ನವದೆಹಲಿ: ಭಾರತದಲ್ಲಿನ ಕಾನೂನುಗಳನ್ನು ಪಾಲಿಸುತ್ತಿದ್ದೇವೆ. ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಭಾರತದ ಭದ್ರತೆ, ಸಮಗ್ರತೆಗೆ ದಕ್ಕೆ ಉಂಟು ಮಾಡುವುದಿಲ್ಲ ಎಂದು ಟಿಕ್ ಟಾಕ್ ಸ್ಪಷ್ಟನೆ ನೀಡಿದೆ.
ಸೋಮವಾರ ಭಾರತದಲ್ಲಿ ಟಿಕ್ಟಾಕ್ ಸೇರಿ 59 ಚೀನಾ ಆ್ಯಪ್ಗಳನ್ನು ಬ್ಯಾನ್ ಮಾಡಿದ ಬಳಿಕ ಇಂದು ಟಿಕ್ಟಾಕ್ ಮೊದಲ ಪ್ರತಿಕ್ರಿಯೆ ಪ್ರಕಟಿಸಿದೆ. ಕೇಂದ್ರ ಸರ್ಕಾರದ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಲಿದ್ದೇವೆ ಎಂದು ಹೇಳಿದೆ.
Advertisement
— TikTok India (@TikTok_IN) June 30, 2020
Advertisement
ಸರ್ಕಾರ ಅವಕಾಶ ನೀಡಿದರೆ ನಾವು ಸ್ಪಷ್ಟೀಕರಣ ನೀಡಲಿದ್ದೇವೆ ಭಾರತದಲ್ಲಿನ ಕಾನೂನುಗಳನ್ನು ಪಾಲಿಸುತ್ತಿದ್ದೇವೆ. ಬಳಕೆದಾರರ ವೈಯಕ್ತಿಕ ಮಾಹಿತಿ ಗೌಪ್ಯವಾಗಿಟ್ಟಿದೆ. ಚೀನಾ ಸೇರಿದಂತೆ ಯಾವುದೇ ವಿದೇಶಗಳಿಗೆ ಮಾಹಿತಿ ಹಂಚಿಕೊಂಡಿಲ್ಲ ಮುಂದೆಯೂ ಮಾಹಿತಿ ಹಂಚಿಕೊಳ್ಳವುದಿಲ್ಲ ಎಂದು ಭರವಸೆ ನೀಡಿದೆ.
Advertisement
Advertisement
ನಾವು ಬಳಕೆದಾರರ ಮಾಹಿತಿಗೆ ಮತ್ತು ಭಾರತದ ಸಮಗ್ರತೆಗೆ ಹೆಚ್ಚು ಆದ್ಯತೆ ನೀಡುತ್ತೇವೆ. ಹದಿನಾಲ್ಕು ಭಾಷೆಯಲ್ಲಿ ನೂರಾರು ಮಿಲಿಯನ್ ಬಳಕೆದಾರನ್ನು ಟಿಕ್ಟಾಕ್ ಹೊಂದಿದೆ. ಹಲವು ಬಗೆಗೆ ಪ್ರತಿಭೆಗಳಿಗೆ ಟಿಕ್ಟಾಕ್ ಜೀವನ ಕಲ್ಪಿಸಿದೆ. ಟಿಕ್ಟಾಕ್ ಬ್ಯಾನ್ ನಿಂದ ಅವರ ಜೀವನಕ್ಕೆ ತೊಂದರೆಯಾಗಬಹುದು. ಟಿಕ್ಟಾಕ್ ಬ್ಯಾನ್ ಪರಿಶೀಲಿಸುವಂತೆ ಭಾರತದ ಟಿಕ್ಟಾಕ್ ಮುಖ್ಯಸ್ಥ ನಿಖಿಲ್ ಗಾಂಧಿ ಮನವಿ ಮಾಡಿದ್ದಾರೆ.
2017ರಿಂದ ಬಳಕೆಗೆ ಬಂದ ಟಿಕ್ಟಾಕ್ ಬಹಳ ಜನಪ್ರಿಯವಾಗಿತ್ತು. ಚೀನಾವನ್ನು ಹೊರತು ಪಡಿಸಿದರೇ ಟಿಕ್ಟಾಕ್ ಅನ್ನು ಭಾರತೀಯರೇ ಹೆಚ್ಚು ಬಳಸುತ್ತಿದ್ದರು. ನೋಡ ನೋಡುತ್ತಲೇ ಟಿಕ್ಟಾಕ್ 2006ರಲ್ಲಿ ಬಂದ ಫೇಸ್ಬುಕ್ಗೆ ಪ್ರತಿಸ್ಫರ್ಧಿಯಾಗಿ ಬೆಳದಿತ್ತು. ಮೊಬೈಲ್ ಅನಲಿಟಿಕ್ಸ್ ಕಂಪನಿ ಆಪ್ ಅನ್ನಿ ಪ್ರಕಾರ 2019ರಲ್ಲಿ ಭಾರತೀಯರು ಸುಮಾರು 555 ಕೋಟಿ ಗಂಟೆ ಟಿಕ್ಟಾಕ್ ನೋಡಿದ್ದರು.
ಭಾರತದಲ್ಲಿ ಜನ ಸಂಖ್ಯೆ ಜಾಸ್ತಿ ಇರುವ ಕಾರಣ ಚೀನಾದ ಟಿಕ್ಟಾಕ್ಗೆ ಭಾರತವೇ ಅದಾಯ ಮೂಲವಾಗಿತ್ತು. 2019ರ ಡಿಸೆಂಬರ್ ವೇಳೆಗೆ ಭಾರತದಲ್ಲಿ ಒಟ್ಟು, 8.1 ಕೋಟಿ ಜನ ಟಿಕ್ಟಾಕ್ ಬಳಕೆದಾದರು ಇದ್ದರು. ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ ಟಿಕ್ಟಾಕ್ 25 ಕೋಟಿ ರೂ. ಅದಾಯಗಳಿಸಿತ್ತು. ಈಗಿನ ಜುಲೈ-ಸೆಪ್ಟಂಬರ್ ತ್ರೈಮಾಸಿಕಕ್ಕೆ 100 ಕೋಟಿ ಅದಾಯ ಗಳಿಸುವ ಯೋಜನೆಯಲ್ಲಿತ್ತು. ಈಗ ಕೇಂದ್ರ ಸರ್ಕಾರ ಆ್ಯಪ್ ಅನ್ನು ಬಾನ್ ಮಾಡಿ ಚೀನಾಗೆ ಶಾಕ್ ನೀಡಿದೆ.