– 2+3+4 ಫಾರ್ಮುಲಾ ರಿವೀಲ್ ಆಗುತ್ತಾ?
ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಸೋದರ ಸತೀಶ್ ಜಾರಕಿಹೊಳಿ ಮಂಗಳವಾರ ಮಾತನಾಡಿ ಕೆಲ ಸಲಹೆಗಳನ್ನ ನೀಡಿದ್ದಾರೆ. ಸೋದರನ ಸಲಹೆಗೆ ರಮೇಶ್ ಜಾರಕಿಹೊಳಿ ಸಹ ಓಕೆ ಅಂದಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಮಂಗಳವಾರ ಸೋದರನನ್ನು ಸತೀಶ್ ಜಾರಕಿಹೊಳಿ ಭೇಟಿ ಮಾಡಿ ಸುಮಾರು 30 ನಿಮಿಷಕ್ಕೂ ಅಧಿಕ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಹೇಳಿರುವ 2+3+4ರ ಫಾರ್ಮುಲಾದಲ್ಲಿರುವ ವ್ಯಕ್ತಿಗಳ ಹೆಸರನ್ನ ಹೇಳಿಬಿಡು. ಈ ವಿಷಯದಲ್ಲಿ ಬಚ್ಚಿಡೋದಕ್ಕಿಂತ ಬಿಚ್ಚಿಡೋದು ಉತ್ತಮ. ಅದರಲ್ಲೂ ಆ ಮಹಾನ್ ನಾಯಕನ ಹೆಸರನ್ನ ಬಹಿರಂಗಪಡಿಸಿದ್ರೆ ಒಳಿತು ಎಂದು ಸತೀಶ್ ಜಾರಕಿಹೊಳಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಸೋದರನ ಸಲಹೆಗೆ ರಮೇಶ್ ಜಾರಕಿಹೊಳಿ ಸಹ ಓಕೆ ಎಂದಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಒಂದು ವೇಳೆ ಸತೀಶ್ ಜಾರಕಿಹೊಳಿ ಸಲಹೆ ಮೇರೆಗೆ ರಮೇಶ್ ಜಾರಕಿಹೊಳಿ, ಮಹಾನ್ ನಾಯಕ ಮತ್ತು 2+3+4 ಫಾರ್ಮುಲಾ ರಿವೀಲ್ ಮಾಡಿದ್ರೆ ರಾಜ್ಯ ರಾಜಕೀಯದಲ್ಲಿ ಸಂಚಲನವೇ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.
Advertisement
ಸಿಡಿ ಹಿಂದೆ ಕಾಂಗ್ರೆಸ್ ಕುತಂತ್ರ: ನಮ್ಮ ಜೊತೆ ಹಲವರು ಕೋರ್ಟಿಗೆ ಬರಲು ಸಿದ್ಧರಿದ್ರು. ಆದ್ರೆ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಹಿಂದೆ ಸರಿದ್ರು. ನಾನು 20 ವರ್ಷ ಕಾಂಗ್ರೆಸ್ ನಲ್ಲಿದ್ದು ಬಂದಿದ್ದೇನೆ. ಇವರ ಅನೈತಿಕತೆ ಏನು ಅನ್ನೋದು ರಾಜ್ಯಕ್ಕೂ ಮತ್ತು ನನಗೂ ಗೊತ್ತು. ಅಸೆಂಬ್ಲಿಯಲ್ಲಿ ನಮ್ಮ ವಿರುದ್ಧ ಎಷ್ಟು ಮಾತನಾಡಿದ್ರೂ ಗೊತ್ತಿಲ್ವಾ? ಆದ್ರೆ ಅನೈತಿಕ ರಾಜಕಾರಣಕ್ಕೆ ಮುಂದಾಗಿದ್ದಕ್ಕೆ ಕೋರ್ಟ್ ರಕ್ಷಣೆ ಪಡೆದಿದ್ದೇವೆ. ನೂರಕ್ಕೆ ನೂರರಷ್ಟು ಈ ಮನೆಹಾಳು ಕೆಲಸವನ್ನ ಕಾಂಗ್ರೆಸ್ನವರೇ ಮಾಡಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಆರೋಪಿಸಿದ್ದಾರೆ. ಇದನ್ನೂ ಓದಿ: ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು: ಕೆಪಿಸಿಸಿ ವಕ್ತಾರ ಏಣಗಿ
Advertisement
ಯುವತಿ ವಿಚಾರಣೆಗೆ ಖಾಕಿ ಹಿಂದೇಟು?: ಪೊಲೀಸರು ಯುವತಿ ಹೆಸರು ಮತ್ತು ವಿಳಾಸವನ್ನ ಪತ್ತೆ ಹೆಚ್ಚಿದ್ದಾರೆ. ಅಜ್ಞಾತ ಸ್ಥಳದಲ್ಲಿರುವ ಯುವತಿಯ ಮಾಹಿತಿಯೂ ಪೊಲೀಸರ ಬಳಿ ಇದೆ ಎನ್ನಲಾಗ್ತಿದೆ. ಸಿಡಿ ರಿಲೀಸ್ ಗೊಂಡು ಇಷ್ಟು ದಿನವಾದ್ರೂ ಪೊಲೀಸರು ಮಾತ್ರ ಯುವತಿಯ ವಿಚಾರಣೆಗೆ ಹಿಂದೇಟು ಹಾಕುತ್ತಿರುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಕೋರ್ಟ್ ಮೊರೆ ಹೋದ 6 ಮಂದಿ ಸಚಿವರು – ಲಿಂಬಾವಳಿಯಿಂದ ನಡ್ಡಾ ಮಾಹಿತಿ ಸಂಗ್ರಹ
ಯುವತಿಯ ಮಾಹಿತಿಯನ್ನು ಕಲೆ ಹಾಕಿರೋ ಪೊಲೀಸರು ಪ್ರಾಥಮಿಕ ತನಿಖಾ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿದೆ. ಯುವತಿಯ ವಿಚಾರಣೆಗೆ ಸರ್ಕಾರದ ಅನುಮತಿ ಕೇಳಿರುವ ಪೊಲೀಸರು ಆದೇಶಕ್ಕಾಗಿ ಕಾಯುತ್ತಿದ್ದಾರೆ. ಆದ್ರೆ ಸಿಡಿ ಪ್ರಕರಣದಲ್ಲಿ ಸರ್ಕಾರಕ್ಕೆ ಸ್ಪಷ್ಟತೆ ಸಿಗದ ಹಿನ್ನೆಲೆ ಯಾವುದೇ ಆದೇಶ ನೀಡಿಲ್ಲ. ಈ ಹಿನ್ನೆಲೆ ಯುವತಿ ವಿಚಾರಣೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಸಿಡಿ ಹಿಂದೆ ಬಿಜೆಪಿ, ಕಾಂಗ್ರೆಸ್ ನಾಯಕರ ಕೈವಾಡ – ಇಬ್ಬರ ಬಗ್ಗೆ ಯತ್ನಾಳ್ ಬಾಂಬ್ – ರಾಜ್ಯದಲ್ಲಿರುವುದು ಬಿಜೆಪಿ, ಕಾಂಗ್ರೆಸ್ ಸರ್ಕಾರ
ಸಿಡಿ ಬಗ್ಗೆ ಯತ್ನಾಳ್ ಬಾಂಬ್: ಸಿಡಿ ಹಿಂದೆ ಎರಡು ಪಕ್ಷದ ಇಬ್ಬರು ನಾಯಕರಿದ್ದಾರೆ. ಒಬ್ಬರು ಕಾಂಗ್ರೆಸ್ಸಿನವರು, ಇನ್ನೊಬ್ಬರು ಬಿಜೆಪಿಯವರು. ಇಬ್ಬರು ಸಮ್ಮಿಶ್ರವಾಗಿ ಮಾಡುತ್ತಿದ್ದಾರೆ. ಈ ಸರ್ಕಾರವೂ ಕಾಂಗ್ರೆಸ್, ಬಿಜೆಪಿ ಸಮ್ಮಿಶ್ರ ಸರ್ಕಾರ ಎಂದು ಶಾಸಕಬಸನ ಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಇದನ್ನೂ ಓದಿ: ನೂರಕ್ಕೆ ನೂರರಷ್ಟು ಮನೆ ಹಾಳು ಕೆಲಸ ಮಾಡಿದ್ದು ಕಾಂಗ್ರೆಸ್: ಎಸ್.ಟಿ.ಸೋಮಶೇಖರ್ ಆರೋಪ
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಿಡಿ ಪ್ರಕರಣದಲ್ಲಿ ಸಂತ್ರಸ್ತರು ಯಾರೂ ಇಲ್ಲ ಸಂತ್ರಸ್ತೆ ಅಂತ ಇದ್ದರೆ ಅದು ದೆಹಲಿಯ ನಿರ್ಭಯ ಪ್ರಕರಣದ ಯುವತಿ ಮಾತ್ರ. ಇವರು ಹಲ್ಲು ಕಿಸಿದು ಮಾತನಾಡುತ್ತಾರೆ. ಸಿಡಿಯಲ್ಲಿ ಇರುವ ಇಬ್ಬರು ಸುಖ ಪುರುಷರೇ ಎಂದಿದ್ದಾರೆ.