– ಬಿಕರಿಗೆ ಇದೆ ಡೆತ್ ಸರ್ಟಿಫಿಕೇಟ್
– ಆನ್ಲೈನ್ನಲ್ಲಿ ಆಪಾಯಿನ್ಮೆಂಟ್ ಫಿಕ್ಸ್, ಶವ ಸಂಸ್ಕಾರಕ್ಕೆ ಟೈಮೂ ಫಿಕ್ಸ್
ಬೆಂಗಳೂರು: ಬೆಡ್ ಬ್ಲಾಕಿಂಗ್, ರೆಮ್ಡಿಸಿವಿರ್, ಅಂಬುಲೆನ್ಸ್ ದಂಧೆ ಬಳಿಕ ಇದೀಗ ಅಂತ್ಯಸಂಸ್ಕಾರ ಹಾಗೂ ಡೆತ್ ಸರ್ಟಿಫಿಕೇಟ್ ಡೀಲ್ ಬೆಳಕಿಗೆ ಬಂದ್ದಿದ್ದು, ಒಂದು ಡೆತ್ ಸರ್ಟಿಫಿಕೇಟ್ ನೀಡಲು ಬರೋಬ್ಬರಿ 20-30 ಸಾವಿರ ರೂ.ಗಳನ್ನು ಖದೀಮರು ಪೀಕುತ್ತಿದ್ದಾರೆ.
Advertisement
ಈ ಕುರಿತು ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ನಲ್ಲಿ ಬಹಿರಂಗವಾಗಿದ್ದು, ನಗರದ ಶ್ರೀರಾಂಪುರದ ಹರಿಶ್ಚಂದ್ರ ಘಾಟ್ನಲ್ಲಿ ಹೆಣಗಳ ಮೇಲೆ ಡೀಲಿಂಗ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕೋವಿಡ್ ಆಗ್ಲಿ, ನಾನ್ ಕೋವಿಡ್ ಆಗ್ಲಿ ಕಾಸು ಕೊಟ್ರೆ ಶವಕ್ಕೆ ಸಂಸ್ಕಾರ ಮಾಡುತ್ತರೆ. ಹರಿಶ್ಚಂದ್ರ ಘಾಟ್ ಚಿತಾಗಾರದ ಉಸ್ತುವಾರಿ ನಾಗರಾಜ್ ಈ ದಂಧೆ ನಡೆಸುತ್ತಿದ್ದು, ಅಂಬುಲೆನ್ಸ್ ಡ್ರೈವರ್ ಜೊತೆ ಮಾತನಾಡಿಸಿ, ಡೀಲ್ ಕುದುರಿಸುತ್ತಾನೆ. 1 ಶವ ಸಂಸ್ಕಾರಕ್ಕೆ ಖದೀಮರು ಬರೋಬ್ಬರಿ 20-30 ಸಾವಿರ ಹಣ ಪೀಕುತ್ತಾರೆ. ಡೆತ್ ಸರ್ಟಿಫಿಕೆಟ್, ಅಂಬುಲೆನ್ಸ್ ಹಾಗೂ ಶವ ಸಂಸ್ಕಾರ ಜಾಗಕ್ಕೆ ಸೇರಿ ಸಾವಿರಾರು ರೂ. ವಸೂಲಿ ಮಾಡುತ್ತಿದ್ದಾರೆ.
Advertisement
Advertisement
ಇನ್ನೂ ಅಚ್ಚರಿ ಸಂಗತಿ ಎಂದರೆ ಬದುಕಿದ್ದವರ ಹೆಸರಲ್ಲೇ ಸಾವಿನ ಸರ್ಟಿಫಿಕೇಟ್ ರೆಡಿಯಾಗುತ್ತಿದೆ. ಜೀವಂತವಾಗಿರುವ ಮಾಜಿ ಕಾರ್ಪೊರೇಟರ್ ಹೆಸರಲ್ಲಿ ಇದೀಗ ಡೆತ್ ಸರ್ಟಿಫಿಕೇಟ್ ನೀಡಿದ್ದು, ಬಿಜೆಪಿ ಮಾಜಿ ಮಹಿಳಾ ಕಾರ್ಪೊರೇಟರ್ ಮೇಲೆ ಡೆತ್ ಸರ್ಟಿಫಿಕೇಟ್ ತಯಾರಿಸಲಾಗಿದೆ. ಚಿತಗಾರದ ಸಿಬ್ಬಂದಿ, ಅಂಬುಲೆನ್ಸ್ ಡ್ರೈವರ್ಸ್ ಸೇರಿ ಈ ಮೆಗಾ ಡೀಲಿಂಗ್ ನಡೆಸಿದ್ದಾರೆ. ಆಧಾರ್ ಕಾರ್ಡ್ ತೋರಿಸಿದರೆ ಸಾಕು ಐದೇ ನಿಮಿಷದಲ್ಲಿ ಡೆತ್ ಸರ್ಟಿಫಿಕೇಟ್ ರೆಡಿಯಾಗುತ್ತದೆ. ಖಾಸಗಿ ಆಸ್ಪತ್ರೆ ಜೊತೆ ಸ್ಮಶಾನದ ಸಿಬ್ಬಂದಿ ಡೀಲ್ ಮಾಡಿಕೊಂಡಿದ್ದು, ಖಾಸಗಿ ಆಸ್ಪತ್ರೆಯಿಂದ ನೇರವಾಗಿ ಸ್ಮಶಾನದ ಸಿಬ್ಬಂದಿಗೆ ಡೆತ್ ಸರ್ಟಿಫಿಕೇಟ್ ಸಿಗುತ್ತದೆ. ಅಂಬುಲೆನ್ಸ್ ಡ್ರೈವರೇ ಸಾವಿನ ಸರ್ಟಿಫಿಕೇಟ್ ಕೊಡಿಸುತ್ತಾನೆ.
Advertisement
ಡೆತ್ ಸರ್ಟಿಫಿಕೇಟ್ ಡೀಲ್ ರೋಚಕವಾಗಿದ್ದು, ಈ ಡಾಕ್ಟರ್ ಡೆಡ್ ಬಾಡಿ ನೋಡದೆ, ಮನೆಗೂ ವಿಸಿಟ್ ಮಾಡದೆ, ಆಧಾರ್ ಕಾರ್ಡ್, ಫೋನ್ ನಂಬರ್ ಕೊಟ್ಟರೆ ಸಾಕು ಬದುಕಿದ್ದವರಿಗೂ ಸುಲಭವಾಗೇ ಡೆತ್ ಸರ್ಟಿಫಿಕೇಟ್ ಕೊಡ್ತಾರೆ. ಸ್ಟಿಂಗ್ ಟೀಮ್ ಜೊತೆ 10 ನಿಮಿಷ ಡೀಲ್ ಟಾಕ್ ನಡೆದಿದ್ದು, ಡೆತ್ ಸರ್ಟಿಫಿಕೇಟ್ ರೆಡಿ, ಎಲ್ಲಿದ್ದೀರಿ? ಬನ್ನಿ ಸರ್ ಬೇಗ ಎಂದು ಹರಿಶ್ಚಂದ್ರ ಘಾಟ್ ಒಳಗೆ ಅಂಬುಲೆನ್ಸ್ ಡ್ರೈವರ್ನನ್ನು ಡಾಕ್ಟರ್ ಕರೆಸಿಕೊಂಡಿದ್ದು, ಘೋರಿಗಳ ಮಧ್ಯೆಕ್ಕೆ ಡೆತ್ ಸರ್ಟಿಫಿಕೇಟ್ ನೀಡಿದ್ದಾರೆ.
ಬಳಿಕ ಬಿಜೆಪಿಯ ಜೀವಂತ ಮಹಿಳಾ ಮಾಜಿ ಕಾರ್ಪೋರೆಟರ್ ಭಾಗ್ಯಲಕ್ಷ್ಮಿ ಅವರ ಡೆತ್ ಸರ್ಟಿಫಿಕೇಟ್ ನ್ನು ಅಂಬುಲೆನ್ಸ್ ಚಾಲಕ ಪಡೆದಿದ್ದಾರೆ. ಸರ್ಟಿಫಿಕೇಟ್ ನಲ್ಲಿ ರಾಜಾಜಿನಗರದ ಹಾಸ್ಪಿಟಲ್ ಕೇರ್ ಎಂಬ ಆಸ್ಪತ್ರೆಯ ಸೀಲ್, ಸಿಗ್ನೆಚರ್ ಇತ್ತು. ಹೀಗಾಗಿ ಡೆತ್ ಸರ್ಟಿಫಿಕೇಟ್ ಕೊಡುವ ಹಾಸ್ಪಿಟಲ್ ಕೇರ್ ಎಂಬ ಖಾಸಗಿ ಆಸ್ಪತ್ರೆಯೂ ಕೂಡ ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿದೆಯಾ ಎಂಬ ಅನುಮಾನಗಳು ಕಾಡುತ್ತಿವೆ.
ಡೆತ್ ಸರ್ಟಿಫಿಕೇಟ್ಗೆ ನಿಯಮ ಏನು?
– ಫಾರ್ಮ್ 4ಎ ಮೂಲಕ ಡೆತ್ ಸರ್ಟಿಫಿಕೇಟ್ ಕೊಡಲು ಹೆಲ್ತ್ ಆಫೀರ್ಸ್ಗಳಿಗೆ ಅಧಿಕಾರ (ಮೆಡಿಕಲ್ ಆಫಿಸರ್ ಕೊಡುವ ಪತ್ರ)
– ಡೆತ್ ಸರ್ಟಿಫಿಕೇಟ್ ಕೊಡುವಾಗ, ಸಾವಿನ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು
– ಮೃತ ವ್ಯಕ್ತಿಯ ಹಾರ್ಟ್ಬೀಟ್, ಪಲ್ಸ್ ರೇಟ್, ಇಸಿಜಿ ಟೆಸ್ಟ್ ಮಾಡ್ಬೇಕು
– ವ್ಯಕ್ತಿ ಸಾವನ್ನಪ್ಪಿದ್ದರೆ ಕಣ್ಣುಗುಡ್ಡೆ ಅಗಲ ಆಗಿರುತ್ತೆ, ಹಾರ್ಟ್ ಪಲ್ಸ್ ಶೂನ್ಯ ವಾಗಿರುತ್ತೆ, ಇಸಿಜಿ ಟೆಸ್ಟ್ನಲ್ಲಿ ಖಾಲಿ (ಫ್ಲಾಟ್ ಲೈನ್ಸ್ ಬಂದಿರುತ್ತೆ) ಖಾತರಿ ಪಡಿಸಿಕೊಳ್ಳಬೇಕು
– ಈ ಎಲ್ಲಾ ಟೆಸ್ಟ್ ಬಳಿಕವಷ್ಟೇ ಡೆತ್ ಕನ್ಫರ್ಮ್ ಆಗಬೇಕು
– ಮೃತ ವ್ಯಕ್ತಿಯ ಕುಟುಂಬ, ಆಸ್ಪತ್ರೆಗೆ ಒಂದೊಂದು ಸರ್ಟಿಫಿಕೇಟ್ ರವಾನೆ