ಸಾಮಾನ್ಯವಾಗಿ ನಮ್ಮ ವಸ್ತುಗಳನ್ನು ಇಟ್ಟುಕೊಳ್ಳಲು ಪರ್ಸ್ ಉಪಯೋಗಿಸುತ್ತೇವೆ. ಯಾವುದೇ ಡ್ರೆಸ್ ಹಾಕಿಕೊಂಡರೂ ಪರ್ಸ್ ಹೊರಗಡೆ ಹೋಗುವಾಗ ತೆಗೆದುಕೊಂಡು ಹೋಗಬಹುದು. ಪರ್ಸ್ಗಳಲ್ಲಿ ಹಲವಾರು ರೀತಿಯ ವಿಧಗಳಿದ್ದು, ಬಹಳ ಪ್ರಯೋಜನಕಾರಿಯಾಗಿದೆ.
Advertisement
ಪರ್ಸ್ ಬಳಸುವುದರಿಂದ ಅದು ನಿಮಗೆ ಹೆಚ್ಚಿನ ಫ್ಯಾಷನ್ ಲುಕ್ನನ್ನು ನೀಡುತ್ತದೆ. ನೀವು ಬಳಸುವ ಕೆಲವು ದೈನಂದಿನ ಸಣ್ಣಪುಟ್ಟ ವಸ್ತುಗಳನ್ನು ಸಂಗ್ರಹಿಸಿಕೊಳ್ಳಲು ಪರ್ಸ್ ಬಹಳ ಉಪಯೋಗಕಾರಿಯಾಗಿದ್ದು, ಕೆಲವೊಂದು ಟ್ರೆಂಡಿ ಪರ್ಸ್ಗಳು ಈ ಕೆಳಗಿನಂತಿದೆ.
Advertisement
Advertisement
ಬ್ಯಾಕ್ಪ್ಯಾಕ್ ಬ್ಯಾಗ್: ಬ್ಯಾಕ್ಪ್ಯಾಕ್ನಲ್ಲಿ ಹಲವಾರು ಗಾತ್ರ, ಆಕಾರ ಮತ್ತು ಕಲರ್ಗಳಿದ್ದು, ಇದನ್ನು ಬೆನ್ನ ಮೇಲೆ ಹೊತ್ತುಕೊಳ್ಳಲು ಅನುಕೂಲಕರವಾಗಿದೆ. ಅಲ್ಲದೆ ಇದರಲ್ಲಿ ಸಾಕಷ್ಟು ಪಾಕೆಟ್ಗಳಿರುತ್ತದೆ. ಶಾಲೆ, ಕೆಲಸ, ಅಥವಾ ಶಾಪಿಂಗ್ಗಳಿಗೆ ಬ್ಯಾಕ್ಪ್ಯಾಕ್ ಉತ್ತಮವಾಗಿದ್ದು, ಅನೇಕ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ.
Advertisement
ಬಕೆಟ್ ಬ್ಯಾಗ್: ಬಕೆಟ್ ಬ್ಯಾಗ್ ಬ್ಯಾಕ್ಪ್ಯಾಕ್ ಮತ್ತು ಪರ್ಸ್ ಎರಡರ ಮಿಶ್ರಣವಾಗಿದ್ದು, ಲೆದರ್ನಿಂದ ಇದನ್ನು ತಯಾರಿಸಲಾಗುತ್ತದೆ. ಬ್ಯಾಗ್ನನ್ನು ಮೇಲಗಡೆಯಿಂದ ತೆರಯಬಹುದಾಗಿದ್ದು, ಜೊತೆಗೆ ಭುಜದ ಮೇಲೆ ಹೊತ್ತುಕೊಳ್ಳಬಹುದಾಗಿದೆ. ಈ ಬ್ಯಾಗ್ ಹದಿಹರೆಯದವರಿಂದ ಹಿಡಿದು ವಯಸ್ಸಾದವರೂ ಹೆಚ್ಚಾಗಿ ಇಷ್ಟಪಡುತ್ತಾರೆ.
ಕಾಸ್ಮೆಟಿಕ್ ಬ್ಯಾಗ್: ಕಾಸ್ಮೆಟಿಕ್ ಬ್ಯಾಗ್ಗಳಲ್ಲಿ ಕೆಲವು ವಸ್ತುಗಳನ್ನು ಮಾತ್ರ ಇಡಬಹುದಾಗಿದ್ದು, ಹೊರಗಡೆ ಹೋಗುವಾಗ ಇದನ್ನು ತೆಗೆದುಕೊಂಡು ಹೋಗಬಹುದಾಗಿದೆ. ಈ ಬ್ಯಾಗ್ ನಿಮ್ಮ ಐಡಿ, ಹಣ ಮತ್ತು ಮೊಬೈಲ್ನನ್ನು ಇಟ್ಟುಕೊಳ್ಳಲು ಸಹಾಯಕವಾಗಿದೆ.
ಫ್ಯಾನಿ ಪ್ಯಾಕ್: ಫ್ಯಾನಿ ಪ್ಯಾಕ್ನಲ್ಲಿ ಹಲವು ಸೈಜ್ ಮತ್ತು ಡಿಸೈನ್ಗಳಿದ್ದು, ಇವು ನೋಡಲು ಬಹಳ ಆಕರ್ಷಿತವಾಗಿರುತ್ತದೆ. ಈ ಬ್ಯಾಗ್ನ ಬೆಲ್ಟ್ನನ್ನು ಭುಜದ ಮೇಲೆ ಹಾಕಿಕೊಂಡು ಸೊಂಟಕ್ಕೆ ಬರುವಂತೆ ಅಡ್ಜೆಸ್ಟ್ ಮಾಡಬಹುದಾಗಿದೆ. ಇದರಲ್ಲಿ ನಿಮಗೆ ಬೇಕಾದ ಅಗತ್ಯ ವಸ್ತುಗಳನ್ನು ಕೈಗಳ ಸಹಾಯವಿಲ್ಲದೆ ಹೊತ್ತುಕೊಂಡು ಆರಾಮವಾಗಿ ಶಾಪಿಂಗ್ ಮಾಡಬಹುದಾಗಿದೆ.
ಫೋನ್ ವಾಲೆಟ್: ಇದರಲ್ಲಿ ಸೆಲ್ ಫೋನ್ನನ್ನು ಇಟ್ಟುಕೊಳ್ಳಬಹುದಾಗಿದ್ದು, ಜೊತೆಗೆ ಕ್ರೆಡಿಟ್ ಕಾರ್ಡ್ ಮತ್ತು ಲೈಸನ್ಸ್ನಂತಹ ವಸ್ತುಗಳನನ್ನು ಇಟ್ಟುಕೊಳ್ಳಬಹುದಾಗಿದೆ. ಎಲ್ಲದರೂ ಅಲ್ಪಾವಧಿ ನೀವೆಲ್ಲದರೂ ಹೋಗಲು ಪ್ಲಾನ್ ಮಾಡಿದ್ದಲ್ಲಿ ಅಥವಾ ಯಾವುದಾದರೂ ವಸ್ತುಗಳನ್ನು ಖರೀದಿಸಲು ಹೋದಾಗ ಇದನ್ನು ಬಳಸಬಹುದಾಗಿದೆ. ಇದು ನೋಡಲು ಒಂದು ರೀತಿ ಪೌಂಚ್ ರೀತಿ ಇದ್ದು, ಬಹಳ ಸುಲಭವಾಗಿ ತೆರೆದು ಮುಚ್ಚಬಹುದಾಗಿದೆ.