ಮುಂಬೈ: ಇತ್ತೀಚೆಗೆ ಬೀದಿ ಬದಿಯಲ್ಲಿ ದೋಸೆಯನ್ನು ಮೇಲಕ್ಕೆ ಹಾರಿಸಿ ತಯಾರಿಸಿದ ವೀಡಿಯೋವನ್ನು ಎಲ್ಲರು ನೋಡಿರಬಹುದು. ಆದರೆ ಮುಂಬೈನ ಬೋರಾ ಸ್ಟ್ರೀಟ್ನಲ್ಲಿ ವ್ಯಕ್ತಿಯೋರ್ವ ವಡಾಪಾವ್ನನ್ನು ಮೇಲಕ್ಕೆ ಗಾಳಿಯಲ್ಲಿ ಹಾರಿಸಿ ತಯಾರಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
Advertisement
ವೀಡಿಯೋದಲ್ಲಿ ಕಾಣಿಸುವ ರಸ್ತೆ ಬದಿಯ ಈ ಅಂಗಡಿ ಸುಮಾರು 60 ವರ್ಷ ಹಳೆಯದಾಗಿದ್ದು, ದೋಸೆಯನ್ನು ಮಾರುವ ರಘು ಎಂಬವರು ವಡಾಪಾವ್ನನ್ನು ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲದೆ ದೋಸೆ ಜೊತೆ ಇಡ್ಲಿ, ವಡೆ, ಚೀಸ್ ಮತ್ತು ಮಸಾಲ ವಡಾಪಾವ್ ಸೇರಿದಂತೆ ಇತರ ತಿಂಡಿಗಳನ್ನು ಕೂಡ ತಯಾರಿಸುತ್ತಾರೆ.
Advertisement
ಈ ವೀಡಿಯೋವನ್ನು ಆಮ್ಚಿ ಮುಂಬೈ ಎಂಬ ಆಹಾರ ವ್ಲಾಗ್ಗರ್ ಎಂಬ ಯೂಟ್ಯೂಬ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸುಮಾರು 2 ಲಕ್ಷ ವಿವ್ಸ್ ಪಡೆದುಕೊಂಡಿದೆ.
Advertisement
Advertisement
ವೀಡಿಯೋದಲ್ಲಿ ವ್ಯಕ್ತಿ ಮಸಾಲ ವಡಾಪಾವ್ ಮಾಡುತ್ತಿದ್ದು, ಪ್ಯಾನ್ಗೆ ಬೆಣ್ಣೆ ಸವರಿ, ಪಾವ್ನನ್ನು ಮಸಾಲ ಜೊತೆ ಪ್ರೈ ಮಾಡುತ್ತಾರೆ. ಬಳಿಕ ಕೆಲವೇ ಸೆಕೆಂಡುಗಳಲ್ಲಿ ಒಂದು ಕೈನಲ್ಲಿ ಉದ್ದದ ಹಳ್ಳೆ ಹಿಡಿದು ಗಾಳಿಯಲ್ಲಿ ವಡೆಯನ್ನು ಹಾರಿಸಿ ಮತ್ತೊಂದು ಕೈನಲ್ಲಿ ಹಿಡಿಯುತ್ತಾನೆ.
ರಘು ತಯಾರಿಸುವ ಚೀಸ್ ವಡಾಪಾವ್ ಹಾಗೂ ಮಸಾಲ ವಡಾಪಾವ್ ಒಂದರ ಬೆಲೆ 40 ರೂ ಆಗಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೋಡಲು ವೀಡಿಯೋ ಹಾಸ್ಯಮಯವಾಗಿ ಕಂಡರೂ ವಡಾಪಾವ್ ಸಖತ್ ಟೆಸ್ಟಿಯಾಗಿದೆ ಎಂದು ಕರೆಯಲಾಗಿದೆ.