ಮನಸೂರೆಗೊಳ್ಳುವ ಹಾಡು ಬಿಡುಗಡೆ ಮಾಡುವ ಮೂಲಕ ‘ಚೇಸ್’ ಸಿನಿಮಾ ಪ್ರಚಾರ ಕಾರ್ಯ ಆರಂಭಿಸಿದೆ. ‘ಚೇಸ್’ ಚಿತ್ರದ ಮನದ ಹೊಸಿಲ ಎಂಬ ಮೆಲೋಡಿ ಹಾಡು ಬಿಡುಗಡೆಯಾಗಿದೆ. ಕಳೆದ ವರ್ಷ ಪ್ರಾಮಿಸಿಂಗ್ ಟೀಸರ್ ಮೂಲಕ ‘ಚೇಸ್’ ಸಿನಿಮಾ ಸೌಂಡ್ ಮಾಡಿತ್ತು. ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದ್ದ ಚಿತ್ರತಂಡ ಇಂದು ಚಿತ್ರದ ಬಹು ನಿರೀಕ್ಷಿತ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದೆ.
ಕೇಳಲು ಇಂಪಾಗಿರುವ ಈ ಹಾಡಿಗೆ ವಿಜಯ್ ಪ್ರಕಾಶ್ ಹಾಗೂ ಮೊಹಮ್ಮದ್ ಮಕ್ಬುಲ್ ಮನ್ಸೂರ್ ದನಿಯಾಗಿದ್ದಾರೆ. ಕಾರ್ತಿಕ್ ಆಚಾರ್ಯ ಸಂಗೀತ ಸಂಯೋಜನೆ ಉಮೇಶ್ ಪಿಲಿಕುಡೆಲು ಸಾಹಿತ್ಯದಲ್ಲಿ ಮೂಡಿ ಬಂದಿರುವ ‘ಚೇಸ್’ ಸಿನಿಮಾದ ಮನದ ಹೊಸಿಲು ಹಾಡು ಎಲ್ಲರ ಗಮನ ಸೆಳೆಯುತ್ತಿದೆ.
Advertisement
Advertisement
ವಿಲೋಕ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಚೇಸ್ ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಶ್ವೇತಾ ಸಂಜೀವುಲು, ಸುಶಾಂತ್ ಪೂಜಾರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇಂದೊಂದು ಕ್ರೈಂ, ಥ್ರಿಲ್ಲರ್ ಸಬ್ಜೆಕ್ಟ್ ಚಿತ್ರವಾಗಿದ್ದು ಹೊಸ ಬಗೆಯ ನಿರೂಪಣೆ ಹಾಗೂ ತಾಂತ್ರಿಕತೆಗೆ ಹೆಚ್ಚು ಒತ್ತನ್ನು ಸಿನಿಮಾದಲ್ಲಿ ನೀಡಲಾಗಿದೆ.
Advertisement
Advertisement
ಪ್ರಮೋದ್ ಶೆಟ್ಟಿ, ಅರವಿಂದ್ ರಾವ್, ಸುಧಾ ಬೆಳವಾಡಿ, ರಾಜೇಶ್ ನಟರಂಗ, ಅರವಿಂದ್ ಬೋಳಾರ್, ರೆಹಮಾನ್ ಹಾಸನ್, ವೀಣಾ ಸುಂದರ್, ಸುಂದರ್, ಪ್ರಿಯಾ ಷಟಮರ್ಷನ್, ನಾಗಾರ್ಜುನ ಬಿ ರಾಜಶೇಖರ್, ಉಷಾ ಭಂಡಾರಿ, ಡಾ.ಕಿಂಗ್ ಮೋಹನ್ ಹೀಗೆ ಕಲಾವಿದರ ದೊಡ್ಡ ದಂಡೇ ‘ಚೇಸ್’ ತಾರಾಬಳಗದಲ್ಲಿದ್ದಾರೆ. ಮ್ಕಾಕ್ಸ್ ಎನ್ನುವ ನಾಯಿ ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದೆ.
ಸಿಂಪ್ಲಿ ಫನ್ ಮೀಡಿಯಾ ನೆಟ್ ವರ್ಕ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ನಿರ್ಮಾಪಕರು. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರು. ಮಂಗಳೂರು, ಬೆಂಗಳೂರು, ಕೊಚ್ಚಿ, ಹಿಮಾಚಲ ಪ್ರದೇಶದ ಕಲರ್ ಫುಲ್ ಲೋಕೇಷನ್ ಗಳಲ್ಲಿ ಚೇಸ್ ಸಿನಿಮಾ ಚಿತ್ರೀಕರಣಗೊಂಡಿದ್ದು, ಅನಂತ್ ರಾಜ್ ಅರಸ್ ಕ್ಯಾಮೆರಾ ನಿರ್ದೇಶಕರಾಗಿ ದುಡಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಚೇಸ್ ಚಿತ್ರಕ್ಕಿದೆ.