ಮುಂಬೈ: ಮಾರಕಾಸ್ತ್ರಗಳನ್ನು ಮುಂದಿಟ್ಟುಕೊಂಡು ಹುಟ್ಟುಹಬ್ಬ ಆಚರಿಸುತ್ತಿದ್ದ ಹಿನ್ನೆಲೆ ಪುರಸಭೆಯ ಮುಖ್ಯಸ್ಥ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಬುಲ್ಖಾನಾ ಜಿಲ್ಲೆಯಲ್ಲಿ ನಡೆದಿದೆ.
ಬುಧವಾರ ಸಂಜೆ ಪುರಸಭೆಯ ಮುಖ್ಯಸ್ಥ ಹಾಜಿ ರಶೀದ್ ಖಾನ್ ಜಮದಾರ್ರವರ ಹುಟ್ಟುಹಬ್ಬವನ್ನು ಶಾಲಾ ಮೈದಾನವೊಂದರಲ್ಲಿ ಆಚರಿಸಲಾಗಿತ್ತು. ಬರ್ತ್ ಡೇಯಲ್ಲಿ ಸುಮಾರು 40 ಮಂದಿ ಪಾಲ್ಗೊಂಡಿದ್ದು, ಕೆಲವರು ಮಾರಕಾಸ್ತ್ರಗಳನ್ನು ಹಿಡಿದು ನೃತ್ಯ ಮಾಡಿದ್ದಾರೆ. ಈ ವಿಚಾರವಾಗಿ ಖಚಿತ ಮಾಹಿತಿ ದೊರೆತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬರ್ತ್ ಡೇ ಪಾರ್ಟಿಯನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದಾರೆ.
Advertisement
Advertisement
ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಕಾರಣ ಹಾಜಿ ರಶೀದ್ ಖಾನ್ ಜಮದಾರ್ ಸೇರಿದಂತೆ ಆರು ಮಂದಿಯನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅರವಿಂದ್ ಚಾವ್ರಿಯಾ ತಿಳಿಸಿದ್ದಾರೆ.
Advertisement
Advertisement
ಇದೀಗ ನ್ಯಾಯಾಲಯವು ಫೆಬ್ರವರಿ 15ರವರೆಗೂ ಎಲ್ಲರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಇತ್ತೀಚಿನ ದಿನಗಳಲ್ಲಿ ಬರ್ತ್ ಡೇ ವೇಳೆ ಕತ್ತಿಗಳನ್ನು ಕೇಕ್ ಕತ್ತರಿಸಲು ಬಳಸುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸರು ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.