ಗದಗ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಪರದಾಡಿರುವ ದೃಶ್ಯ ಗದಗದ ಹೊಸ ಬಸ್ ನಿಲ್ದಾಣದಲ್ಲಿ ಕಂಡುಬಂದಿದೆ.
Advertisement
ನಗರದಿಂದ 6 ಕಿಲೋಮೀಟರ್ ದೂರದಲ್ಲಿರುವ ಜಿಮ್ಸ್ ನಸಿರ್ಂಗ್ ವಿದ್ಯಾರ್ಥಿನಿಯರು ಕಾಲೇಜ್ಗೆ ಹೋಗಲು ವಾಹನಗಳಿಲ್ಲದೇ ಪರದಾಡುತ್ತಿದ್ದಾರೆ. ಇಂದಿರಾ ಗಾಂಧಿ ಹಾಸ್ಟೆಲ್ನಿಂದ ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯರು ಬಸ್ ಇಲ್ಲದೆ ಪರದಾಡಿದರು.
Advertisement
Advertisement
ಆಟೋ ಮೊರೆ ಹೋಗಿದ್ದ ವಿದ್ಯಾರ್ಥಿನಿಯರು ದುಬಾರಿ ಚಾರ್ಜ್ ಮಾಡಿದ್ದಕ್ಕೆ ಮತ್ತೆ ಹಾಸ್ಟೆಲ್ಗೆ ತೆರಳಿದರು. ಕಾಲೇಜ್ಗೆ ಹೋಗಬೇಕಾದ ಅನಿವಾರ್ಯತೆ ಇದೆ. ಕೊರೊನಾ ಹಾಗೂ ಲಾಕ್ಡೌನ್ ನಿಂದ ಕಾಲೇಜ್ ಇಲ್ಲದೆ ತೊಂದರೆ ಅನುಭವಿಸಿದ್ದೇವೆ. ಈಗ ಬಸ್ ಬಂದ್, ಸ್ಟ್ರೈಕ್ ಅಂತ ಮತ್ತೆ ತೊಂದರೆ ಆಗುತ್ತಿದೆ. ಹೀಗಾದರೆ ಏನು ಮಾಡೋದು ಗೊತ್ತಾಗುತ್ತಿಲ್ಲ ಎಂದು ಮಾಧ್ಯಮದ ಬಳಿ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.
Advertisement