ಬಳ್ಳಾರಿ: ಕೊರೊನಾ ಮಾಹಾಮಾರಿಯ ನಾಗಾಲೋಟಕ್ಕೆ ಗಣಿನಾಡು ಬಳ್ಳಾರಿಯ ಜನತೆ ಬೆಚ್ಚಿ ಬಿದಿದ್ದಾರೆ. ಪ್ರತಿ ದಿನ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಸೋಂಕಿನಿಂದ ಸಾವನ್ನಪ್ಪುವ ಸಂಖ್ಯೆಯೂ ಕರಾಳ ದಾಖಲೆ ಬರೆಯುತ್ತಿದೆ. ಕೇವಲ 4 ದಿನಗಳಲ್ಲಿ ಸಾಲು ಸಾಲು ಹೆಣಗಳು ಬಿದ್ದಿದ್ದು, ಬರೋಬ್ಬರಿ 21 ಮಂದಿ ಬಲಿಯಾಗಿದ್ದಾರೆ. ಬಳ್ಳಾರಿಯಲ್ಲಿ ಕೊರೊನಾ ಸಾವಿನ ಸಂಖ್ಯೆ 29ಕ್ಕೇರಿದೆ.
Advertisement
ಜೂನ್ 27 ರಂದು 2, ಜೂನ್ 28 ರಂದು 4, ಜೂನ್ 29 ರಂದು 9 ಹಾಗೂ ಜೂನ್ 30 ರಂದು 6 ಸಾವನ್ನಪ್ಪಿದ್ದಾರೆ. ಹೀಗೆ ಕೇವಲ ನಾಲ್ಕೇ ನಾಲ್ಕು ದಿನಗಳಲ್ಲಿ ಬರೋಬ್ಬರಿ 21 ಜನ ಮಹಾಮಾರಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಬಿಟ್ರೆ ಬಳ್ಳಾರಿಯಲ್ಲೇ ಸೋಂಕಿಗೆ ಹೆಚ್ಚು ಮಂದಿ ಬಲಿಯಾಗಿದ್ದಾರೆ.
Advertisement
Advertisement
ವಿಕ್ಟೋರಿಯಾದಲ್ಲಿ 56, ವಿಮ್ಸ್ ನಲ್ಲಿ 21 ಸಾವು!
ಹೈದರಾಬಾದ್ ಕರ್ನಾಟಕ ಭಾಗದ ದೊಡ್ಡ ಆಸ್ಪತ್ರೆ ಅಂತಲೇ ಕರೆಸಿಕೊಳ್ಳುವ ವಿಮ್ಸ್ ಕೊರೊನಾದಿಂದ ಹೊಸ ಕಳಂಕ ಹೊತ್ತಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈವರೆಗೆ 56 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ನಂತರದ ಸ್ಥಾನ ವಿಮ್ಸ್ ಗೆ ಸಿಕ್ಕಿದೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಈವರೆಗೆ 21 ಮಂದಿ ಸೋಂಕಿತರು ಕೊನೆಯುಸಿರೆಳೆದಿದ್ದಾರೆ.
Advertisement
ವಿಮ್ಸ್ ಆಸ್ಪತ್ರೆ ಸದಾ ಒಂದಲ್ಲಾ ಒಂದು ರೀತಿಯಲ್ಲಿ ವಿವಾದ ಮೈ ಮೇಲೆ ಎಳೆದುಕೊಂಡು ಸುದ್ದಿಯಲ್ಲಿ ಇರುತ್ತೆ. ಸಾಮಾನ್ಯ ಸಮಯದಲ್ಲಿಯೇ ಸರಿಯಾದ ಚಿಕಿತ್ಸೆ ನೀಡದ ವಿಮ್ಸ್ ಕೊರೊನಾ ಟೈಮಲ್ಲಿ ಹೇಗೆ ಚಿಕಿತ್ಸೆ ನೀಡುತ್ತಿದೆ ಎಂಬ ಅನುವಾನವೂ ವ್ಯಕ್ತವಾಗಿದೆ. ಸರಿಯಾದ ಚಿಕಿತ್ಸೆ ಸಿಗದೆಯೇ ವಿಮ್ಸ್ನಲ್ಲಿ ಕೊರೊನಾ ಸಾವು ತನ್ನ ವಿರಾಟ ರೂಪ ತೋರುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಇದು ಬಳ್ಳಾರಿ ಜಿಲ್ಲಾಡಳಿತಕ್ಕೂ ದೊಡ್ಡ ತಲೆನೋವಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ವಿಮ್ಸ್ ನಿರ್ದೇಶಕರ ಜೊತೆ ಹಿರಿಯ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ. ಆಸ್ಪತ್ರೆ ನಿರ್ಲಕ್ಷ್ಯವೇ ಬಳ್ಳಾರಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.