂಪಾಂತರಿ ವೈರಸ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ಹೇಳಿದೆ.