ಹಾವೇರಿ: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚು ವ್ಯಾಪಿಸುತ್ತಿದೆ. ಅದರೆ ಇಷ್ಟೆಲ್ಲ ಭಯ ಇದ್ದರೂ ಬಫರ್ ಝೋನ್ನಲ್ಲಿ ಭರ್ಜರಿಯಾಗಿ ಮಟನ್ ಮಾರಾಟ ಮಾಡಲಾಗಿದೆ.
ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ಬಫರ್ ಝೋನ್ನಲ್ಲಿ ಎಗ್ಗಿಲ್ಲದೆ ಮಟನ್ ಮಾರಾಟ ಮಾಡಲಾಗಿದೆ. ಹಾನಗಲ್ ತಾಲೂಕಿನಲ್ಲಿ 30 ಪ್ರಕರಣಗಳು ಪತ್ತೆಯಾಗಿದ್ದು, ಇಷ್ಟಾದರೂ ಜನ ಎಚ್ಚೆತ್ತುಕೊಂಡಿಲ್ಲ. ಮಾತ್ರವಲ್ಲದೆ ಇದೇ ಗ್ರಾಮದ ಕೆಸಳಗಿನ ಓಣಿಯಲ್ಲಿ ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನು ಈಗಾಗಲೇ ಸೀಲ್ಡೌನ್ ಮಾಡಲಾಗಿದ್ದು, ಸುತ್ತಲಿನ 200 ಮೀಟರ್ ಪ್ರದೇಶವನ್ನು ಬಫರ್ ಝೋನ್ ಎಂದು ಜಿಲ್ಲಾಡಳಿತ ಗುರುತಿಸಿದೆ.
Advertisement
Advertisement
ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್ ಎಂದು ಭರ್ಜರಿಯಾಗಿ ಮಟನ್ ಮಾರಾಟ ಮಾಡಲಾಗಿದೆ. ಮಟನ್ ಮಾರಾಟ ಬಂದ್ ಮಾಡುವಂತೆ ಸ್ಥಳೀಯರು ಹೇಳಿದ್ದಾರೆ. ಇಷ್ಟಾದರೂ ಕೇಳದ ಅಂಗಡಿ ಮಾಲೀಕ ಸ್ಥಳೀಯರ ಜೊತೆ ಜಟಾಪಟಿ ನಡೆಸಿದ್ದಾನೆ. ಮಟನ್ ಮಾರಾಟ ಬಂದ್ ಮಾಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.